Advertisement

5G ತಂತ್ರಜ್ಞಾನದ ಅನುಭವ ಹೆಚ್ಚಿಸಲು ರಿಲಯನ್ಸ್ ಜಿಯೋ-ಒನ್‌ಪ್ಲಸ್ ಇಂಡಿಯಾ ಪಾಲುದಾರಿಕೆ

11:05 PM Jan 26, 2024 | Team Udayavani |

ಬೆಂಗಳೂರು: ಭಾರತದ ಅತಿದೊಡ್ಡ ಡಿಜಿಟಲ್ ಸೇವಾ ಸಂಸ್ಥೆ ರಿಲಯನ್ಸ್ ಜಿಯೋ ಹಾಗೂ ಜಾಗತಿಕ ತಂತ್ರಜ್ಞಾನ ಬ್ರಾಂಡ್ ಆದ ಒನ್ ಪ್ಲಸ್ ಪಾಲುದಾರಿಕೆ ಘೋಷಣೆ ಮಾಡಿವೆ.

Advertisement

ಎರಡೂ ಸಂಸ್ಥೆಗಳು ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಭಾರತದಲ್ಲಿ 5ಜಿ ತಂತ್ರಜ್ಞಾನದ ಸಂಪೂರ್ಣ ಸಾಮರ್ಥ್ಯವನ್ನು ದೊರಕಿಸಲು ಪಾಲುದಾರಿಕೆಯನ್ನು ಘೋಷಿಸಿವೆ.

ಈ ಸಹಯೋಗವು ಬಳಕೆದಾರರಿಗೆ ಹೊಸ ಅನುಭವಗಳನ್ನು ನೀಡಲಿದ್ದು, ಜಿಯೋದ ಮೂಲಸೌಕರ್ಯ ಮತ್ತು ಒನ್ ಪ್ಲಸ್ ನ ತಾಂತ್ರಿಕ ನೈಪುಣ್ಯತೆಯನ್ನು ಬಳಸಿಕೊಳ್ಳುತ್ತದೆ.

ಈ ಮೈತ್ರಿಯು ಒನ್ ಪ್ಲಸ್ ಮತ್ತು ಜಿಯೋ ಟ್ರೂ 5ಜಿ ಬಳಕೆದಾರರಿಗೆ ವಿಭಿನ್ನ ವೈಶಿಷ್ಟ್ಯಗಳನ್ನು ಮತ್ತು ಅದ್ಭುತವಾದ ನೆಟ್‌ವರ್ಕ್ ಅನುಭವವನ್ನು ಒದಗಿಸುವ ಗುರಿ ಹೊಂದಿದೆ. ಎರಡೂ ಬ್ರ್ಯಾಂಡ್‌ಗಳು ಅತ್ಯಾಧುನಿಕ 5ಜಿ ಇನ್ನೋವೇಶನ್ ಲ್ಯಾಬ್ ಸ್ಥಾಪನೆಯನ್ನು ಘೋಷಿಸಿವೆ. ಈ ಸ್ಥಳವು ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ಒನ್ ಪ್ಲಸ್ ಮತ್ತು ಜಿಯೋ ಟ್ರೂ 5ಜಿ ಬಳಕೆದಾರರಿಗೆ ಇದರ ಪ್ರಯೋಜನ ಲಭಿಸಲಿದೆ.

ಜಿಯೋ ಟ್ರೂ 5ಜಿ ಭಾರತದಲ್ಲಿ ಅತ್ಯುತ್ತಮವಾದ ದೃಢವಾದ 5ಜಿ ನೆಟ್‌ವರ್ಕ್ ಆಗಿದೆ. ಭಾರತದಲ್ಲಿ ಸಂಪೂರ್ಣ 5ಜಿ ನಿಯೋಜನೆಯ ಶೇ 85ರಷ್ಟು ಜಿಯೋದ್ದಾಗಿದೆ. ನಮ್ಮ ಬಳಕೆದಾರರಿಗೆ 5ಜಿ ಅನುಭವಗಳನ್ನು ತೆರೆದಿಡುವ ಸಮಯ ಬಂದಿದೆ ಮತ್ತು ಒನ್ ಪ್ಲಸ್ ಜೊತೆಗಿನ ಈ ಪಾಲುದಾರಿಕೆಯು ಆ ದಿಕ್ಕಿನಲ್ಲಿ ಮುಖ್ಯ ಹೆಜ್ಜೆಯಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ನಮ್ಮ ಬಳಕೆದಾರರು ಅತ್ಯುತ್ಕೃಷ್ಟ ಮತ್ತು ವರ್ಧಿತ ಗೇಮಿಂಗ್, ಸ್ಟ್ರೀಮಿಂಗ್ ಮತ್ತು 5ಜಿ ಉತ್ತಮ ಬಳಕೆಯ ಅನುಭವವನ್ನು ಪಡೆಯುತ್ತಾರೆ,” ಎಂದು ಜಿಯೋ ವಕ್ತಾರರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next