Advertisement
ಇಲ್ಲಿನ ದೇಶಪಾಂಡೆ ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರಕಾರದ ಸಾಧನೆ ಶೂನ್ಯವಾಗಿದ್ದು, ಚುನಾವಣೆ ಸಮೀಪಿಸುತ್ತಿರುವುದರಿಂದ ಸರಕಾರ ಈ ಸಾಧನಾ ಸಮಾವೇಶ ನಡೆಸಲು ಹೊರಟಿದೆ. ಸರಕಾರ ನಿಜವಾದ ಸಾಧನೆ ಮಾಡಿದ್ದರೆ ವರ್ಷಕ್ಕೊಂದು ಸಮಾವೇಶ ಮಾಡಬೇಕಿತ್ತು. ಇದೀಗ ಯಾವುದೇ ಸಾಧನೆಗಳಿಲ್ಲದೆ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಅದಕ್ಕೆ ಅಧಿಕಾರಿಗಳ ಮೂಲಕ ಆಮಿಷವೊಡ್ಡಿ ಫಲಾನುಭವಿಗಳನ್ನುಕರೆದುಕೊಂಡು ಬರಲಾಗುತ್ತಿದೆ. ಭ್ರಷ್ಟಾಚಾರಕ್ಕೆ ಸರಕಾರವೇ ನೇರವಾಗಿ ಇಂಬು ಕೊಡುತ್ತಿದೆ ಎಂದರು.