Advertisement

12 ಲಕ್ಷ ಕೋ.ರೂ. ದಾಟಿದ ರಿಲಯನ್ಸ್‌ ಮೌಲ್ಯ

10:41 AM Jul 14, 2020 | mahesh |

ಮುಂಬಯಿ: ವಿಶ್ವದ 8ನೇ, ಏಷ್ಯಾದ ನಂ.1 ಶ್ರೀಮಂತ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಓಟ ಭರ್ಜರಿಯಾಗಿ ಮುಂದುವರಿದಿದೆ. ಇದೀಗ ರಿಲಯನ್ಸ್‌ನ ಮಾರುಕಟ್ಟೆ ಮೌಲ್ಯ 12 ಲಕ್ಷ ಕೋಟಿ ರೂ. ದಾಟಿದೆ. ಈ ಸಾಧನೆ ಮಾಡಿದ ಭಾರತದ ಮೊದಲ ಕಂಪೆನಿ ರಿಲಯನ್ಸ್‌! ಇದಕ್ಕೆ ಕಾರಣ ರಿಲಯನ್ಸ್‌ನಲ್ಲಿ 12ನೇ ಸಂಸ್ಥೆಯಾಗಿ ಕ್ವಾಲ್ಕಮ್‌ ವೆಂಚರ್ಸ್‌ 730 ಕೋಟಿ ರೂ. ಹೂಡಿಕೆ ಮಾಡುತ್ತದೆ ಎಂದು ಗೊತ್ತಾಗಿದ್ದು. ಇದರಿಂದ ಒಮ್ಮೆಲೇ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್‌ ಷೇರಿನ ಮೌಲ್ಯ ಸಾರ್ವಕಾಲಿಕ ಗರಿಷ್ಠಕ್ಕೆ ಮುಟ್ಟಿದವು. ಬಿಎಸ್‌ಇನಲ್ಲಿ ಕಳೆದ ರಿಲಯನ್ಸ್‌ ಷೇರಿನ ಬೆಲೆ 1,878.50 ರೂ. ಇತ್ತು. ಸೋಮವಾರ ಅದು 1947 ರೂ.ಗೇರಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next