Advertisement

ರಿಲಯನ್ಸ್‌ ವಿಸ್ತರಣೆ: ಜಾಗತಿಕ ಕಂಪೆನಿಗಳಿಗೆ ನಡುಕ

08:12 AM Jul 18, 2020 | mahesh |

ಮುಂಬಯಿ: ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಜಾಗತಿಕ ಪ್ರಬಲ ಹೂಡಿಕೆದಾ ರರನ್ನು ಆಕರ್ಷಿಸುತ್ತಿದೆ. ದಿನೇ ದಿನೇ ಹಲವಾರು ಮಗ್ಗಲುಗಳಲ್ಲಿ ತನ್ನ ಉದ್ಯಮವನ್ನು ವಿಸ್ತರಿಸುತ್ತಿದೆ. ಮುಖ್ಯವಾಗಿ ಡಿಜಿಟಲ್‌ ಹಾಗೂ ತಂತ್ರಜ್ಞಾನದಲ್ಲಿ ಅದು ಅತ್ಯಂತ ಪ್ರಬಲವಾಗಿ ಬೆಳೆಯುತ್ತಿದೆ. ಇದು ಜಾಗತಿಕ ಡಿಜಿಟಲ್‌ ದೈತ್ಯರಾದ ಅಮೆಜಾನ್‌, ವಾಲ್‌ಮಾರ್ಟ್‌, ಝೂಮ್‌ಗೆ ಸವಾಲಾಗಿ ಪರಿಣಮಿಸಿದೆ. ರಿಲಯನ್ಸ್‌ಗೆ ಇತ್ತೀಚೆಗೆ ಸಿಕ್ಕಿರುವ ಪ್ರಬಲ ಬೆಂಬಲ ವೆಂದರೆ ಫೇಸ್‌ಬುಕ್‌ ಹಾಗೂ ಗೂಗಲ್‌ನದ್ದು. ಮಾರುಕಟ್ಟೆ ತಜ್ಞರು ರಿಲಯನ್ಸ್‌, ಚೀನದ ಅಲಿಬಾಬಾ ಹಾಗೂ ಟೆನ್ಸೆಂಟ್‌ ರೀತಿ ಬೆಳೆಯುತ್ತಿದೆ ಎಂದು ವಿಶ್ಲೇಷಿಸಿದ್ದಾರೆ. ಮೊನ್ನೆಯಷ್ಟೇ ಮುಗಿದ ವಾರ್ಷಿಕ ಸರ್ವಸದಸ್ಯರ ಸಭೆ ನಂತರ ರಿಲಯನ್ಸ್‌ ಜಾಗತಿಕವಾಗಿ ಪ್ರಬಲವಾಗುತ್ತಿರುವ ಸುಳಿವು ನೀಡಿದೆ. ಏಷ್ಯಾದ ಅಗ್ರ, ವಿಶ್ವದ 6ನೇ ಶ್ರೀಮಂತ ಎನಿಸಿಕೊಂಡಿ­ರುವ ಮುಕೇಶ್‌ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್‌ ದೊಡ್ಡದಾಗಿ ವಿಸ್ತರಿಸುತ್ತಿದೆ. ತೈಲೋತ್ಪನ್ನ, ಚಿಲ್ಲರೆ ವ್ಯಾಪಾರ ಮಳಿಗೆಗಳು, ದೂರ­ಸಂಪರ್ಕ ಸೇವಾ ಸಂಸ್ಥೆ (ಜಿಯೋ), ಅಂತರ್ಜಾಲಾ ಧಾರಿತ ಮಾರಾಟ ತಾಣ (ಜಿಯೋ ಮಾರ್ಟ್‌), ತಂತ್ರಜ್ಞಾನ ಸೇವೆಗಳು (5ಜಿ ತರಂಗಾಂತರ ಅಭಿವೃದ್ಧಿ, ಜಿಯೋ ಕನ್ನಡಕ, ಜಿಯೋ ಹಾಟ್‌ಸ್ಪಾಟ್‌, ಜಿಯೋ ಫೈಬರ್‌, ಜಿಯೋ ಮೀಟ್‌ನಂತಹ ಸಾಧನಗಳು) ಹೀಗೆ ಎಲ್ಲ ಕಡೆಗೆ ಚಾಚಿಕೊಂಡಿದೆ.

Advertisement

ಏರಿಕೆಗೆ ಕಾರಣವೇನು?: ರಿಲಯನ್ಸ್‌ ಅತಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೇವೆ ನೀಡುವ ಮೂಲಕ ನಾಲ್ಕೇ ವರ್ಷದಲ್ಲಿ ತನ್ನ ದೂರಸಂಪರ್ಕ ಸಂಸ್ಥೆಯನ್ನು ನಂ.1 ಆಗಿಸಿತು. ಇದೇ ರೀತಿ ಹಲವು ಪ್ರಯೋಗಗಳನ್ನು ಅದು ನಿರಂತರವಾಗಿ ಮಾಡುತ್ತಲೇ ಇದೆ. ಹಾಗೆಯೇ ರಿಲಯನ್ಸ್‌ ನೇತಾರ ಮುಕೇಶ್‌ಗೆ ದೇಶದ ಅಧಿಕಾರ ವರ್ಗದ ನೆರವೂ ಇದೆ. ಸ್ವತಃ ಮೋದಿಯೇ ಬೆನ್ನಿಗೆ ನಿಂತಿದ್ದಾರೆಂದೂ ತಜ್ಞರು ವಿಶ್ಲೇಷಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next