Advertisement
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಅನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು 7 ಕೋಟಿ ಕನ್ನಡಿಗರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. ಇದರಲ್ಲಿ ಲಿಂಗಾಯತರು, ಒಕ್ಕಲಿ ಗರನ್ನೂ ಒಳಗೊಂಡು ಸಮೀಕ್ಷೆ ಮಾಡಲಾಗಿದೆ ಎಂದರು.
ಸಂಪುಟ ಸಭೆಯಲ್ಲಿ ಮಂಡನೆಯಾದ ಅನಂತರ ಅಧಿವೇಶನದಲ್ಲಿ ಚರ್ಚಿಸಲೂ ಅವಕಾಶ ಇರುತ್ತದೆ. ತಿದ್ದುಪಡಿಯನ್ನೂ ಮಾಡಿಕೊಳ್ಳಬಹುದಾಗಿರುತ್ತದೆ. ಈ ಹಿಂದೆ ಮಂಡಲ್ ಆಯೋಗದ ವರದಿ ಪ್ರಕಾರ ಶೇ. 52ರಷ್ಟು ಮೀಸಲಾತಿಗೆ ಶಿಫಾರಸು ಮಾಡಲಾಗಿತ್ತು. ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ ನಡೆಯಿತು. ಸಂಸತ್ತಿನಲ್ಲೂ ಚರ್ಚೆ ಯಾಗಿ ಕೊನೆಗೆ ಶೇ. 27ರಷ್ಟು ಮೀಸಲಾತಿ ನಿಗದಿಯಾಯಿತು. ಪ್ರಜಾಪ್ರಭುತ್ವ ಪ್ರಬುದ್ಧ ವಾಗಿದೆ ಎಂದು ಹೇಳಲು ಚರ್ಚೆಯ ಅನಂತರ ಬರುವ ತೀರ್ಮಾನಗಳೇ ಮಾನದಂಡವಾಗುತ್ತವೆ ಎಂದು ತಿಳಿಸಿದರು.