Advertisement

ರಫೇಲ್‌ ಡೀಲ್‌ ಸುಪ್ರೀಂ ತೀರ್ಪಿಗೆ ರಿಲಯನ್ಸ್‌ ಅನಿಲ್‌ ಅಂಬಾನಿ ಸ್ವಾಗತ

12:25 PM Dec 14, 2018 | udayavani editorial |

ಹೊಸದಿಲ್ಲಿ : ರಫೇಲ್‌ ಫೈಟರ್‌ ಜೆಟ್‌ ಡೀಲ್‌ ನಲ್ಲಿ ಯಾವುದೇ ಅಕ್ರಮ, ಅವ್ಯವಹಾರ ನಡೆದಿಲ್ಲ ಎಂದು ಕೇಂದ್ರ ಸರಕಾರಕ್ಕೆ ಕ್ಲೀನ್‌ ಚಿಟ್‌ ನೀಡುವ ತೀರ್ಪನ್ನು ಸುಪ್ರೀಂ ಕೋರ್ಟ್‌ ಇಂದು ಪ್ರಕಟಿಸಿರುವುದನ್ನು ರಿಲಯನ್ಸ್‌ ಡಿಫೆನ್ಸ್‌ ಮುಖ್ಯಸ್ಥ ಅನಿಲ್‌ ಅಂಬಾನಿ ಸ್ವಾಗತಿಸಿದ್ದಾರೆ.

Advertisement

ರಫೇಲ್‌ ಡೀಲ್‌ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ರಾಜಕೀಯ ಪ್ರೇರಿತ ಆರೋಪಗಳೆಲ್ಲ ಸುಳ್ಳೆಂದು ಇದೀಗ ಉನ್ನತ ಕೋರ್ಟ್‌ ತೀರ್ಪಿನ ಮೂಲಕ ಸಾಬೀತಾಗಿರುವುದು ಸಂತಸ, ತೃಪ್ತಿ ತಂದಿದೆ ಎಂದು ಅನಿಲ್‌ ಅಂಬಾನಿ ಹೇಳಿದ್ದಾರೆ. 

ಅನಿಲ್‌ ಅಂಬಾನಿಯವರ ರಿಲಯನ್ಸ್‌ ಡಿಫೆನ್ಸ್‌ ಕಂಪೆನಿಯನ್ನು ರಫೇಲ್‌ ಫೈಟರ್‌ ಜೆಟ್‌ ಪೂರೈಸುವ ಫ್ರಾನ್ಸಿನ ಡಸಾಲ್ಟ್ ಕಂಪೆನಿಯು ತನ್ನ ಮಧ್ಯವರ್ತಿಯನ್ನಾಗಿ ನೇಮಿಸಿಕೊಂಡಿರುವುದು ಪ್ರಶ್ನಾರ್ಹವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಿದೆಯಲ್ಲದೆ, ಈ ಡೀಲ್‌ ನಿರ್ಧಾರ ಪ್ರಕ್ರಿಯೆಯಲ್ಲಿ  ಯಾವುದೇ ಸಂದೇಹಕ್ಕೆ ಕಾರಣಗಳಿಲ್ಲ ಎಂದು ಹೇಳಿರುವುದು ಕೇಂದ್ರ ಸರಕಾರಕ್ಕೆ ಬಿಗ್‌ ರಿಲೀಫ್ ಆಗಿದೆ.

ನನ್ನ ಕಂಪೆನಿಯು ದೇಶದ ಭದ್ರತೆಗೆ ಮತ್ತು ಡಸಾಲ್ಟ್ ಕಂಪೆನಿಯೊಂದಿಗಿನ ಆಫ್ಸೆಟ್‌ ಡೀಲ್‌ ಅನುಷ್ಠಾನಕ್ಕೆ ಬದ್ಧವಾಗಿದೆ ಎಂದು ಅನಿಲ್‌ ಅಂಬಾನಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next