Advertisement

ಧರ್ಮ ಸಂಸ್ಕೃತಿಗಳನ್ನು ಮರೆಯಬಾರದು: ಶೃಂಗೇರಿ ಶ್ರೀ

01:05 AM Jan 19, 2024 | Team Udayavani |

ತೆಕ್ಕಟ್ಟೆ: ಕುಂದಾಪುರದ ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ಆಡಳಿತಕ್ಕೆ ಒಳಪಟ್ಟಿರುವ ಯಡಾಡಿ ಮತ್ಯಾಡಿ ಲಿಟಲ್‌ ಸ್ಟಾರ್‌ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಭೂಮಿಪೂಜೆ ಮತ್ತು ಶಿಲಾನ್ಯಾಸ’ ಕಾರ್ಯಕ್ರಮವನ್ನು ಶೃಂಗೇರಿಯ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಅನುಗ್ರಹ ಪೂರ್ವಕ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಗುರುವಾರ ಯಡಾಡಿ ಮತ್ಯಾಡಿಯಲ್ಲಿ ನೆರವೇರಿಸಿದರು.

Advertisement

ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.ಶ್ರೀಗಳು ಆಶೀರ್ವಚನ ನೀಡಿ, ಮಕ್ಕಳಲ್ಲಿ ದೇಶದ ಉಜ್ವಲ ಭವಿಷ್ಯವನ್ನು ನೋಡುತ್ತಿದ್ದೇವೆ ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾಯುತವಾದ ಶಿಕ್ಷಣ ನೀಡುವ ಜತೆಗೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಗೌರವಿಸಿ ವೇದಿಕೆ ಕಲ್ಪಿಸಬೇಕಾದ ಅನಿವಾರ್ಯ ಇದೆ. ಸುಜ್ಞಾನಿಗಳಿಗೆ ಜಗತ್ತಿನ ಸತ್ಯ ಏನು ಎನ್ನುವ ಅರಿವಾಗುತ್ತಾ ಹೊಂದಂತೆ ಸದಾ ವಿನಯಶೀಲರಾಗುತ್ತಾರೆ. ಮಕ್ಕಳ ವಿದ್ಯಾಭ್ಯಾಸದ ಕಾಲ ಬಹಳಮುಖ್ಯವಾಗಿದ್ದು, ಜೀವನದಲ್ಲಿ ಅಮೂಲ್ಯ ಸಮಯ ವ್ಯರ್ಥ ಮಾಡಬಾರದು. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸಂಸ್ಕಾಯುತರನ್ನಾಗಿಸುವ ತಯಾರಿ ಮಾಡುವುದು ಕೂಡ ಗುರುಗಳ ಕರ್ತವ್ಯ, ನಮ್ಮ ಸಂಸ್ಕೃತಿಯ ವಿಚಾರ ಬಂದಾಗ ಎಲ್ಲರೂ ಶ್ರದ್ಧಾಳುಗಳಾಗಿ, ನಮ್ಮ ಮೂಲ ಧರ್ಮ ಸಂಸ್ಕೃತಿಗಳನ್ನು ಮರೆಯಬಾರದು ಎಂದು ನುಡಿದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ಹೊಂಬಾಡಿ ಮಂಡಾಡಿ ಗ್ರಾ.ಪಂ. ಉಪಾಧ್ಯಕ್ಷ ಬಿ. ಅರುಣ್‌ ಕುಮಾರ್‌ ಹೆಗ್ಡೆ, ಎಂ.ಎಂ. ಹೆಗ್ಡೆ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಎಂ. ಮಹೇಶ್‌ ಹೆಗ್ಡೆ ಮೊಳಹಳ್ಳಿ, ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸಬ್ಲಾಡಿ ಮಂಜಯ್ಯ ಶೆಟ್ಟಿ, ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ಅಧ್ಯಕ್ಷ ಡಾ| ರಮೇಶ್‌ ಶೆಟ್ಟಿ, ಕಾರ್ಯ ದರ್ಶಿ ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸುಜ್ಞಾನ ಎಜು ಕೇಶನಲ್‌ ಟ್ರಸ್ಟ್‌ ಅಧ್ಯಕ್ಷ ಡಾ| ರಮೇಶ್‌ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು.

 

Advertisement

Udayavani is now on Telegram. Click here to join our channel and stay updated with the latest news.

Next