Advertisement

ಮಹಾಲಕ್ಷ್ಮೀ, ಚರ್ನಿರೋಡ್ ರೈಲ್ವೇ ನಿಲ್ದಾಣಗಳ ನವೀಕರಣ

01:23 PM May 29, 2021 | Team Udayavani |

ಮುಂಬಯಿ: ಪಶ್ಚಿಮ ರೈಲ್ವೇಯ ಐತಿಹಾಸಿಕ ನಿಲ್ದಾಣಗಳಾಗಿರುವ ಮಹಾಲಕ್ಷ್ಮೀ ಮತ್ತು ಚರ್ನಿರೋಡ್‌ ನಿಲ್ದಾಣಗಳನ್ನು ನವೀಕರಣಗೊಳಿಸುವ ಯೋಜನೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುತ್ತಿಗೆ ದಾರರನ್ನು ನೇಮಿಸಲಾಗಿದೆ. ಕಾಮಗಾರಿ ಆರಂಭಗೊಂಡಿದ್ದು, ಕೆಲವು ಪೂರ್ಣಗೊಂಡಿವೆ.

Advertisement

ಈ ಯೋಜನೆಯಲ್ಲಿ ನಿಲ್ದಾಣದ ಕಟ್ಟಡ ನವೀಕರಣ ಮತ್ತು ಪ್ರಯಾಣಿಕರಿಗೆ ಇತರ ಸೌಲಭ್ಯಗಳು ಸೇರಿವೆ. ಕೊರೊನಾ ಸೋಂಕಿನ ಕಟ್ಟುನಿಟ್ಟಾದ ನಿರ್ಬಂಧಗಳಿಂದಾಗಿ ಎರಡೂ ನಿಲ್ದಾಣಗಳ ನವೀಕರಣ ಕಾರ್ಯ ಪ್ರಸ್ತುತ ಸ್ಥಗಿತಗೊಳಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಮತ್ತೆ ಪ್ರಾರಂಭವಾಗಲಿದೆ ಎಂದು ಪಶ್ಚಿಮ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಸೌಲಭ್ಯಗಳು

ಈ ಹಿಂದೆ ಮುಂಬಯಿಯ ಐಐಟಿ ತಜ್ಞರ ತಂಡ ಮಹಾಲಕ್ಷ್ಮೀ ರೈಲು ನಿಲ್ದಾಣವನ್ನು ಪರಿಶೀಲಿಸಿ ಎತ್ತರದ ನಿಲ್ದಾಣದ ಕಟ್ಟಡ ಅಪಾಯಕಾರಿ ಎಂದು  ವರದಿಯಲ್ಲಿ  ಉಲ್ಲೇಖೀಸಿದೆ. ಕಟ್ಟಡವು ಟಿಕೆಟ್‌ ವಿಂಡೋ ಸೌಲಭ್ಯವನ್ನು ಹೊಂದಿದ್ದು, ಪ್ರಯಾಣಿಕರು ಅದೇ ಎತ್ತರದ ಕಟ್ಟಡದಿಂದ ನಿಲ್ದಾಣವನ್ನು ಪ್ರವೇಶಿಸುತ್ತಾರೆ. ಮುಂಬಯಿಯ ಐಐಟಿ ವರದಿ ಸಲ್ಲಿಸಿದ ಬಳಿಕ ಪಶ್ಚಿಮ ರೈಲ್ವೇ ಎತ್ತರದ ನಿಲ್ದಾಣದ ಕಟ್ಟಡವನ್ನು ನವೀಕರಿಸಲು ನಿರ್ಧರಿಸಿದ್ದು, ಅಲ್ಲಿನ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ.

ಈ ನಿಲ್ದಾಣದ ಜತೆಗೆ ಚರ್ನಿರೋಡ್‌ ನಿಲ್ದಾಣವೂ ನವೀಕರಣಗೊಳ್ಳಲಿದೆ. ಈ ನಿಲ್ದಾಣದಲ್ಲಿನ ಕಟ್ಟಡವು ಹೊಸ ಟಿಕೆಟ್‌ ವಿಂಡೋ ಸೌಲಭ್ಯ, ಎಟಿವಿಎಂಗೆ ಪ್ರತ್ಯೇಕ ಸೇವೆ, ಸ್ಟೇಷನ್‌ ಮಾಸ್ಟರ್ಸ್‌ ಕಚೇರಿ, ಮುಖ್ಯ ನಿಲ್ದಾಣ ಅಧೀಕ್ಷಕರ ಕಚೇರಿಯೊಂದಿಗೆ ನಿರ್ಮಾಣಗೊಳ್ಳಲಿದೆ. ಮಹಾಲಕ್ಷ್ಮೀ ನಿಲ್ದಾಣಕ್ಕೆ 3.32 ಕೋಟಿ ರೂ. ಮತ್ತು ಚರ್ನಿರೋಡ್‌ ನಿಲ್ದಾಣಕ್ಕೆ 2.51 ಕೋಟಿ ರೂ. ಗಳನ್ನು ಈಗಾಗಲೇ ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ನಿಲ್ದಾಣಗಳಲ್ಲಿ  ಕಾಮಗಾರಿಗಳು ಪ್ರಾರಂಭ ವಾಗಿವೆ. ಮಹಾಲಕ್ಷ್ಮೀ ನಿಲ್ದಾಣದಲ್ಲಿನ ಹಳೆಯ ಟಿಕೆಟ್‌ ಕಿಟಕಿಗಳನ್ನು ನೆಲಸಮ ಮಾಡಲಾಗಿದ್ದು, ಅದರ ಸ್ಥಳದಲ್ಲಿ ಹೊಸ ಟಿಕೆಟ್‌ ಕಿಟಕಿಗಳನ್ನು ಸ್ಥಾಪಿಸಲಾಗಿದೆ. ಈ ಟಿಕೆಟ್‌ ಕಿಟಕಿಗಳಲ್ಲಿ ಒಳಾಂಗಣ ಅಲಂಕಾರ ಮತ್ತು ಇತರ ಕೆಲಸ

ಗಳನ್ನು ಮಾಡಲಾಗುತ್ತಿದೆ. ಇದಲ್ಲದೆ ಕಟ್ಟಡದ ಒಳಗೆ ಮತ್ತು ಹೊರಗೆ ಸಿಮೆಂಟ್‌ ಲೇಪನ ಮತ್ತು ಚಿತ್ರಕಲೆ ಕೂಡ ಪೂರ್ಣಗೊಂಡಿದೆ. ಚರ್ನಿರೋಡ್‌ ನಿಲ್ದಾಣದಲ್ಲಿ ಇದೇ ರೀತಿಯ ಇತರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ ಪ್ರಯಾಣಿಕರ ಸೌಲಭ್ಯಗಳ ಕೆಲಸ ಬಾಕಿ ಉಳಿದಿದೆ.

ಈ ಎರಡು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಮತ್ತು ವಿಶಾಲವಾದ ಸ್ಥಳವನ್ನು ಒದಗಿಸಲಾಗುತ್ತಿದ್ದು, ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಪ್ರವೇಶದ್ವಾರ, ಕಟ್ಟಡದಲ್ಲಿನ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಟಿಕೆಟ್‌ ಕಿಟಕಿಗಳು, ಎಟಿವಿಗಳು ಇತ್ಯಾದಿಗಳನ್ನು ವಿಸ್ತರಿಸುವುದು ಇವುಗಳಲ್ಲಿ ಸೇರಿವೆ. ಒಂದು ವರ್ಷದೊಳಗೆ ಕೆಲಸವನ್ನು ಪೂರ್ಣಗೊಳಿಸುವುದು ಗುರಿಯಾಗಿತ್ತು, ಆದರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಪ್ರಸ್ತುತ ಕಾಮಗಾರಿ ಸ್ಥಗಿತಗೊಂಡಿದ್ದು, ಮಳೆಗಾಲದಲ್ಲೂ ಅನೇಕ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next