Advertisement
ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ಮಂಗಳವಾರ “ಪ್ರತಿಬಿಂಬ’ ಮಾಹಿತಿ ಕೋಶಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಸರ್ಕಾರದ ಗುರಿ ಮತ್ತು ಸಾಧನೆಗಳ ಬಗ್ಗೆ ನಾಡಿನ ಜನತೆಗೆ ಮಾಹಿತಿ ಒದಗಿಸುವ ವೇದಿಕೆಯಾಗಿ ಪ್ರತಿಬಿಂಬ ಮಾಹಿತಿ ಕೋಶ ರೂಪುಗೊಂಡಿದೆ. ಜನಪ್ರತಿನಿಧಿಗಳು ಜನರಿಗೆ ಉತ್ತರದಾಯಿಗಳಾಗಿರಬೇಕು. ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಆಯ್ಕೆಯಾಗಿ ಬರುವ ಸರ್ಕಾರವು ಚುನಾವಣೆ ವೇಳೆ ನೀಡಿದ ಭರವಸೆಗಳಿಗೆ ಉತ್ತರ ಈ ಮಾಹಿತಿ ಕೋಶದಲ್ಲಿದೆ ಎಂದರು.
Related Articles
ರಾಜ್ಯ ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಜಾರಿ ಹಾಗೂ ನೀಡಿದ ಭರವಸೆಗಳ ಅನುಷ್ಠಾನ, ಪ್ರಮುಖ ಇಲಾಖೆಗಳ ಮಾಸಿಕವಾರು ಪ್ರಗತಿ ಬಗ್ಗೆ ವಿವರ ನೀಡುವ ಮುಖ್ಯಮಂತ್ರಿಗಳ ಮಾಹಿತಿ ಕೋಶ “ಪ್ರತಿಬಿಂಬ’ ರೂಪುಗೊಂಡಿದೆ.
Advertisement
ರಾಜ್ಯದ ಪ್ರಗತಿ ಪಥದ ಮೈಲುಗಲ್ಲುಗಳ ಮಾಹಿತಿ ಬಿಂಬಿಸುವ ಹಾಗೂ ಅಭಿವೃದ್ಧಿಯ ಚಿತ್ರಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವೇ ಅಧಿಕೃತವಾಗಿ ಮಾಹಿತಿ ಕೋಶಕ್ಕೆ ಚಾಲನೆ ನೀಡಿದೆ. ಸರ್ಕಾರದ ಪ್ರಮುಖ ಯೋಜನೆ, ಮಹತ್ವದ ಕಾರ್ಯಕ್ರಮಗಳ ಮಾಹಿತಿಯನ್ನು ತ್ವರಿತ ಹಾಗೂ ನಿಖರವಾಗಿ ನೀಡಲಿದೆ. ಇದರಿಂದ ಸರ್ಕಾರದ ಪ್ರಗತಿ ಪರಿಶೀಲನೆಗೆ ಅನುಕೂಲವಾಗಲಿದೆ.