Advertisement

ನಂದವಾಡಗಿ ಏತ ನೀರಾವರಿ: 30 ಹಳ್ಳಿಗಳ ಮರು ಸೇರ್ಪಡೆಗೆ ಆಗ್ರಹ

05:32 PM May 13, 2022 | Team Udayavani |

ಮುದಗಲ್ಲ: ಈ ಭಾಗದ ರೈತರ ಜೀವನಾಡಿಯಾದ ನಂದವಾಡಗಿ ಏತ ನೀರಾವರಿ ಯೋಜನೆಯಿಂದ ಕೈ ತಪ್ಪಿರುವ 33 ಹಳ್ಳಿಗಳನ್ನು ಪುನರ್‌ ಸೇರ್ಪಡೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ನಂದವಾಡಿ ಏತ ನೀರಾವರಿ (ಆರ್‌.ಎಲ್‌.590) ಹೋರಾಟ ಸಮಿತಿ ಅಧ್ಯಕ್ಷ ನಾಗನಗೌಡ ಪಾಟೀಲ್‌ ತುರಡಗಿ ಸಿಎಂ ಆಪ್ತಕಾರ್ಯದರ್ಶಿ ಅನಿಲ್‌ ಕುಮಾರ ಅವರಿಗೆ ಸಲ್ಲಿಸಿದರು.

Advertisement

ಹೂನೂರು, ತುರಡಗಿ, ಮಾಕಾಪೂರ, ತಲೆಕಟ್ಟು, ಮರಳಿ, ಅಂಕಲಿಮಠ, ವಂದಾಲಿ, ಆರ್ಯಭೋಗಾಪುರ, ಬ್ಯಾಲಿಹಾಳ, ರಾಮತ್ನಾಳ, ವ್ಯಾಕರನಾಳ, ನಾಗಲಾಪುರ, ಉಳಿಮೇಶ್ವರ, ಪಿಕಳಿಹಾಳ, ಹೆಗ್ಗಾಪೂರ ತಾಂಡಾ, ಹೆಗ್ಗಾಪುರ, ಕೋಮಲಾಪುರ, ಕನಸಾವಿ, ಆದಾಪೂರ, ಬನ್ನಿಗೋಳ, ಚಿಕ್ಕಯರದಿಹಾಳ, ಹಿರೇಯರದಿಹಾಳ, ಜನತಾಪುರ, ಕೆ.ಮರಿಯಮ್ಮನಹಳ್ಳಿ, ಮುದಗಲ್ಲ, ಕನ್ನಾಪೂರಹಟ್ಟಿ, ಬೆಳ್ಳಿಹಾಳ, ಕಾಚಾಪುರ, ಆಶಿಹಾಳ, ಆಶಿಹಾಳ ತಾಂಡಾ, ಮೆಗಳಪೇಟೆ ಸೇರಿದಂತೆ ಹಲವು ಗ್ರಾಮಗಳು ಬಸವಸಾಗರ ಜಲಾಶಯ ಸಮೀಪದಲ್ಲಿಯೇ ಇದ್ದರೂ ಸಹ ನೀರಾವರಿಯಿಂದ ವಂಚಿತವಾಗಿವೆ.

ಸತತ ಬರ ಪರಸ್ಥಿತಿಯಿಂದ ಇಲ್ಲಿನ ಜನರು ದನಕರುಗಳನ್ನು ಸಾಗಿಸಿಕೊಂಡು ದೂರದ ಪ್ರದೇಶಗಳಿಗೆ ಗುಳೆ ಹೋಗುತ್ತಾರೆ. ಇದರಿಂದ ಇಲ್ಲಿನ ಜನರ ಆರ್ಥಿಕ ಪರಸ್ಥಿತಿ ಹದೇಗೆಟ್ಟಿದೆ. ಕಾರಣ ನೀರಾವರಿ ಯೋಜನೆಯಿಂದ ಕೈ ಬಿಟ್ಟಿರುವ ಗ್ರಾಮಗಳನ್ನು ನಂದವಾಡಿ ಏತ ನೀರಾವರಿ ವ್ಯಾಪ್ತಿಗೆ ಸೇರಿಸಬೇಕೆಂಬುವುದು ಇಲ್ಲಿನ ಜನರ ಮತ್ತು ಸಮಿತಿಯ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next