ಬೆಂಗಳೂರು: ಜಿಯೋಮಿ ಸಂಸ್ಥೆ ರೆಡ್ಮಿ 6, ರೆಡ್ಮಿ 6ಎ ಹಾಗೂ ರೆಡ್ಮಿ 6 ಪ್ರೊ ಮೊಬೈಲ್ ಫೋನ್‌ಗಳನ್ನು ಗುರುವಾರ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೆಡ್ಮಿ 6, ರೆಡ್ಮಿ 6ಎ ಹಾಗೂ ರೆಡ್ಮಿ 6 ಪ್ರೊ ಫೋನ್ ಬಿಡುಗಡೆ ಮಾಡಿ ಮಾತನಾಡಿದ, ಜಿಯೋಮಿ ಸಂಸ್ಥೆಯ ಉಪಾಧ್ಯಕ್ಷ ಮನು ಜೈನ್, ರೆಡ್ಮಿ 6 ಪ್ರೋ ಮೊಬೈಲ್ ಫೋನ್ ಎಐ ಡ್ಯುವೆಲ್ ಕ್ಯಾಮೆರಾ ಮತ್ತು ಒಮ್ಮೆ ಭರ್ತಿ ಚಾರ್ಜ್ ಮಾಡಿದರೆ ಎರಡು ಕಾರ್ಯ ನಿರ್ವಹಿಸಬಲ್ಲ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ರೆಡ್ಮಿ6 ಮತ್ತು ರೆಡ್ಮಿ 6ಎ ಕ್ರಮವಾಗಿ ಹೀಲಿಯೋ ಪಿ 22 ಹಾಗೂ ಹೀಲಿಯೋ ಎ22 ಚಿಪ್ ಸೆಟ್ ಹೊಂದಿದೆ ಎಂದು ವಿವರಿಸಿದರು.
ಅತಿ ಸಾಮರ್ಥ್ಯದ 12ಎನ್‌ಎಂ ಪ್ರೊಸೆಸರ್‌ಗಳನ್ನು ಬಳಸಿಕೊಳ್ಳುವ ಇತ್ತೀಚಿನ ಹೀಲಿಯೋ ಅಕ್ಟಾ ಕೋರ್ ಎಸ್‌ಒಸಿ ಸಾಮರ್ಥ್ಯವನ್ನು ರೆಡ್ಮಿ 6 ಶ್ರೇಣಿಯ ಮೊಬೈಲ್‌ಗಳು ಹೊಂದಿವೆ. ರೆಡ್ಮಿ 6ಎ ಎರಡು ವಿಭಿನ್ನ ದರದಲ್ಲಿ ಲಭ್ಯವಿದೆ. 2ಜಿಬಿ+16ಜಿಬಿ ಸಾಮರ್ಥ್ಯದ ಫೋನ್‌ಗೆ 5,999 ರೂ. ಮತ್ತು 2ಜಿಬಿ+32ಜಿಬಿ ಸಾಮರ್ಥ್ಯದ ಫೋನ್‌ಗೆ 6,999 ರೂ. ಎರಡು ತಿಂಗಳವರೆಗೂ ಪರಿಚಯ ಬೆಲೆಗೆ ನೀಡಲಾಗುತ್ತದೆ.
ಸೆ. 19ರ ನಂತರ ರೆಡ್ಮಿ 6ಎ ಫೋನ್‌ಗಳು mi.com ಅಥವಾ amazon.comನಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು. 3ಜಿಬಿ+32ಜಿಬಿ ರೆಡ್ಮಿ 6 ಫೋನ್‌ಗೆ 7,999 ರೂ. ಮತ್ತು 3ಜಿಬಿ+64ಜಿಬಿ ಫೋನ್‌ಗೆ 9,499 ರೂ.ನಿಗದಿ ಮಾಡಲಾಗಿದೆ. ಸೆಪ್ಟೆಂಬರ್ 10ರಿಂದ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.
3ಜಿಬಿ+32ಜಿಬಿ ರೆಡ್ಮಿ 6ಪ್ರೋ ಫೋನ್‌ಗೆ 10,999 ರೂ. ಮತ್ತು 4ಜಿಬಿ+64ಜಿಬಿ ಫೋನ್‌ಗೆ 12999 ರೂ. ನಿಗದಿ ಮಾಡಲಾಗಿದೆ. ಸೆ.11ರಿಂದ ಆನ್‌ಲೈನ್‌ನಲ್ಲಿ ಲಭ್ಯವಿದೆ. ಈ ಮೂರು ಬಗೆಯ ಫೋನ್‌ಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ವಿನ್ಯಾಸಗೊಳಿಸಲಾಗಿದ್ದು, ಡಿಸ್ಲೆ, ಕಾರ್ಯಕ್ಷಮತೆ ಸೇರಿದಂತೆ ಎಲ್ಲವೂ ಆಕರ್ಷಕವಾಗಿದೆ ಮತ್ತು ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.