Advertisement

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣ: ರೀಲ್ಸ್‌ಸ್ಟಾರ್‌ ಸೋನು ಗೌಡಗೆ 14 ದಿನ ನ್ಯಾಯಾಂಗ ಬಂಧನ

02:35 PM Mar 25, 2024 | Team Udayavani |

ಬೆಂಗಳೂರು: ಅಕ್ರಮವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಪೊಲೀಸ್‌ ವಶದಲ್ಲಿದ್ದ ರೀಲ್ಸ್ ಸ್ಟಾರ್‌ ಸೋನು ಶ್ರೀನಿವಾಸ್‌ ಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

Advertisement

ಸೋನು ಗೌಡ ಇತ್ತೀಚೆಗೆ ಚಿಕ್ಕ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ, ದತ್ತು ಪಡೆದಿರುವ ರೀತಿ ನಿಯಮದ ಅನುಸಾರವಾಗಿಲ್ಲ ಎಂಬ ಕಾರಣಕ್ಕೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಸೋನು ಗೌಡರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಫ್ಯಾಂಟಸಿ ಗೇಮ್‌ ನಲ್ಲಿ 1 ಕೋಟಿ ಗೆದ್ದು ರಾತ್ರೋ ರಾತ್ರಿ ಕೋಟ್ಯಧಿಪತಿಯಾದ ಯುವಕ.!

ಪ್ರಕರಣದ ವಿಚಾರಣೆ ಭಾಗವಾಗಿ ಭಾನುವಾರ(ಮಾ.24 ರಂದು) ಬಾಲಕಿ ಸ್ವಗ್ರಾಮವಾದ ಮಸ್ಕಿ ತಾಲೂಕಿನ ಕಾಚಾಪುರಕ್ಕೆ ಸೋನುಗೌಡ, ಬಾಲಕಿ ಹಾಗೂ ಪಾಲಕರನ್ನು ಕರೆ ತಂದು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಸೋನುಗೌಡ ಮಾತನಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದು, ಆಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು.

ಸೋನು ಗೌಡರನ್ನು 4 ದಿನಗಳ ಕಾಲ ಪೊಲೀಸ್‌ ಕಸ್ಟಡಿ ಪಡೆದಿದ್ದರು. ಸೋಮವಾರ(ಮಾ.25 ರಂದು) ಪೊಲೀಸ್‌ ಕಸ್ಟಡಿ ಅಂತ್ಯವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next