Advertisement

ವ್ಯಕ್ತಿಯ ಜೀವನದ ಪರಿಪೂರ್ಣತೆಗೆ ಧರ್ಮ ಅನಿವಾರ್ಯ

07:29 AM Feb 20, 2019 | Team Udayavani |

ಅರಸೀಕೆರೆ: ವ್ಯಕ್ತಿಯ ಜೀವನದ ಪರಿಪೂರ್ಣತೆಗೆ ಧರ್ಮ ಅನಿವಾರ್ಯ,ಆದರೆ ಧರ್ಮದ ಸ್ವರೂಪ ಕೇವಲ ಆಚಾರ ವಿಚಾರಗಳ ಸಂಪ್ರದಾಯ ಬೆಳೆಸುವ ಸಮುದಾಯವಲ್ಲ ಅದು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಬೆಳೆವಣಿಗೆಯ ಸಮತೋಲನಕ್ಕೆ ಸಹಾಯಕವಾಗುವುದೇ ವಿಶ್ವಮಾನವಧರ್ಮ ಎಂದು ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಕಣಕಟ್ಟೆ ಹೋಬಳಿಯ ಚಿಕ್ಕಮೇಟಿಕುರ್ಕೆ ಗ್ರಾಮದ ಬಸವೇಶ್ವರಸ್ವಾಮಿ ದೇವಾಲಯದಲ್ಲಿನ ಬಸವೇಶ್ವರ ಸ್ವಾಮಿಗೆ ಬೆಳ್ಳಿ ಮುಖಪದ್ಮ ಸಮರ್ಪಣೆ ಧಾರ್ಮಿಕ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಶರಣರ ಧರ್ಮ ಶ್ರೇಷ್ಠ: ಧರ್ಮ ಎನ್ನುವುದು ಕೇವಲ ಆಚಾರ ವಿಚಾರಗಳ ಸಂಪ್ರದಾಯ ಗಳನ್ನು ಪಾಲಿಸಿಕೊಂಡು ಬೆಳೆಯುವ ಸಮಾಜವಲ್ಲಿ ಅದು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಬೆಳೆವಣಿಗೆಯ ಸಮತೋಲನಕ್ಕೆ ಸಹಾಯಕವಾಗಬೇಕಾಗುತ್ತದೆ. ಧರ್ಮ ವಿಚಾರಗಳು ಓರೆಗಲ್ಲಿಗೆ ಉಜ್ಜಿದಷ್ಟು ಹೆಚ್ಚು ಹೊಳಪು ಕೊಡುವ ಶಕ್ತಿ ಪೂರ್ಣವಾಗುತ್ತದೆ.

ಅಂತಹ ಸನಾತನ ಸಂಸ್ಕೃತಿಯ ಆಚಾರ ವಿಚಾರಗಳ ಸಂದೇಶವನ್ನು ಸಮಾಜಕ್ಕೆ ನೀಡುವುದೇ ನಿಜ ವಾದ ಧರ್ಮವಾಗಿದ್ದು, ಅಂತಹ ಧರ್ಮವನ್ನು ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರು ಆಚರಿಸಿ ತೋರಿಸಿದ ಧರ್ಮ ಎಂದರೆ ಎಂದಿಗೂ ತಪ್ಪಾಗಲಾರದು ಎಂದು ಹೇಳಿದರು. 

ಯೋಧರ ಹತ್ಯೆಗೆ ಖಂಡನೆ: ಡಿ.ಎಂ.ಕುರ್ಕೆ ಬೂದಿಹಾಳ್‌ ವಿರಕ್ತಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮಾತನಾಡಿ ನಮ್ಮ ಭಾರತೀಯ ಸೈನಿಕರು ಅತ್ಯಂತ ಶಾಂತಿ ಪ್ರಿಯರಾಗಿದ್ದು, ನಮ್ಮ ಸೆ„ನಿಕರ ತಾಳ್ಮೆ ಹಾಗೂ ಸಂಯಮವನ್ನು ದುರುಪಯೋಗಪಡಿಸಿಕೊಂಡು ಉಗ್ರಗಾಮಿಗಳು ಜಮ್ಮು ಕಾಶ್ಮೀರದ‌ಲ್ಲಿ 44 ಯೋಧರನ್ನು ಬಲಿ ತೆಗೆದುಕೊಂಡಿರುವ ಘಟನೆಯನ್ನು ಪ್ರತಿಯೊಬ್ಬರು ಅತ್ಯಂತ ಉಗ್ರವಾಗಿ ಖಂಡಿಸಿ ಬೇಕಾಗಿದ್ದು ಪ್ರತಿಯೊಬ್ಬ ಭಾರತೀಯರು ಹುತಾತ್ಮ ಯೋಧರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಬೇಕೆಂದು ಹೇಳಿದರು. 

Advertisement

ಸಿದ್ಧಗಂಗಾ ಶ್ರೀ ಸ್ಮರಣೆ: ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ವಿಶ್ವಮಾನವ ಸಂದೇಶವನ್ನು ಸಾರುವ ನಮ್ಮ ಧರ್ಮ ಹಾಗೂ ಪರಂಪರೆಗಳು ಸದಾಕಾಲ ಲೋಕ ಕ್ಷೇಮವನ್ನೇ ಹಾರೈಸುತ್ತವೆ. ಅದಕ್ಕಾಗಿ ತಮ್ಮ ಜೀವಮಾನವನ್ನೇ ಅನೇಕ ಸಾಧು ಸಂತರು ಮಾಹನೀಯರು ಸಮರ್ಪಿಸಿಕೊಂಡಿದ್ದಾರೆ. ಅಂತಹ ಸ್ವಾಮೀಜಿಗಳಲ್ಲಿ ನಡೆದಾಡುವ ದೇವರು ಲಿಂ. ಡಾ.ಶಿವಕುಮಾರ ಸ್ವಾಮೀಜಿಗಳು ಪ್ರಾತಃಸ್ಮರಣೀ ಯರಾಗಿ ಜನಮನದಲ್ಲಿ ಉಳಿದಿದ್ದಾರೆ ಎಂದರು

ಕಾರ್ಯಕ್ರಮದಲ್ಲಿ ಶಿಶುನಾಳ ಶರೀಫ ಶಿವಯೋಗಿಗಳ ತತ್ವ ಪ್ರಚಾರಕರು ತುಮಕೂರಿನ ಕೆಎಂಸಿಎನ್‌ ಮೂರ್ತಿ, ವಿಧಾನಪರಿಷತ್‌ ಸದಸ್ಯರಾದ ಗೋಪಾಲಸ್ವಾಮಿ , ಜಿಪಂ ಸದಸ್ಯ ಎಂ.ಎಸ್‌.ವಿ ಸ್ವಾಮಿ, ಕಾಂಗ್ರೆಸ್‌ ಮುಖಂಡರಾದ ವಿಜಯಕುಮಾರ್‌,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೆ.ಎಸ್‌ಚಂದ್ರಶೇಖರ, ಪಿಕಾರ್ಡ್‌ ಬ್ಯಾಂಕ್‌ಅಧ್ಯಕ್ಷ ಎಸ್‌.ಸಿ ಗಂಗಾಧರ್‌, ಗ್ರಾಪಂ ಅಧ್ಯಕ್ಷೆ ಹೇಮಾವತಿ , ಗ್ರಾಪಂ ಸದಸ್ಯ ಪುಷ್ಪ ಸುರೇಶ್‌,ಗಂಗಾಧರಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಎಸ್‌. ಮೋಹನ್‌ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next