Advertisement
ಅಂಚು ಇಲ್ಲದ ಪರದೆಇದರ ಪರದೆ 6.67 ಇಂಚಿದೆ. ಫುಲ್ ಎಚ್ಡಿ ಪ್ಲಸ್ ಡಿಸ್ಪ್ಲೇ ಒಳಗೊಂಡಿದೆ. ಅದಕ್ಕೆ ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆ ನೀಡಲಾಗಿದೆ. ಸೆಲ್ಫಿ ಕ್ಯಾಮೆರಾವನ್ನು
ಪರದೆಯ ಮೇಲ್ಭಾಗದ ಮಧ್ಯದಲ್ಲಿ ನೀಡಲಾಗಿದೆ. ಮೊಬೈಲ್ ಪರಿಭಾಷೆಯಲ್ಲಿ ಇದನ್ನು, ಪಂಚ್ಚೋಲ್ ಡಿಸ್ಪ್ಲೇ ಎಂದು ಕರೆಯಲಾಗುತ್ತದೆ. ಪರದೆ ದೊಡ್ಡದಾಗಿದ್ದು, ನೋಡಲು ಫ್ಲಾಗ್ ಶಿಪ್ ಮೊಬೈಲ್ ಗಳ ಗಾತ್ರವನ್ನು ಹೋಲುತ್ತದೆ. ಮೊಬೈಲ್ನ ಪೂರ್ತಿ ಡಿಸ್ಪ್ಲೇ ಇದ್ದು ಎಡ-ಬಲ, ಮೇಲ್ಭಾಗ- ಕೆಳಭಾಗದಲ್ಲಿ ಸಣ್ಣ ತೆಳುಗಾತ್ರದ ಅಂಚಿದೆ. ಹಾಗಾಗಿ, ಡಿಸ್ಪ್ಲೇ ದೊಡ್ಡದಾಗಿ ಕಾಣುತ್ತದೆ. ಕೆಲ ತಿಂಗಳ ಹಿಂದೆ ಟ್ರೆಂಡ್ ಆಗಿದ್ದ ಪಾಪ್ಅಪ್ ಕ್ಯಾಮೆರಾ ಈಗಿಲ್ಲವಾಗಿದ್ದು, ಪಂಚ್ಚೋಲ್ ಕ್ಯಾಮೆರಾ ಪರದೆಯ ವೀಕ್ಷಣೆಗೆ ಯಾವ ಅಡ್ಡಿಯನ್ನೂ ಉಂಟು ಮಾಡುವುದಿಲ್ಲ.
ವೇಗವಾಗಿ ಕೆಲಸ ನಿರ್ವಹಿಸುತ್ತದೆ. ಮೊಬೈಲ್ನ ಸಾಮಾನ್ಯ ಬಳಕೆ ಸೇರಿದಂತೆ, ಗೇಮ್ಗಳಿಗೆ ಸೂಕ್ತವಾಗಿದೆ. ಅಪ್ಲಿಕೇಶನ್ಗಳ ತೆರೆದುಕೊಳ್ಳುವಿಕೆ ಬೇಗನೆ
ಆಗುತ್ತದೆ. ಅಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಮ್ ಇದ್ದು, ಇದಕ್ಕೆ ಎಂಐಯುಐ ವಿನ್ಯಾಸ ಒದಗಿಸಲಾಗಿದೆ. ಕ್ಯಾಮೆರಾ: 48 ಮೆಗಾಪಿಕ್ಸಲ್ ಮುಖ್ಯ ಕ್ಯಾಮೆರಾ, 8 ಮೆ.ಪಿ. ಅಲ್ಟ್ರಾವೈಡ್, 5 ಮೆ.ಪಿ. ಮ್ಯಾಕ್ರೋ, 2 ಮೆ.ಪಿ. ಡೆಫ್ರ್ ಸೆನ್ಸರ್ ಕ್ಯಾಮೆರಾ ಸೇರಿ, ನಾಲ್ಕು ಲೆನ್ಸ್ಗಳ ಕ್ಯಾಮೆರಾ ಹೊಂದಿದೆ. ಸೆಲ್ಫಿ 16 ಮೆ.ಪಿ. ಕ್ಯಾಮೆರಾ ಇದೆ. ಎರಡೂ ಬದಿಯ ಕ್ಯಾಮೆರಾ- ಫಲಿತಾಂಶ ತೃಪ್ತಿಕರವಾಗಿದೆ. 4 ಕೆ ವಿಡಿಯೋ ಕೂಡ ರೆಕಾರ್ಡಿಂಗ್ ಮಾಡಬಹುದಾಗಿದೆ.
Related Articles
Advertisement
ಕೆ.ಎಸ್. ಬನಶಂಕರ ಆರಾಧ್ಯ