Advertisement

ಅನ್ನಭಾಗ್ಯ ಯೋಜನೆ ಬಿಜೆಪಿ ಕೊಡುಗೆ : ರೇಣು

08:07 PM Apr 05, 2021 | Team Udayavani |

ಹೊನ್ನಾಳಿ : ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿ ಬಿಜೆಪಿ ಸರ್ಕಾರದ ಕೊಡುಗೆ. ನಮ್ಮ ಯೋಜನೆಯ ಲಾಭ ಪಡೆದು ಮಾಜಿ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ತಮ್ಮ ಸರ್ಕಾರದ ಕೊಡುಗೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರ ವಿಧಾನಸಭಾ ಚುನಾವಣೆಗೂ ಪೂರ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಡಿ.ಎನ್‌. ಜೀವರಾಜ್‌ ಅವರು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಯೋಜನೆ ರೂಪಿಸಿದ್ದರು. ಆದರೆ 2013ರ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ನಾವು ರೂಪಿಸಿದ್ದ ಯೋಜನೆಯ ಕಡತಕ್ಕೆ ಸಹಿ ಮಾಡಿದ್ದರು ಅಷ್ಟೇ ಎಂದರು.

ಈ ಹಿಂದೆ ಏಳು ಕೆಜಿ ಪಡಿತರ ಅಕ್ಕಿ ವಿತರಿಸಲಾಗುತ್ತಿತ್ತು. ಈಗ ಐದು ಕೆಜಿಗೆ ಇಳಿಸಿರುವುದಕ್ಕೆ “ಯಡಿಯೂರಪ್ಪ ಏನ್‌ ಅವರಪ್ಪನ ಮನೆಯಿಂದ ಅಕ್ಕಿ ತಂದುಕೊಡ್ತಾರಾ’ ಎಂದು ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಯಾರೂ ಕೂಡ ಅಕ್ಕಿಯನ್ನು ಅವರ ಅಪ್ಪನ ಮನೆಯಿಂದ ತಂದು ಕೊಡುವುದಿಲ್ಲ.

ಅಕ್ಕಿ ಕೊಡುವುದು ಸರ್ಕಾರ. ಸಿದ್ದರಾಮಯ್ಯ “ಬಿಜೆಪಿ ಸರ್ಕಾರ ಜಿಪುಣ ಸರ್ಕಾರ’ ಎಂದು ಪದೇ ಪದೇ ಹೇಳುತ್ತಿದ್ದಾರೆ. ಒಂದು ಜವಾಬ್ದಾರಿಯುತ ಸರ್ಕಾರ ಜನರ ನಾಡಿಮಿತ ಅರಿತು ಜನಪ್ರಿಯ ಯೋಜನೆ ಜಾರಿಗೊಳಿಸುತ್ತದೆ. ಆ ಕೆಲಸವನ್ನು ಸಿಎಂ ಯಡಿಯೂರಪ್ಪ ಸಮರ್ಪಕವಾಗಿ ಮಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next