Advertisement

ಗ್ರಾಹಕ ಸ್ನೇಹಿ ಯೋಜನೆಗಳನ್ನು ಪರಿಚಯಿಸಿದ ಜೀವೋ : ಮಾಹಿತಿ ಇಲ್ಲಿದೆ

05:56 PM Jul 25, 2021 | |

ನವ ದೆಹಲಿ : ಟೆಲಿಕಾಂ ನೆಟ್ ವರ್ಕ್ ನ ದೈತ್ಯ ಸಂಸ್ತೆ ರಿಲಯನ್ಸ್ ತನ್ನ ಪ್ರೀಪೇಯ್ಡ್ ಯೋಜನೆಗಳ ಸಾಲಿಗೆ ಹೊಸದೊಂದು ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.

Advertisement

365 ದಿನಗಳ ಮಾನ್ಯತೆ ಹೊಂದಿರುವ 3,499 ರೂ ಯೋಜನೆ ವಾರ್ಷಿಕ ಯೋಜನೆಯೊಂದನ್ನು ಪರಿಚಯಿಸಿದ್ದು, ಪ್ರತಿದಿನ 3ಜಿಬಿ ಡೇಟಾ ಪಡೆಯಬಹುದಾಗಿದೆ. ಒಟ್ಟಾರೆ 1,095 ಜಿಬಿ ಡೇಟಾ ನೀಡುತ್ತದೆ. ಗ್ರಾಹಕರು ದೈನಂದಿನ ಡೇಟಾ ಮುಗಿಸಿದರು 64ಕೆಬಿಪಿಎಸ್ ವೇಗದಲ್ಲಿ ಇಂಟರ್ ನೆಟ್ ನನ್ನು ಬಳಸಬಹುದಾಗಿದೆ. ಅಷ್ಟಲ್ಲದೆ, ಅನಿಯಮಿತ ಕರೆ ಸೌಲಭ್ಯ, ದಿನಕ್ಕೆ ಉಚಿತ 100 ಎಸ್ಎಮ್ಎಸ್ ಸಿಗುತ್ತದೆ. ಜಿಯೋಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ನಂತಹ ವಿವಿಧ ಅಪ್ಲಿಕೇಶನ್ ನನ್ನು ಕೂಡ ಪ್ರವೇಶಿಸಬಹುದಾಗಿದೆ.

ಇದನ್ನೂ ಓದಿ : ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ ಬನ್ನಿ; ಬಿಜೆಪಿಗೆ ಡಿಕೆಶಿ ಸವಾಲ್

2,399 ಮತ್ತು 2,599 ರೂ ಪ್ಲಾನ್ 365 ದಿನಗಳ ಯೋಜನೆಯಾಗಿದ್ದು, ಇವೆರಡು ಪ್ಲಾನ್ ​ಗಳು ಪ್ರತಿದಿನ 2ಜಿಬಿ ಡೇಟಾ ನೀಡುತ್ತದೆ. ಮಾತ್ರವಲ್ಲದೇ, ಅನಿಯಮಿಕ ಕರೆ, 100 ಎಸ್ಎಮ್ಎಸ್ ಮತ್ತು ಜಿಯೋ ಆ್ಯಪ್ ಪ್ರವೇಶಕ್ಕೂ ಕೂಡ ಅನುಮತಿಸುತ್ತದೆ.

ಇನ್ನು, 2599 ರೂ. ಯೋಜನೆಯು ನಿತ್ಯ 2 ಜಿಬಿ ಡೇಟಾವನ್ನು ನೀಡುವುದರೊಂದಿಗೆ ಡಿಸ್ನಿ+ ಹಾಟ್ ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ಕೂಡ ನೀಡುತ್ತದೆ.

Advertisement

ಮಾತ್ರವಲ್ಲದೇ, ರಿಲಯನ್ಸ್ ಜಿವೋ ಇತ್ತೀಚೆಗೆ ಅತ್ಯಂತ ಅಗ್ಗದ 127 ರೂ, 247 ರೂ, 447 ರೂ, 597 ರೂ ಮತ್ತು 2,397 ರೂ  ಪರಿಚಯಿಸಿದೆ.

ಇದನ್ನೂ ಓದಿ : ಬೆಟ್ಟದಿಂದ ಉರುಳಿದ ಬಂಡೆಗಳು; 9 ಜನರ ಸಾವು; ಮುರಿದು ಬಿದ್ದ ಬ್ರಿಡ್ಜ್

Advertisement

Udayavani is now on Telegram. Click here to join our channel and stay updated with the latest news.

Next