Advertisement

Explainer: ರಾಜ್ಯದ ಜಾತಿ ಜನ ಗಣತಿ ಕುರಿತು ಯಾಕೆ ಇಷ್ಟೊಂದು ಚರ್ಚೆ ?

01:10 PM Oct 16, 2024 | Team Udayavani |

ಹಿಂದುಳಿದ ಆಯೇೂಗ ಈಗಾಗಲೇ ರಾಜ್ಯ ಸರಕಾರಕ್ಕೆ ಜಾತಿ ಜನ ಗಣತಿ ವರದಿ ನೀಡಿಯಾಗಿದೆ. ಅದನ್ನು ಅಂಗೀಕರಿಸಿ ಮುಂದೇನು ಮಾಡಬೇಕು ಅಂತ ನಿರ್ಧರಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮುಂದಿದೆ. ಆದರೆ ಇದಾಗಲೇ ಈ ವರದಿಯ ಬಗ್ಗೆ ಪರ ವಿರೇೂಧ ಚಚೆ೯ಗಳು ನಡೆಯಲು ಶುರುವಾಗಿದೆ.

Advertisement

ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ “ಇದೊಂದು ರಾಜ್ಯದ ಜನಗಣತಿಯ ಲೆಕ್ಕಾಚಾರ ಅಷ್ಟೇ..ಅದೇ ವರದಿ ತಯಾರಿಸಿದ ಹಿಂದುಳಿದ ಆಯೇೂಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹೇಳುತ್ತಾರೆ “ಓದಿದ ಮೇಲೆ ಅಭಿಪ್ರಾಯ ನೀಡಿ ಓದದೆ ಹೇಗೆ ಅಭಿಪ್ರಾಯ ನೀಡುತ್ತೀರಿ… ತಪ್ಪಾಗಿದ್ದರೆ ಸರಿಮಾಡೇೂಣ ಅನ್ನುವ ಸಮಾಧಾನಕರ ಹೇಳಿಕೆ ನೀಡಿದ್ದಾರೆ. ಹಾಗಾದರೆ ಈ ಜಾತಿ ಜನಗಣತಿಯ ಬಗ್ಗೆ ಇಷ್ಟೊಂದು ಅಭಿಪ್ರಾಯ ಹುಟ್ಟಿ ಕೊಳ್ಳಲು ಪ್ರಮುಖ ಕಾರಣಗಳೇನು ಅನ್ನುವ ವಿಷಯ ನಮ್ಮನ್ನು ಕಾಡುವುದು ಸಹಜ ತಾನೆ?

ಒಂದು ಅರ್ಥದಲ್ಲಿ ಒಂದು ದೇಶ ಅಥವಾ ರಾಜ್ಯದಲ್ಲಿ ಈ ಜನ ಗಣತಿ..ಲೆಕ್ಕಾಚಾರ ಅಗತ್ಯವಿದೆ. ಬಹುಮುಖ್ಯವಾಗಿ ಸರ್ಕಾರದ ಹತ್ತಾರು ಸವಲತ್ತುಗಳು ಜನರಿಗೆ ಹಂಚುವಾಗ ಸುಮ್ಮನೆ ನೀಡಲಿಲ್ಲ.ಅವರ ಜಾತಿ, ಶಿಕ್ಷಣ, ಆರ್ಥಿ ಕತೆ ಸಾಮಾಜಿಕ ಸ್ಥಾನ ಮಾನವನ್ನೆಲ್ಲ ನೇೂಡಿಕೊಂಡೆ ಹಂಚಿದ್ದಾರೆ ಅನ್ನುವುದು ಸತ್ಯ. ಹಾಗಾದರೆ ಈ ಸವಲತ್ತುಗಳು ಎಷ್ಟರ ಮಟ್ಟಿಗೆ ಅವರಿಗೆ ತಲುಪಿದೆ ತಲುಪಲಿಲ್ಲ ಅನ್ನುವುದನ್ನು ತಿಳಿಯ ಬೇಕಾದರೆ ಇಂತಹ ಸಮೀಕ್ಷೆಯ ವರದಿಯ ಅನಿವಾರ್ಯತೆ ಇದೆ.

ಹಾಗಾದರೆ ಈ ಜಾತಿ ಜನಗಣತಿ ಲೆಕ್ಕಾಚಾರ ಬಗ್ಗೆ ಈಗ ಯಾಕೆ ಇಷ್ಟೊಂದು ಸ್ವರ ಅಪಸ್ವರಗಳು ಹುಟ್ಟಿ ಕೊಂಡಿದ್ದಾವೆ. ಇದಕ್ಕೆ ಬಲವಾದ ಕಾರಣ ಕರ್ನಾಟಕದ ತಳ ಸ್ಪರ್ಶಿ ಜಾತಿ ಜಾತಿ ನಡುವಿನ ರಾಜಕೀಯ ಮೇಲಾಟವೇ ಇದಕ್ಕೆ ಕಾರಣ ಅನ್ನುವುದು ಅಷ್ಟೇ ಸ್ವಷ್ಟ.ಈಗಾಗಲೇ ರಾಜ್ಯದ ಪ್ರಬಲ ಜಾತಿಗಳು ಅನ್ನಿಸಿಕೊಂಡ ಲಿಂಗಾಯತ ಮತ್ತು ಒಕ್ಕಲಿಗರು ನಾವು ಜಾತಿವಾರು ಲೆಕ್ಕಾಚಾರದಲ್ಲಿ ಮುಂದಿದ್ದೇವೆ ಹಾಗಾಗಿ ನಮಗೆ ರಾಜಕೀಯವಾಗಿ ಸಿಗಬೇಕಾದ ಸ್ಥಾನ ಮಾನಕ್ಕೆ ಎಂದು ಚ್ಯುತಿ ಬರಬಾರದು. ಒಂದು ವೇಳೆ ಹಿಂದುಳಿದ ವರ್ಗದ ಕ್ರೇೂಢಿಕೃತ ಜಾತಿ ಜನಗಣತಿ ನಮ್ಮನ್ನುಮೀರಿಸಿ ಬಿಟ್ಟರೆ ಇನ್ನೊಂದು ಪ್ರಬಲವಾದ ರಾಜಕೀಯ ಶಕ್ತಿ ಹುಟ್ಟಿ ಕೊಳ್ಳುವ ಸಾಧ್ಯತೆ ಅವರನ್ನು ಕಾಡಲು ಶುರುಮಾಡಿದೆ.

Advertisement

ಅದರಲ್ಲೂ ಸಿಎಂ ಸಿದ್ದರಾಮಯ್ಯ ಮಾಡುತ್ತಾರೆ ಅಂದರೆ ಅದು” ಅಹಿಂದ” ಪರ್ಯಾಯ ಶಕ್ತಿಯಾಗಿ ಹೊರ ಹೊಮ್ಮಬಹುದು ಅನ್ನುವ ಹೆದರಿಕೆ ಎಲ್ಲಾ ಪಕ್ಷಗಳಿರುವ ಲಿಂಗಾಯತ ಒಕ್ಕಲಿಗರ ಹಿರಿಯ ನಾಯಕರನ್ನು ಕಾಡಲು ಶುರುಮಾಡಿದೆ. ಅದೇ ರೀತಿಯಲ್ಲಿ ಈ ಎರಡು ಪ್ರಬಲ ಜಾತಿಗೆ ಸೇರದ ಜಾತಿಗಳಲ್ಲಿ ಈ ಜಾತಿ ಜನಗಣತಿ ಲೆಕ್ಕಾಚಾರದ ಬಗ್ಗೆ ಅಷ್ಟೇನು ಅಪಸ್ವರವಿಲ್ಲ..ಈ ರಾಜಕೀಯ ಮೇಲಾಟದಲ್ಲಿ ಹಿಂದುತ್ವ ಸಿದ್ಧಾಂತ ನಂಬಿಕೊಂಡಿರುವ ರಾಜಕೀಯ ನಿಷ್ಣಾತರಿಗೆ ಹಿಂದುತ್ವ ಅಲೆ ಈ ಜಾತಿ ಲೆಕ್ಕಾಚಾರದಲ್ಲಿ ಕಲುಷಿತಗೊಳ್ಳಬಹುದಾ ಅನ್ನುವ ಹೆದರಿಕೆಯೂ ಅವರನ್ನು ಕಾಡಲು ಶುರುಮಾಡಿದೆ.

ಬಹುಮುಖ್ಯವಾಗಿ ಜನಸಾಮಾನ್ಯರನ್ನು ಕಾಡುತ್ತಿರುವ ಅತಿ ಮುಖ್ಯವಾದ ಇನ್ನೊಂದು ಸಂಶಯದ ಪ್ರಶ್ನೆ ಅಂದರೆ ಈ ಜಾತಿ ಜನಗಣತಿ ನಡೆಸುವ ಸಂದರ್ಭದಲ್ಲಿ ನಮ್ಮ ಮನೆಗೆ ಯಾರು ಕೂಡ ಬಂದು ನಮ್ಮ ವಾಸ ಸ್ಥಾನ, ಜಾತಿ, ಆರ್ಥಿ ಕತೆ, ಶಿಕ್ಷಣ ಯಾವುದನ್ನು ಸಮೀಕ್ಷೆ ನಡೆಸದೇ ಬರೇ ಚುನಾವಣಾ ಕಾಲದಲ್ಲಿ ಖಾಸಗಿ ಸಂಸ್ಥೆಗಳು ನಡೆಸುವ ಚುನಾವಣಾ ಪೂರ್ವ ಚುನಾವಣೇೂತ್ತರ ಸಮೀಕ್ಷೆಯ ತರದಲ್ಲಿ ಫಲಿತಾಂಶ ಕೊಡುವ ತರದಲ್ಲಿ ಸ್ಯಾಂಪಲ್‌ ಸರ್ವೆ ನಡೆಸಿದ್ದೀರಾ ಅನ್ನುವ ಮೂಲ ಭೂತವಾದ ಪ್ರಶ್ನೆಯನ್ನು ಸಮೀಕ್ಷೆ ನಡೆಸಿದ ಹಿಂದುಳಿದ ಆಯೇೂಗದ ಮುಂದಿಟ್ಟಿದ್ದಾರೆ..ಇದಕ್ಕೆ ಸರ್ಕಾರ ಮೊದಲಾಗಿ ಉತ್ತರಿಸ ಬೇಕಾದ ಅನಿವಾರ್ಯತೆಯೂ ಇದೆ.

ಒಟ್ಟಿನಲ್ಲಿ ನಮ್ಮಂತಹ ದೇಶದಲ್ಲಿ ರಾಜ್ಯಗಳಲ್ಲಿ ಜನ ಗಣತಿ ಜಾತಿ ಗಣತಿ ನಡೆಸುವುದು ತಪ್ಪಲ್ಲ. ಆದರೆ ಅದರ ಉದ್ದೇಶ ಜನರ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿ ಕಡೆಗೆ ಮಾತ್ರ ಸೀಮಿತವಾದರೆ ಉತ್ತಮ..ಹೊರತು ರಾಜಕೀಯ ಬೇಳೆ ಬೇಯಿಸಿ ಕೊಳ್ಳುವ ಜಾತಿ ಲೆಕ್ಕಾಚಾರವಾಗದಿರಲಿ ಎನ್ನುವುದು ನಮ್ಮೆಲ್ಲರ ಆಶಯವೂ ಹೌದು.

*ವಿಶ್ಲೇಷಣೆ :ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next