Advertisement

ನಾಳೆಯಿಂದಲೇ ಶಾಲೆಗಳ ಪುನಾರಂಭ; ಕೋವಿಡ್‌ ನಿಯಮದಡಿ ಶಾಲೆ ಶುರು

02:48 PM Sep 05, 2021 | Team Udayavani |

ದೇವನಹಳ್ಳಿ: ಕೋವಿಡ್‌ ದಿಂದ ಸತತ 20ತಿಂಗಳುಗಳಿಂದ ಬಂದ್‌ ಆಗಿದ್ದ ಶಾಲೆಗಳು ಸೆ.6ರಿಂದ ಆರಂಭಗೊಳ್ಳಲಿದೆ. ಮಕ್ಕಳ ಸ್ವಾಗತಕ್ಕೆ
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

Advertisement

ನಾಳೆಯಿಂದಲೇ ಶಾಲೆ ಆರಂಭ: ಆನ್‌ಲೈನ್‌ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಭೌತಿಕ ತರಗತಿ ಹಾಜರಿಗೆ ಎದುರು ನೋಡುತ್ತಿದ್ದರು.6-8 ನೇ ತರಗತಿಯ ವರೆಗೆ ಪುನಾರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಶಾಲೆಗಳಲ್ಲಿ ಮಕ್ಕಳ ಕಲರವ ಕೇಳಿ ಬರಲಿದೆ. ಶಾಲೆಗಳ ಆರಂಭ ಪೋಷಕರಿಗೆ ಖುಷಿ ತಂದಿದೆ.

ಸವಾಲು: ಶೈಕ್ಷಣಿಕ ಪ್ರಗತಿಗೆ ಕೋವಿಡ್‌ ದೊಡ್ಡ ಆಘಾತ ನೀಡಿತ್ತು. 6, 7, ಮತ್ತು 8ನೇ ತರಗತಿ ಮಕ್ಕಳು ರಜೆಗೆ ಒಗ್ಗಿಕೊಂಡಿದ್ದು ಪುನ:ತರಗತಿಗೆ ಆಗಮಿಸಿ ಮೊದಲಿನಂತೆ ಶೇ.100ರಷ್ಟು ಹಾಜರಾತಿ ಪಡೆಯುವುದೇ ಶಿಕ್ಷಣ ಇಲಾಖೆಗೆ ಹೆಚ್ಚಿನ ಸವಾಲಾಗಿ ಪರಿಣಮಿಸಿದೆ.

ಕೋವಿಡ್‌ ಮಾರ್ಗಸೂಚಿ ಪಾಲನೆ: ಜಿಲ್ಲೆಯಲ್ಲಿ ಸೆ.6ರಿಂದ508 ಶಾಲೆಗಳು ತೆರೆಯಲಿದೆ. ಶಾಲಾ ಆಡಳಿತ ಮಂಡಳಿ ಕೋವಿಡ್‌ ಮಾರ್ಗಸೂಚಿ
ಅನ್ವಯ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಜಿಲ್ಲೆಯಾ ದ್ಯಂತ ಈಗಾಗಲೇ ಎಲ್ಲಾ ಶಾಲಾ ಶಿಕ್ಷಕರಿಗೆ ಕೋವಿಡ್‌ ಲಸಿಕೆ ಹಾಕಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಇದನ್ನೂ ಓದಿ:ಸಾರ್ವಜನಿಕ ಗಣೇಶ ಹಬ್ಬಕ್ಕೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ; ಷರತ್ತುಗಳು ಅನ್ವಯ

Advertisement

ವಿದ್ಯಾರ್ಥಿಗಳು ಆತಂಕವಿಲ್ಲದೆ ಶಾಲೆಗೆ ಬರಬಹುದು. ಸುರಕ್ಷತೆ ದೃಷ್ಟಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್‌ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
– ಎಂಟಿಬಿ ನಾಗರಾಜ್‌, ಜಿಲ್ಲಾ ಉಸ್ತುವಾರಿ ಸಚಿವ.

ಮಕ್ಕಳ ಸುರಕ್ಷತೆಗೆ ಏನೆಲ್ಲಾ ಅಗತ್ಯವಿದೆಯೋ ಎಲ್ಲವನ್ನು ಸಿದ್ಧಗೊಳಿಸಲಾಗಿದೆ. ಯಾವುದೇ ಆತಂಕವಿಲ್ಲದೆ ವಿದ್ಯಾರ್ಥಿಗಳು ಹಾಜರಾಗಬಹುದು.
– ಎಂ.ಆರ್‌.ರವಿಕುಮಾರ್‌, ಜಿಪಂ ಸಿಇಒ

ಪ್ರಸಕ್ತ ಸಾಲಿನಲ್ಲಿ 6 ರಿಂದ 8ನೇ ತರಗತಿಯ 48325 ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಲ್ಲಿದ್ದೇವೆ. ಉಳಿದಂತೆ ಎಲ್ಲಾ ಶಾಲೆಗಳಿಗೆ ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೋಷಕರು ಧೈರ್ಯವಾಗಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿಕೊಡಬಹುದಾಗಿದೆ.
– ಗಂಗಮಾರೇಗೌಡ, ಉಪನಿರ್ದೇಶಕರು,
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ.

ಕೋವಿಡ್‌ ದಿಂದಾಗಿ ಶಾಲೆಗಳನ್ನು ಮುಚ್ಚಿದ್ದರಿಂದ ಆನ್‌ ಲೈನ್‌ನಲ್ಲಿಯೇ ಹೆಚ್ಚು ಪಾಠ ಕೇಳಲು ಕಷ್ಟವಾಗುತ್ತಿತ್ತು. ಸರ್ಕಾರ ಇದೀಗ ಶಾಲೆಗಳನ್ನು ತೆರೆಯುತ್ತಿರುವುದು ಶಾಲೆಯಲ್ಲಿ ಕುಳಿತು ಪಾಠ ಕೇಳಲು ಅನುಕೂಲವಾಗುತ್ತಿದೆ. ಖುಷಿಯಿಂದ ಶಾಲೆಗಳಿಗೆ ಸೋಮವಾರದಿಂದ ಹೋಗುತ್ತೇನೆ.
– ರಾಹುಲ್‌, 8ನೇ ತರಗತಿ ವಿದ್ಯಾರ್ಥಿ

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next