Advertisement
ಬಿಜೆಪಿಯ ಹಾಲಿ ಶಾಸಕ ಪರಣ್ಣ ಮುನವಳ್ಳಿ ಅಭಿವೃದ್ಧಿ ಜಪ ಮಾಡುತ್ತಿದ್ದರೂ ಕೆಲವೊಂದು ಹಗರಣಗಳಲ್ಲಿ ಹೆಸರು ಡ್ಯಾಮೇಜ್ ಮಾಡಿಕೊಂಡಿದ್ದಾರೆ. ಕಮಲಕ್ಕೆ ಈ ಬಾರಿ ಹೊಸ ಮುಖಗಳು ಎಂಟ್ರಿ ಕೊಡಲಿವೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಅದರಲ್ಲೂ ಅಂಜ ನಾದ್ರಿಯ ತಟದಲ್ಲಿ ಪ್ರಬಲ ಹಿಂದುತ್ವವಾದಿ ಗಳನ್ನೇ ಕಣಕ್ಕಿಳಿಸಿ ಕ್ಷೇತ್ರವನ್ನು ಕೇಸರಿಮಯ ಮಾಡಿಕೊಳ್ಳಲು ಬಿಜೆಪಿ, ಆರೆಸ್ಸೆಸ್ ನಿಷ್ಠೆಯ ನಾಯಕನನ್ನು ಕಣಕ್ಕಿಳಿಸುತ್ತಿದೆ ಎನ್ನುವ ಲೆಕ್ಕಾಚಾರ ಕೇಳಿ ಬಂದಿವೆ. ಈ ಮಧ್ಯೆ ಬಿಜೆಪಿಯಿಂದ ವಿರುಪಾಕ್ಷಪ್ಪ ಸಿಂಗನಾಳ ಟಿಕೆಟ್‌ಗೆ ತೆರೆಮರೆ ಕಸರತ್ತು ನಡೆಸಿದ್ದಾರೆ. ಅಲ್ಲದೇ ಕೆಲವರ ಹೆಸರುಗಳು ಪ್ರಚಲಿತದಲ್ಲಿವೆ. ಈ ಬೆಳವಣಿಗೆ ಪರಣ್ಣ ಮುನವಳ್ಳಿಗೆ ನುಂಗ ಲಾರದ ತುತ್ತಾಗಿದೆ.
Related Articles
ಒಂದು ಕಾಲದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಬಹುಕೋಟಿ ಹಗರಣದ ಆರೋಪ ಮಾಡಿದ್ದ ಜನಾರ್ದನ ರೆಡ್ಡಿ, ಬಿ.ಎಸ್. ಯಡಿಯೂರಪ್ಪ ಸರ್ಕಾರವನ್ನು ಅಲುಗಾಡಿಸಿ, ಬಿಎಸ್‌ವೈ ನಿದ್ದೆಗೆಡುವಂತೆ ಮಾಡಿದ್ದರು. ಪ್ರಸ್ತುತ ಬಳ್ಳಾರಿ ಜಿಲ್ಲೆಗೆ ಎಂಟ್ರಿ ಇಲ್ಲದ ಕಾರಣ ಪಕ್ಕದ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಈಗ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ರೆಡ್ಡಿಯವರ ರಾಜಕೀಯ ಎಂಟ್ರಿಯಿಂದ ಬಿಜೆಪಿ ಸೇರಿ ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಬಿಜೆಪಿ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ರೆಡ್ಡಿ, ಬಿಜೆಪಿ ವಿರುದ್ದವೇ ಬಹಿರಂಗವಾಗಿ ಗುಡುಗುತ್ತಿದ್ದಾರೆ. ಆದರೆ ಬಿಎಸ್‌ವೈ ಪರವಾದ ಅನುಕಂಪದ ಮಾತನ್ನಾಡಿದ್ದಾರೆ. ಇವರ ನಡೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ತಿಳಿಯದಂತಾಗಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ 2ನೇ ಹಂತದ ನಾಯಕರಿಗೆ ಗಾಳ ಹಾಕುತ್ತಿದ್ದು, ಅವರ ಮನೆಗಳಿಗೂ ರಾತ್ರೋ ರಾತ್ರಿ ತೆರಳಿ ತಮ್ಮ ಪಕ್ಷ ಸೇರ್ಪಡೆಗೆ ಮನವಿ ಮಾಡುತ್ತಿದ್ದಾರೆ. ಈವರೆಗೂ ರೆಡ್ಡಿ ಜತೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಯಾವುದೇ ಪ್ರಭಾವಿ ನಾಯಕರು ಕಾಣಿಸಿಲ್ಲ. ಅನ್ಯ ಪಕ್ಷಗಳ ಕಾರ್ಯಕರ್ತರು ಹಾಗೂ ಎರಡನೇ ಹಂತದ ನಾಯಕರು ಕೆಆರ್‌ಪಿಪಿ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.
Advertisement
-ದತ್ತು ಕಮ್ಮಾರ