Advertisement

ಸರಳ ವಿವಾಹದಿಂದ ಆರ್ಥಿಕ ಹೊರೆ ಇಳಿಕೆ

04:46 PM Nov 16, 2021 | Team Udayavani |

ಚನ್ನರಾಯಪಟ್ಟಣ: ಗ್ರಾಮೀಣ ಭಾಗದಲ್ಲಿ ವಿವಾಹ ವನ್ನು ಅದ್ದೂರಿಯಾಗಿ ಮಾಡುತ್ತಾರೆ. ಇದರಿಂದ ಆರ್ಥಿಕವಾಗಿ ತೊಂದರೆಗೆ ಸಿಲುಕಬೇಕಾಗುತ್ತದೆ. ಹಾಗಾಗಿ ಸರಳ ವಿವಾಹ ಮಾಡಿ ಆರ್ಥಿಕ ಸಂಕಷ್ಟದಿಂದ ದೂರು ಉಳಿಯಬಹುದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲನಂದನಾಥ ಸ್ವಾಮೀಜಿ ಹೇಳಿದರು.

Advertisement

ತುಮಕೂರಿನ ನೊಣವಿನ ಕೆರೆ ಬಳಿಯ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿಯ 90ನೇ ಬೃಹತ್‌ ದನಗಳ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕವಿವಾಹನೆರವೇರಿಸಿ ಅವರು ಆಶಿರ್ವಚನ ನೀಡಿದರು. ಸರಳತೆಯಿಂದ ನೆಮ್ಮದಿಯಾಗಿ ಬದುಕು ಬಹುದು ಅದ್ದೂರಿತನ ಮಾಡುವುದರಿಂದ ಮಾನಸಿಕ ವಾಗಿ ನೆಮ್ಮದಿ ಹಾಳು ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಎಷ್ಟು ಹಣ ವೆಚ್ಚ ಮಾಡಿ ವಿವಾಹ ಮಾಡಿದೆವು ಎನ್ನುವುದು ಮುಖ್ಯವಲ್ಲ ವಿವಾಹ ನಡೆದ ಮೇಲೆ ಶಾಂತಿ ಹಾಗೂ ಸಹಬಾಳ್ವೆಯಿಂದ ಪತಿ ಪತ್ನಿಯರು ಬದುಕುವುದು ಮುಖ್ಯ. ಗಂಡ ಹೆಂಡತಿ ನಡುವೆ ದ್ವೇಷ ಇರಬಾರದು. ವಸ್ತು ನಿಷ್ಟೆಯಿಂದ ನಡೆಯುವ ಸಣ್ಣಪುಟ್ಟ ವ್ಯಾಜ್ಯವನ್ನು ಕ್ಷಣದಲ್ಲಿ ಮರೆತು ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಿದರೆ ಬದುಕು ಸ್ವರ್ಗವಾಗಲಿದೆ ಎಂದು ಹೇಳಿದರು.

ಸಂಸ್ಕಾರ ಮುಖ್ಯ: ಸಂಸ್ಕಾರ ನೀಡಿದರೆ ದಿವ್ಯತೆಯ ಬಾಂಧವ್ಯ ಹೊಂದಬಹುದು, ಯಾವುದೇ ವ್ಯಕ್ತಿಗೆ ತಾನಾಗಿಯೇ ಬೆಲೆ ಬರುವುದಿಲ್ಲ ಅವರ ನಡವಳಿಕೆ ಮೇಲೆ ಗೌರವ ದೊರೆಯುತ್ತದೆ. ಅದಕ್ಕಾಗಿ ಸಂಸ್ಕಾರ ಮುಖ್ಯವಾಗಿದೆ. ಕುಟುಂಬದಲ್ಲಿ ಬಂಧನದ ಬದುಕು ಬೇಸರವಾಗುತ್ತದೆ. ಬಾಂಧವ್ಯದ ಬದುಕಿದೆ ಸರ್ವ ವನ್ನು ಮನೆಯಲ್ಲಿ ಕಾಣಬಹುದಾಗಿದೆ. ಅದಕ್ಕಾಗಿ ಹೊಂದಾಣಿಕೆ ಮುಖ್ಯವಾಗಿದೆ, ಕುಟುಂಬಕ್ಕೆ ಎರೆವಾಗದೆ ನೆರವಾದರೆಕುಟುಂಬದಲ್ಲಿ ಸಮತೊಲನ ದಿಂದ ಸಂಸಾರ ಸಾಗಲಿದೆ ಎಂದು ಹೇಳಿದರು.

ಉಚಿತ ಸಾಮೂಹಿಕ ವಿವಾಹ: ಆದಿಚುಂಚನಗಿರಿ ಹಾಸನ ಶಾಖಾ ಮಠದ ಕಾರ್ಯದರ್ಶಿ ಶಂಭು ನಾಥಸ್ವಾಮೀಜಿ ಮಾತನಾಡಿ, ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಆಷಾಡವನ್ನು ಹೊರತು ಪಡಿಸಿ ಪ್ರತಿ ಸೋಮವಾರ 10 ರಿಂದ 15 ವಿವಾಹನಗಳು ನಡೆಯುತ್ತಿದ್ದವು, ಸರಳ ವಿವಾಹ ಮಾಡುವುದು ಒಳಿತೆಂದು ಆಲೋಚಿಸಿ ಕಾರ್ತೀಕ ಮಾಸದಲ್ಲಿ ಮಠದಿಂದ 15 ಜೋಡಿ ಗಳಿಗೆ ಉಚಿತವಾಗಿ ಸಾಮೂಹಿಕ ವಿವಾಹ ಮಾಡಿಸಲಾಗಿದೆ ಎಂದರು.

Advertisement

ಬೆಂಗಳೂರು, ಹಾಸನ, ತಿಪಟೂರು, ತುಮಕೂರು, ಮಂಡ್ಯ, ಮೈಸೂರು, ಕಬ್ಬಳಿ ದಬ್ಬೆಗಟ್ಟ, ಬಾಗೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಮಠದ ಭಕ್ತರು ಆಗಮಿಸಿ ಮಂತ್ರಮಾಗಲ್ಯದಲ್ಲಿ ಪಾಲ್ಗೊಂಡು ಹೊಸ ಬದುಕಿಗೆ ಪಾದಾರ್ಪಣೆ ಮಾಡಿದ್ದಾರೆ. ಗುರು ಹಾಗೂ ದೇವರ ಸಂಮುಖದಲ್ಲಿ ನಡೆದ ವಿವಾಹ ಬಹಳ ಗಟ್ಟಿಯಾಗಿದೆ. ಬಡವ, ಕೂಲಿ ಕಾರ್ಮಿಕ ಹಾಗೂ ರೈತ ಕುಟುಂಬಕ್ಕೆ ಇದು ಬಹಳ ಅನುಕೂಲವಾಗಲಿದೆ ಎಂದರು.

ವಿಶ್ವದಲ್ಲಿ ಬಡವ ಹಾಗೂ ಶ್ರೀಮಂತ ಬೇದಭಾವ ವನ್ನು ಕೊರೊನಾ ಹೋಗಲಾಡಿಸಿತು. ಕೊರೊನಾ ನಂತರ ಪುನಃ ಹಣವಂತರು ತಮ್ಮತನವನ್ನು ತೋರಿಸಿ ಕೊಳ್ಳಲ್ಲು ಲಕ್ಷಾಂತರ ವೆಚ್ಚ ಮಾಡಿ ಅಗತ್ಯಕ್ಕೂ ಹೆಚ್ಚು ಭೋಜನ ವ್ಯವಸ್ಥೆ ಮಾಡಿವಿವಾಹ ಮಹೋತ್ಸ ಮಾಡು ತ್ತಿದ್ದಾರೆ ಇದರಿಂದ ವಿವಾಹ ನಡೆಸಿದ ಕುಟುಂಬಕ್ಕೆ ತೊಂದರೆಆಗದೆಹೋದರೂಸಮಾಜಕ್ಕೆಆರ್ಥಿಕವಾಗಿ ತೊಂದರೆ ಆಗುತ್ತಿದೆ ಎನ್ನುವುದ ಮನಗಾಣಬೇಕಾಗಿದೆ ಎಂದುಕಿವಿ ಮಾತು ಹೇಳಿದರು.

ದರಸೀಘಟ್ಟದ ಚಂದ್ರಶೇಖರ ಸ್ವಾಮೀಜಿ, ಹುಳಿ ಮಾವು ಕ್ಷೇತ್ರದ ಶ್ರೀಶೈಲನಾಥ ಸ್ವಾಮೀಜಿ, ಚಿಕ್ಕಬಳ್ಳಾ ಪುರದ ಮಂಗಳನಾಥ ಸ್ವಾಮೀಜಿ, ಮೈಸೂರಿನ ಶಿವಾನಂದಪುರಿ ಸ್ವಾಮೀಜಿ, ಶ್ರೀಕ್ಷೇತ್ರದ ಶಿವಪುತ್ರ ಸ್ವಾಮೀಜಿ, ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ, ಕಬ್ಬಳಿ ಗ್ರಾಪಂ ಅಧ್ಯಕ್ಷ ರಂಗಪ್ಪ, ಮಾಜಿ ಅಧ್ಯಕ್ಷ ಶಿವನಂಜೇ ಗೌಡ, ಗುಡಿಗೌಡ ಪ್ರಕಾಶ್‌, ಗೋಪಾಲಯ್ಯ, ಸುದರ್ಶನ್‌ ಹಾಜರಿದ್ದರು.

ಕಾರ್ತೀಕ ಮಾಸದ ವಿಶೇಷ ಪೂಜೆ : ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಬಸವೇಶ್ವರ ದೇವಾಲಯದಲ್ಲಿ ಕಾರ್ತೀಕ ಮಾಸದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದರು. ಬೆಳಗ್ಗೆ ಆರು ಗಂಟೆಗೆ ಸುಪ್ರಭಾತದ ಮೂಲಕ ಪೂಜೆ ಪ್ರಾರಂಭವಾಯಿತು, ಮೂಲ ವಿಗ್ರಹಕ್ಕೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಗಂಗೆಪೂಜೆ ಹಾಗೂ ಹೋವಕ್ಕೆ ಪೂರ್ಣಾಹುತಿಯನ್ನು ಆದಿ ಚುಂಚನಗಿರಿಮಠದಪೀಠಾಧ್ಯಕ್ಷಡಾ.ನಿರ್ಮಲಾ ನಂದನಾಥ ಮಹಾಸ್ವಾಮೀಜಿ ನೆರವೇರಿಸಿ ನಂತರ ಭಕ್ತರಿಗೆ ಆಶೀರ್ವಚನ ನೀಡಿದರು.

ಆಧುನಿಕ ಜಗತ್ತು ಅದೆಷ್ಟೇ ಬೆಳೆದರೂ ಧಾರ್ಮಿಕ ಆಚರಣೆ ಹಾಗೂ ದೇಗುಲ ಕಟ್ಟುವ ಕಾರ್ಯ ಮುಂದು ವರಿಯುತ್ತಿರುವುದು ಧರ್ಮದ ಮೌಲ್ಯ ಬಿಂಬಿಸುತ್ತದೆ. ಕಳೆದ 500 ವರ್ಷಗಳ ಹಿಂದೆ ಆಧುನಿಕ ಸಂಶೋಧನೆಗಳ ಮೌಲ್ಯ ತಲೆ ಎತ್ತಿದ ಮೇಲೆ ಆಧ್ಯಾತ್ಮಿಕ ಎಂಬುದು ಕೇವಲ ಕಲ್ಪನೆ ಎಂಬ ಭಾವನೆ ಮೂಡಲಾರಂಭಿಸಿದ್ದು, ಧರ್ಮ, ಸಂಸ್ಕೃತಿ, ಸಂಪ್ರದಾಯ ಹಾಗೂ ಆಧ್ಯಾತ್ಮಿಕ ವ್ಯವಸ್ಥೆ ಕಣ್ಮರೆ ಆಗಬಹುದೇನೋ ಎಂಬಂತಾಗಿತ್ತು ಆದರೆ ಗಟ್ಟಿಗೊಳ್ಳುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next