Advertisement

ಬಳಕೆದಾರರಿಗೆ ರಿಲೀಫ್ : ಎಲ್‌ಪಿಜಿ ಸಿಲಿಂಡರ್‌ 35.50 ರೂ. ಅಗ್ಗ

11:43 AM Apr 02, 2018 | udayavani editorial |

ಹೊಸದಿಲ್ಲಿ : ಪೆಟ್ರೋಲ್‌, ಡೀಸಿಲ್‌, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳು ದಿನೇ ದಿನೇ ಏರುತ್ತಿರುವ ಈ ಸಂದರ್ಭದಲ್ಲಿ  ತೈಲ ಕಂಪೆನಿಗಳು ಸಹಾಯಧನ ರಹಿತವಾದ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 35.50 ರೂ.ಗಳಷ್ಟು ಇಳಿಸುವ ಮೂಲಕ ಬಳಕೆದಾರರಿಗೆ ಸ್ವಲ್ಪ ಮಟ್ಟಿನ ರಿಲೀಫ್ ನೀಡಿದೆ. 

Advertisement

ಮಾರ್ಚ್‌ ಆದಿಯಲ್ಲಿ ಅಂತಾರಾಷ್ಟ್ರೀಯ ಎಲ್‌ಪಿಜಿ ಬೆಲೆ ಇಳಿಕೆ ಉಂಟಾಗಿದ್ದಾಗ ತೈಲ ಕಂಪೆನಿಗಳು ಅದರ ಲಾಭವನ್ನು ಸಹಾಯಧನ ವಿಲ್ಲದ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಇಳಿಸಿದ್ದವು. ಇದೀಗ ಅದೇ ರೀತಿಯ ಇಳಿಕೆಯನ್ನು ಒಂದೇ ತಿಂಗಳ ಒಳಗೆ ಎರಡನೆ ಬಾರಿಗೆ ಅವು ಮಾಡಿದ್ದು ಗ್ರಾಹಕರಿಗೆ ಇನ್ನಷ್ಟು ರಿಲೀಫ್ ಸಿಕ್ಕಿದಂತಾಗಿದೆ 

19 ಕಿಲೋ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಈಗಿನ್ನು 54 ರೂ. ನಷ್ಟು ಅಗ್ಗವಾಗಲಿದೆಯಾದರೆ 5 ಕಿಲೋ ತೂಕದ ಸಿಲಿಂಡರ್‌ 15ರೂ. ನಷ್ಟು ಅಗ್ಗವಾಗಿದೆ. 

14.2 ಕಿಲೋ ತೂಕದ ಸಹಾಯಧನದ ಎಲ್‌ಪಿಜಿ ಸಿಲಿಂಡರ್‌ಗಳು ದೇಶದಲ್ಲಿನ ಗ್ರಾಹಕರಿಗೆ ಪ್ರಕೃತ ವರ್ಷಕ್ಕೆ 12 ಸಿಗುತ್ತಿವೆ. ಇದಕ್ಕೆ ಮೀರಿದ ಯಾವುದೇ ಬೇಡಿಕೆಯನ್ನು ಗ್ರಾಹಕರು ಸಹಾಯಧನರಹಿತ ಸಿಲಿಂಡರ್‌ಗಳನ್ನು ಪಡೆದುಕೊಳ್ಳುವ ಮೂಲಕ ಪೂರೈಸಿಕೊಳ್ಳಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next