Advertisement
ಕೇಂದ್ರ ಗೃಹ ಸಚಿವಾಲಯ ಮತ್ತು ಕಾರ್ಯಕ್ರಮ ಅನುಷ್ಠಾನ, ಸಾಂಖ್ಯಿಕ ಸಚಿವಾಲಯ ಜನಗಣತಿ ನಡೆಸುವ ಬಗ್ಗೆ ಅಂತಿಮ ಹಂತದ ಸಿದ್ಧತೆ ನಡೆಸಿರುವಂತೆಯೇ ಜಾತಿ ಗಣತಿ ನಡೆಸುವ ವಿಚಾರ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿಯಿಂದ ಸಮ್ಮತಿ ದೊರೆತ ಬಳಿಕ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದುವರೆಗೆ ಜಾತಿ ಗಣತಿ ನಡೆಸಲಾಗಿಲ್ಲ. 2011ರಲ್ಲಿ ಯುಪಿಎ ಸರಕಾರ ದೇಶಾದ್ಯಂತ ಜಾತಿಗಣತಿ ನಡೆಸಿದ್ದರೂ, ವರದಿ ಬಿಡುಗಡೆ ಮಾಡಿರಲಿಲ್ಲ. 2015ರಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಜಾತಿಗಣತಿ ನಡೆಸಿತ್ತು. ವಿಪಕ್ಷ ಕಾಂಗ್ರೆಸ್ ಜಾತಿಗಣತಿ ನಡೆಸಲು ಕೇಂದ್ರಕ್ಕೆ ಆಗ್ರಹಿಸುತ್ತಿದೆ.