ಬೆಂಗಳೂರು: ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಮೇ 1ರಿಂದ ದೇಶಾದ್ಯಂತ ಜಾರಿಯಾಧಿಗಿದ್ದರೂ ರಾಜ್ಯದಲ್ಲಿ ಇನ್ನೂ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ರಚಿಸಿ ನಿಯಮಾವಳಿಗಳನ್ನು ರೂಪಿಸದ ಕಾರಣ ಕಾಯ್ದೆ ಅನುಷ್ಠಾನವಾಗಲು ಇನ್ನೂ ಕೆಲವು ದಿನ ಬೇಕಾಗಬಹುದು.
ಕಾಯ್ದೆ ಜಾರಿ ಸಂಬಂಧ ಈಗಾಗಲೇ ಕರಡು ನಿಯಮಾವಳಿ ರೂಪಿಸಿ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ಆದರೆ ಇನ್ನೂ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ. ಸದ್ಯದಲ್ಲೇ ಸಂಪುಟ ಸಭೆಯಲ್ಲಿ ನಿಯಮಾವಳಿ ಬಗ್ಗೆ ನಿರ್ಧಾರ ಕೈಗೊಂಡರೆ ನಂತರ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.
ಕಾಯ್ದೆ ಜಾರಿಯಾದರೆ ಗೃಹ ನಿರ್ಮಾಣ ಯೋಜನೆಗಳ ನೋಂದಣಿ ಕಡ್ಡಾಯವಾಗಲಿದೆ. ಆದರೆ ಈಗಾಗಲೇ ಪ್ರಗತಿಯಲ್ಲಿರುವ ಗೃಹ ನಿರ್ಮಾಣ ಯೋಜನೆಗಳ ನೋಂದಣಿಯೂ ಕಡ್ಡಾಧಿಯವಾಗಲಿದೆಯೋ ಅಥವಾ ಕಾಯ್ದೆ ಜಾರಿ ದಿನದಿಂದ ಆರಂಭವಾಗುವ ಹೊಸ ವಸತಿ ಯೋಜನೆಗಳಿಗಷ್ಟೇ ಅನ್ವಧಿಯಧಿವಾಗುವಂತೆ ಅವಕಾಶ ಕಲ್ಪಿಸುವುದೋ ಎಂಬುದನ್ನು ಕಾದು ನೋಡಬೇಕಿದೆ.
ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಒಡನಾಟ ಹೊಂದಿರುವ, ಪರೋಕ್ಷವಾಗಿ ಗೃಹ ನಿರ್ಮಾಣ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಕೆಲ ಜನಪ್ರತಿನಿಧಿಗಳು ಕಾಯ್ದೆ ಜಾರಿ ಬಳಿಕ ಆರಂಭವಾಗುವ ಹೊಸ ವಸತಿ ಯೋಜನೆಗಳಿಗಷ್ಟೇ ಅನ್ವಯಿಸಬೇಕು ಎಂದು ಒತ್ತಡ ಹೇರುತ್ತಿರುವುದರಿಂದ ನಿಯಮಾವಳಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಸದ್ಯದಲ್ಲೇ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದು ಅಂತಿಮಧಿಗೊಂಡರೆ ಬಳಿಕ ಅಧಿಸೂಚನೆ ಪ್ರಕಟವಾಧಿಗಧಿಧಿಲಿದೆ. ಆನಂತರ ನಿಯಮಾವಳಿಯಂತೆ ಕ್ರಮ ವಹಿಸಲು ಕೆಲ ತಿಂಗಳು ಬೇಕಾಗಧಿಬಹುದು ಎಂದು ಮೂಲಗಳು ತಿಳಿಸಿವೆ.
ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಸಂಬಂಧ ಕರಡು ನಿಯಮಾವಳಿ ಅಂಶಗಳಿಗೆ ಕೆಲ ಸ್ಪಷ್ಟನೆ ಕೋರಲಾಗಿತ್ತು. ನಿಯಮಾವಳಿ ಅಧಿಸೂಚನೆ ಹೊರಬಿದ್ದ ಬಳಿಕ ಅದನ್ನು ಜಾರಿಗೊಳಿಸಲು ಬದ್ಧ. ನಿಯಮಾವಳಿಧಿಯಲ್ಲಿ ಯಾವುದಾದರೂ ಲೋಪ ಕಂಡುಬಂದರೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು “ಕ್ರೆಡಾಯ್’ನ ಪ್ರಧಾನ ಕಾರ್ಯದರ್ಶಿ ಸುರೇಶ್ ಹರಿ ತಿಳಿಸಿದರು.