Advertisement

ಬದಲಾದವು ರೆಮೋ ಹಾಡುಗಳು

04:13 PM Aug 14, 2020 | Suhan S |

ಕೋವಿಡ್ ಸದ್ಯ ಎಲ್ಲ ಕ್ಷೇತ್ರಗಳ ಮೇಲೂ ಸಾಕಷ್ಟು ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಹಾಗೇ ಚಿತ್ರರಂಗದ ಮೇಲೂ ಕೋವಿಡ್ ದಿಂದಾಗಿರುವ ಸಂಕಷ್ಟ ಹೇಳಿದಷ್ಟು ಇದೆ. ಇನ್ನು “ರೆಮೋ’ ಚಿತ್ರದ ಮೇಲೆ ಕೋವಿಡ್ ಎಫೆಕ್ಟ್ ಹೇಗಿದೆ ಎಂದರೆ, ಕೋವಿಡ್ ದಿಂದಾಗಿ ಈಗಾಗಲೇ ರೆಕಾರ್ಡಿಂಗ್‌ ಆಗಿದ್ದ ತನ್ನೆಲ್ಲ ಹಾಡುಗಳನ್ನೇ ಮತ್ತೆ ಬದಲಾಯಿಸಲು “ರೆಮೋ’ ಚಿತ್ರತಂಡ ಮುಂದಾಗಿದೆ. ಈ ನಿಟ್ಟಿನಲ್ಲಿ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಹಾಗೂ ಪವನ್‌ ತೊಡಗಿದ್ದಾರೆ.

Advertisement

ಹೌದು, ಸ್ಯಾಂಡಲ್‌ವುಡ್‌ನ‌ ಯಂಗ್‌ ಆ್ಯಂಡ್‌ ಎನರ್ಜಿಟಿಕ್‌ ನಿರ್ದೇಶಕ ಪವನ್‌ ಒಡೆಯರ್‌ ನಿರ್ದೇಶನದ “ರೆಮೋ’ ಚಿತ್ರ ಇಷ್ಟೊತ್ತಿಗಾಗಲೇ ತೆರೆಗೆ ಬರಬೇಕಿತ್ತು. ಆರಂಭದಲ್ಲಿ ಇದೇ ಏಪ್ರಿಲ್‌ – ಮೇ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ಲಾನ್‌ ಹಾಕಿಕೊಂಡಿತ್ತು ಚಿತ್ರತಂಡ. ಆದರೆ ಈ ವರ್ಷದ ಆರಂಭದಲ್ಲಿಯೇ, ಅನಿರೀಕ್ಷಿತವಾಗಿ ಬಂದೆರಗಿದ ಕೋವಿಡ್ ಮಹಾಮಾರಿ, “ರೆಮೋ’ ಚಿತ್ರದ ಕೆಲಸಕ್ಕೆ ಬ್ರೇಕ್‌ ಹಾಕಿದೆ. ಅದಾಗಲೇ ಬಹುತೇಕ ಮಾತಿನ ಭಾಗದ ಚಿತ್ರೀಕರಣ ಮುಗಿಸಿ, ಇನ್ನೇನು ಬಾಕಿಯಿರುವ ಹಾಡುಗಳ ಶೂಟಿಂಗ್‌ ಗೆ ಹೊರಡಬೇಕು ಎನ್ನುವಷ್ಟರಲ್ಲಿ ಬಂದೆರಗಿದ ಕೋವಿಡ್, “ರೆಮೋ’ ಚಿತ್ರತಂಡದ ಪ್ಲಾನ್‌ ಎಲ್ಲವನ್ನೂ ತಲೆಕೆಳಗಾಗುವಂತೆ ಮಾಡಿತು.

ಆನಂತರ ಲಾಕ್‌ಡೌನ್‌, ಸೀಲ್‌ಡೌನ್‌, ಶೂಟಿಂಗ್‌ಗೆ ಅನುಮತಿ ಸಿಗದ ಕಾರಣ ಚಿತ್ರತಂಡಕ್ಕೆ ಅಂದುಕೊಂಡಂತೆ ತಮ್ಮ ಹಾಡನ್ನು ಶೂಟಿಂಗ್‌ ಮಾಡುವುದೇ ದೊಡ್ಡ ಸಮಸ್ಯೆಯಾಯಿತು. ಈ ಬಗ್ಗೆ ಸಾಕಷ್ಟು ಯೋಚಿಸಿದ ಚಿತ್ರತಂಡ, ಈಗ ಇಡೀ ಚಿತ್ರದ ಹಾಡುಗಳನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದಿದೆ. ಈಗಾಗಲೇ ರೆಕಾರ್ಡಿಂಗ್‌ ಮಾಡಲಾಗಿದ್ದ ಹಾಡುಗಳು ವಿಭಿನ್ನ ಹಿನ್ನೆಲೆ ಮತ್ತು ವಿದೇಶಿ ಲೊಕೇಶನ್‌ ಗಳು ಮತ್ತು ನೂರಾರು ಸಂಖ್ಯೆಯ ಸಹ ಕಲಾವಿದರನ್ನು ಡಿಮ್ಯಾಂಡ್‌ ಮಾಡುತ್ತಿದ್ದವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಹಾಡುಗಳನ್ನು ಇಟ್ಟುಕೊಂಡು ಶೂಟಿಂಗ್‌ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಹೀಗಾಗಿ ಚಿತ್ರದ ಹಾಡುಗಳಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಿರುವ ಚಿತ್ರತಂಡ, ಹೊಸದಾಗಿ ಆರು ಹಾಡುಗಳ ಮರು ಮುದ್ರಣಕ್ಕೆ ಮುಂದಾಗಿದೆ. ­

Advertisement

Udayavani is now on Telegram. Click here to join our channel and stay updated with the latest news.

Next