Advertisement

ರಾಜಕೀಯ ಬಣ್ಣ ಪಡೆದ ಸಿಬಿಐ ವಿವಾದ: ಸುಪ್ರೀಂ ಕುತೂಹಲ

12:30 AM Feb 05, 2019 | |

ಹೊಸದಿಲ್ಲಿ/ಕೋಲ್ಕತಾ: ಕೋಲ್ಕತಾ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ರನ್ನು ವಿಚಾರಣೆ ನಡೆಸಲು ಸಿಬಿಐ ನಡೆಸಿದ ಪ್ರಯತ್ನದ ಫ‌ಲವಾಗಿ ಎದ್ದಿರುವ ವಿವಾದ ಸೋಮವಾರ ಮತ್ತಷ್ಟು ಮಜಲುಗಳನ್ನು ಪಡೆದುಕೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ರಾತ್ರಿಯಿಂದ ಆರಂಭಿಸಿದ ಧರಣಿ ಮುಂದುವರಿದಿದೆ. 

Advertisement

ಲೋಕಸಭೆ, ರಾಜ್ಯಸಭೆಗಳಲ್ಲಿ ಟಿಎಂಸಿ ಮತ್ತು ಇತರ ವಿಪಕ್ಷಗಳು ಕೋಲಾಹಲ ಎಬ್ಬಿ ಸಿದ್ದ ರಿಂದ ಕಲಾಪ ಮಂಗಳವಾರಕ್ಕೆ ಮುಂದೂ ಡಿಕೆಯಾಗಿದೆ. ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಮಾತ ನಾಡಿದ ಗೃಹ ಸಚಿವ ರಾಜನಾಥ್‌ ಸಿಂಗ್‌ ಪಶ್ಚಿಮ ಬಂಗಾಲದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂದು ಆರೋಪಿಸಿದ್ದಾರೆ. ಇನ್ನೊಂದೆಡೆ, ಸುಪ್ರೀಂ ಕೋರ್ಟ್‌ನಲ್ಲಿ ಕೋಲ್ಕತಾ ಪೊಲೀಸರ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣದ ವಿಚಾರಣೆ ಮಂಗಳವಾರ ನಡೆಯಲಿದೆ.

ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ವಿಚಾರಣೆ ನಡೆಸಲು ಹೋದ ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.  ಐಪಿಎಸ್‌ ಅಧಿಕಾರಿಯಾಗಿರುವ ಕೋಲ್ಕತಾ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರು ಸಂಭಾವ್ಯ ಆರೋಪಿ (ಪೊಟೆನ್ಶಿಯಲ್‌ ಎಕ್ಯೂಸ್ಡ್)ಯಾಗಿದ್ದು, ಅವರು ತನಿಖೆ ಸಂದರ್ಭದಲ್ಲಿನ ಕೆಲವು ಎಲೆಕ್ಟ್ರಾನಿಕ್‌ ಸಾಕ್ಷ್ಯಗಳನ್ನು ನಾಶ ಮಾಡಿ ದ್ದಾರೆ ಮತ್ತು ನ್ಯಾಯಾಂಗ ನಿಂದನೆ ಮಾಡಿ ದ್ದಾರೆ ಎಂಬ 2 ಅರ್ಜಿಗಳನ್ನು ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರ್ಟ್‌ಗೆ ಸಲ್ಲಿಸಿ ದರು. ಹೀಗಾಗಿ ತುರ್ತಾಗಿ ಪ್ರಕರಣ ಕೈಗೆತ್ತಿ ಕೊಳ್ಳ ಬೇಕು ಎಂದು ಒತ್ತಾಯಿಸಿದರು.

ಆದರೆ ಈ ವಾದಕ್ಕೆ ಸಹಮತ ವ್ಯಕ್ತಪಡಿಸದ ಮುಖ್ಯ ನ್ಯಾ| ರಂಜನ್‌ ಗೊಗೊಯ್‌ ಅವರಿದ್ದ ನ್ಯಾಯಪೀಠ, “ಆಯುಕ್ತರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಿ ಮತ್ತು  ಅವುಗಳನ್ನು ಅಫಿಡವಿಟ್‌ ರೂಪದಲ್ಲಿ ಸಲ್ಲಿಸಿ’ ಎಂದು ಸೂಚಿಸಿತು. ಒಂದು ವೇಳೆ ನೀವು ಹೇಳಿದಂತೆ ಪೊಲೀಸ್‌ ಆಯುಕ್ತರು ಸಾಕ್ಷ್ಯಗಳನ್ನು ನಾಶ ಮಾಡಿದ್ದೇ ಆದಲ್ಲಿ ಅವರು ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಸಿಜೆಐ ಹೇಳಿದರು. 

ಇದೇ ವೇಳೆ, ಪ. ಬಂಗಾಲ ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕ ಮತ್ತು ಕೋಲ್ಕತಾ ಪೊಲೀಸ್‌ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಕೇಂದ್ರ ತನಿಖಾ ಸಂಸ್ಥೆ ಸೋಮವಾರ ಸಂಜೆ ಅರ್ಜಿ ಸಲ್ಲಿಸಿದೆ. ಮುಖ್ಯ ನ್ಯಾ|ಮೂರ್ತಿ ನೇತೃತ್ವದ ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ಯನ್ನು ಮಂಗಳವಾರ ನಡೆಸಲಿದೆ. ಇದೇವೇಳೆ ಪ. ಬಂಗಾಲ ಸರಕಾರ ಸಿಬಿಐ ಕ್ರಮದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬ ಮನವಿಯನ್ನು ಹೈಕೋರ್ಟ್‌ ಪರಿಗಣಿಸಲಿಲ್ಲ. ರವಿವಾರ ತಡರಾತ್ರಿಯಿಂದೀಚೆಗೆ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಭವಾನಿಪುರ ಕ್ಷೇತ್ರದಲ್ಲಿ ಪಕ್ಷದ ಕಚೇರಿಯನ್ನು ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ದೂರಿದೆ.

Advertisement

ಸೋಮವಾರ ಏನಾಯಿತು?
 ಬೆ. 8.50 ಧರಣಿ ಸ್ಥಳಕ್ಕೆ ಸಿಎಂ ವಾಪಸ್‌
10.24 ರಾಜ್ಯಪಾಲರು- ಸಿಬಿಐ ಜಂಟಿ ನಿರ್ದೇಶಕರ ಮಾತುಕತೆ
10.46 ಸು.ಕೋರ್ಟ್‌ನಿಂದ ಮಂಗಳವಾರ ವಿಚಾರಣೆ ಘೋಷಣೆ
 11.20 ಸಂಸತ್‌ನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ
 11.35 ರೈತ ಸಮಾವೇಶದಲ್ಲಿ ಸಿಎಂ ಮಮತಾ ಭಾಗಿ
 ಮ. 1.45 ಸಂಪುಟ ಸಭೆ, ಬಜೆಟ್‌ ಅಂಗೀಕಾರ
 ಸಂ  5.00 ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಭಾಗಿ

ಆಯೋಗಕ್ಕೆ ದೂರು
ಕೋಲ್ಕತಾದಲ್ಲಿನ ಗಲಾಟೆಯ ನಡುವೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ಬಿಜೆಪಿ ನಿಯೋಗ ದಿಲ್ಲಿಯಲ್ಲಿ ಕೇಂದ್ರ ಚುನಾ ವಣ ಆಯೋಗವನ್ನು ಭೇಟಿ ಮಾಡಿ, ಟಿಎಂಸಿ ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯ ಕಾರ್ಯಕ್ರಮಗಳಿಗೆ ಅಡ್ಡಿ ಉಂಟು ಮಾಡುತ್ತದೆ ಎಂದು ದೂರು ಸಲ್ಲಿಸಿದೆ. ಚುನಾವಣ ಆಯೋಗ ಈ ಬಗ್ಗೆ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದೆ. 

ಮುಂದುವರಿದ ಧರಣಿ
ರವಿವಾರ ರಾತ್ರಿಯಿಂದ ಆರಂಭವಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಧರಣಿ ಸೋಮವಾರವೂ ಮುಂದು ವರಿದಿದೆೆ. ಅದರ ನಡುವೆಯೇ ಅವರು ಹಲವು ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿದ್ದಾರೆೆ. ಫೆ.8ರ ವರೆಗೂ ಧರಣಿ ಮುಂದು ವರಿಸುವು ದಾಗಿಯೂ ಹೇಳಿದ್ದಾರೆ. ಮೆಟ್ರೋ ಸಿನೆಮಾ ಹಾಲ್‌ ಇರುವ ಸ್ಥಳದಿಂದಲೇ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಸಂಜೆಯ ವೇಳೆಗೆ ಪೊಲೀಸ್‌ ಅಧಿಕಾರಿ ಗಳ ಸಮಾವೇಶದಲ್ಲಿ ಭಾಗವಹಿಸಿ ದರು. ಈ ಸಂದರ್ಭದಲ್ಲಿ  ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರೂ ದೀದಿ ಜತೆಗಿದ್ದರು.

 ಸಿಬಿಐ ಮತ್ತು ಮಮತಾ ಬ್ಯಾನರ್ಜಿಯವರ ಕ್ರಮಗಳು ಕೇವಲ ನಾಟಕ. ಚಿಟ್‌ಫ‌ಂಡ್‌ ಹಗರಣದಲ್ಲಿ ಭಾಗಿ ಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
– ಬೃಂದಾ ಕಾರಾಟ್‌, ಸಿಪಿಎಂ ನಾಯಕಿ

 ಪಶ್ಚಿಮ ಬಂಗಾಲದಲ್ಲಿ ಸಾಂವಿಧಾನಿಕ ವ್ಯವಸ್ಥೆ ಕುಸಿದು ಬೀಳುವ ಆತಂಕ ಎದುರಾಗಿದೆ. ಕೇಂದ್ರ ಸರಕಾರಕ್ಕೆ ಅಂಥ ಬಿಕ್ಕಟ್ಟು ಉಂಟಾಗದಂತೆ ತಡೆಯುವ ಹೊಣೆಯೂ ಇದೆ. ದೇಶದ ಎಲ್ಲ ಭಾಗಕ್ಕೂ ಈ ಅಂಶ ಅನ್ವಯ.
– ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

 ಶಾರದಾ ಸಹಿತ ಪ್ರಮುಖ ಹಗರಣಗಳ ತನಿಖೆ ನಾವು ಅಧಿಕಾರಕ್ಕೆ ಬರುವುದಕ್ಕಿಂತ ಮೊದಲೇ ಶುರುವಾಗಿದೆ. ಕೋಲ್ಕತಾ ಪೊಲೀಸ್‌ ಆಯುಕ್ತರೇಕೆ ರಾಜಕಾರಣಿಗಳಂತೆ ಧರಣಿ ಕುಳಿತುಕೊಳ್ಳಬೇಕು? ಅಲ್ಲೇನು ನಡೆಯುತ್ತಿದೆ?
– ರವಿಶಂಕರ ಪ್ರಸಾದ್‌, ಕೇಂದ್ರ ಕಾನೂನು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next