Advertisement
ತ್ರಿವಿಕ್ರಮ್, ಹನುಮಂತು, ರಜತ್ ಅವರಿಗೆ ಅಡುಗೆ ರೂಮ್ ನ ಕೆಲಸವನ್ನು ನೀಡಿದ್ದು , ತಮಗೆ ಇದು ಆಗಲ್ಲವೆಂದಿದ್ದಾರೆ. ಇದಕ್ಕೆ ಭವ್ಯ ಅವರು ನಾವು ಹೇಳಿದಾಗೆ ನೀವು ಕೆಲಸಮಾಡಬೇಕು ಎಂದಿದ್ದಾರೆ. ನಾವು ಇದನ್ನು ಮಾಡಲ್ಲ. ನಮಗೆ ಆಗಲ್ಲವೆಂದರೆ ಅದನ್ನು ಮಾಡಲ್ಲ. ಇದನ್ನು ಬಿಗ್ ಬಾಸ್ ಬಳಿ ಹೇಳುತ್ತೇವೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
Related Articles
ಟಾಸ್ಕ್ ವಿಚಾರವಾಗಿ ಬಿಗ್ ಬಾಸ್ ರೆಸಾರ್ಟ್ ಆಗಿ ಬದಲಾಗಿದೆ. ಎರಡು ತಂಡಗಳಾಗಿ ಮನೆ ವಿಭಜನೆಗೊಂಡಿದ್ದು ಭವ್ಯ ಹಾಗೂ ಚೈತ್ರಾ ಅವರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಕ್ಯಾಪ್ಟನ್ ಗಳು ಮನೆಯ ಸದಸ್ಯರನ್ನು ಮನವೊಲಿಸಿಕೊಂಡು ಆಯ್ಕೆ ಮಾಡಿಕೊಂಡಿದ್ದಾರೆ.
Advertisement
ರಜತ್, ತ್ರಿವಿಕ್ರಮ್, ಧನರಾಜ್, ಮೋಕ್ಷಿತಾ ಭವ್ಯ ಅವರ ತಂಡಕ್ಕೆ ಸೇರಿಕೊಂಡಿದ್ದಾರೆ. ಐಶ್ವರ್ಯಾ, ಹನುಮಂತು, ಮಂಜಣ್ಣ, ಗೌತಮಿ ಅವರು ಚೈತ್ರಾ ಅವರ ತಂಡಕ್ಕೆ ಸೇರಿದ್ದಾರೆ.
ಭವ್ಯ ಅವರ ತಂಡ ರೆಸಾರ್ಟ್ ನ ಸಿಬ್ಬಂದಿ, ಚೈತ್ರಾ ಅವರ ತಂಡ ಅತಿಥಿಯಾಗಿದ್ದಾರೆ. ಆ ಮೂಲಕ ಅತಿಥಿಗಳ ತಂಡ ತಮಗೆ ಬೇಕಾದ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಆ ತಂಡ ಕೇಳಿದಾಗೆ ಸಿಬ್ಬಂದಿಗಳ ತಂಡ ನಡೆದುಕೊಳ್ಳಬೇಕು.
ಅದರಂತೆ ಆರಂಭದಲ್ಲೇ ಅತಿಥಿಗಳು ತಮ್ಮ ಆಜ್ಞೆಯನ್ನು ಶುರು ಮಾಡಿಸಿದ್ದಾರೆ. ಮೋಕ್ಷಿತಾ ಅವರು ಎದುರಾಳಿ ತಂಡದ ಮ್ಯಾನೇಜರ್ ಆಗಿದ್ದಾರೆ.
ಬಿಸಿ ನೀರು, ಕೋಲ್ಡ್ ನೀರು, ಜ್ಯೂಸ್ ಸೇರಿದಂತೆ ತಮಗೆ ಬೇಕದಾಗೆ ಸೌಲಭ್ಯವನ್ನು ಅತಿಥಿಗಳು ಬಳಸಿಕೊಂಡಿದ್ದಾರೆ. ತಾವು ಕೇಳಿದ ಆಹಾರವನ್ನು ಆರ್ಡರ್ ಮಾಡಿಸಿಕೊಂಡು ಅತಿಥಿಗಳು ಸೇವಿಸಿದ್ದಾರೆ.
ನಿಮ್ಮ ಬಟ್ಟೆಗಳನ್ನು ನಾವು ವಾಶ್ ಮಾಡಿಸಿಕೊಳ್ಳಲು ಆಗಲ್ಲ. ರೆಸಾರ್ಟ್ ಅಲ್ಲಿ ಇರುವ ಬಟ್ಟೆಗಳನ್ನು ಮಾತ್ರ ವಾಶ್ ಮಾಡುತ್ತೇವೆ ಎಂದು ಮ್ಯಾನೇಜರ್ ಮೋಕ್ಷಿತಾ ಹೇಳಿದ್ದಾರೆ. ಇನ್ನೊಂದು ಕಡೆ ಬಟ್ಟೆ ಮಡಚಿಕೊಡಿ ಎಂದು ಹೇಳಿದ್ದಾರೆ ಆದರೆ ಇದಕ್ಕೆ ಸಿಬ್ಬಂದಿಗಳು ಆಗಲ್ಲವೆಂದಿದ್ದಾರೆ.
ಇದಕ್ಕೆ ಮ್ಯಾನೇಜರ್ ಮೋಕ್ಷಿತಾ ಅವರನ್ನು ಮಂಜು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವ ಕೆಲಸವೂ ನಿಮ್ಮಿಂದ ಆಗಲ್ಲ ಎಂದಾಗ ಧನರಾಜ್ ಅವರು ಜ್ಯೂಸ್ ತಂದಾಗ ಕೈಯಿಂದ ಅದನ್ನು ಎಸೆದಿದ್ದಾರೆ. ಇದಕ್ಕೆ ಸಿಬ್ಬಂದಿಗಳು ರೆಸಾರ್ಟ್ ಸಾಮಾಗ್ರಿಗಳನ್ನು ಹಾನಿ ಮಾಡುವಂತಿಲ್ಲವೆಂದಿದ್ದಾರೆ. ಚೈತ್ರಾ ಅವರು ಮಂಜು ಅವರನ್ನು ಸಮಾಧಾನ ಪಡಿಸಿದ್ದಾರೆ.
ನಾವು ಕೂಡ ಈ ತರ ಮಕ್ಕಳು ತರ ಆಡುತ್ತೇವೆ. ನಮಗೆ ಟಾಸ್ಕ್ ಬರಲಿ ಎಂದು ರಜತ್ ಹೇಳಿದ್ದಾರೆ.
ರೆಸಾರ್ಟ್ ಸಿಬ್ಬಂದಿಗಳಿಗೆ ಬಟ್ಟೆ ಒಗೆಯುವ ಟಾಸ್ಕ್ ನೀಡಲಾಗಿದೆ. ಚೈತ್ರಾ ಹಾಗೂ ಐಶ್ವರ್ಯಾ ಬಟ್ಟೆಗಳನ್ನು ಅವರ ಬಟ್ಟೆಗಳನ್ನು ತ್ರಿವಿಕ್ರಮ್ ರಜತ್ ಒಗೆದಿದ್ದಾರೆ.
ಬಟ್ಟೆ ಒಗೆದ ರೀತಿಗೆ ಹಾಗೂ ಟಾಸ್ಕ್ ಮಾಡಿದ ರೀತಿಗೆ ಸಿಬ್ಬಂದಿಗಳಿಗೆ ಅತಿಥಿಗಳ ತಂಡ ಸ್ಟಾರ್ ರೇಟ್ ನೀಡಿದ್ದಾರೆ.
ನಮಗೆ ಸರಿಯಾದ ರೀತಿ ಸರ್ವಿಸ್ ಆಗಿಲ್ಲವೆಂದು ಚೈತ್ರಾ ಅವರು 6 ಸ್ಟಾರ್ ಗಳನ್ನು ನೀಡಿದ್ದಾರೆ