Advertisement

ರೆಡ್‌ ಅಲರ್ಟ್‌; ಭಾರೀ ಮಳೆ ಸಾಧ್ಯತೆ

11:31 PM Aug 05, 2019 | Lakshmi GovindaRaj |

ಮಣಿಪಾಲ: ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಆ.7 ಮತ್ತು 8ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸಿದೆ. ಇದೇ ವೇಳೆ ಆ.6ರಂದು ಉತ್ತಮ ಮಳೆಯಾಗುವ ಆರೆಂಜ್‌ ಅಲರ್ಟ್‌ ಹೊರಡಿಸಲಾಗಿದೆ.

Advertisement

ಬುಧವಾರ ರಾಜ್ಯದ ಒಳನಾಡು, ಕರಾವಳಿಗಷ್ಟೇ ರೆಡ್‌ ಅಲರ್ಟ್‌ ಇದ್ದರೆ ಗುರುವಾರ ಇದನ್ನು ಪಕ್ಕದ ಕೇರಳಕ್ಕೂ ವಿಸ್ತರಿಸಲಾಗಿದೆ. 9ರಂದು ದ. ಒಳನಾಡು, ರಾಜ್ಯ ಕರಾವಳಿ ಮತ್ತು ಕೇರಳಗಳಲ್ಲಿ ಆರೆಂಜ್‌ ಅಲರ್ಟ್‌ ಇರಲಿದೆ. ಈ ವೇಳೆ ಬಲವಾದ ಗಾಳಿ ಬೀಸಲಿದ್ದು, ಕಡಲಬ್ಬರ ಸಂಭಾವ್ಯ ಎಂದು ಎಚ್ಚರಿಕೆ ನೀಡಲಾಗಿದೆ.

ಅಕಾಲಿಕ ಸಿಡಿಲು ಸಹಿತ ಗಾಳಿಮಳೆ: ಎರಡು ದಿನಗಳಿಂದ ಗಾಳಿ ಮಳೆಯ ಜತೆಗೆ ಕರಾವಳಿಯ ಅಲ್ಲಲ್ಲಿ ಸಿಡಿಲು ಮಿಂಚು ಕೂಡ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಮಳೆಗಾಲದ ಪ್ರಾರಂಭ ಮತ್ತು ಹಿಂಗಾರಿನಲ್ಲಿ ಸಿಡಿಲು ಮಿಂಚು ಇರುವುದು ಸಾಮಾನ್ಯ.

ಆದರೆ ಈ ಅವಧಿಯಲ್ಲಿ ಸಿಡಿಲು ಮಿಂಚು ವಿಶೇಷವಾಗಿದೆಯಲ್ಲದೆ ಪ್ರಾಕೃತಿಕ ಅಸಮತೋಲನದಿಂದ ಉಂಟಾಗುತ್ತಿದೆಯೇ ಎಂಬ ಪ್ರಶ್ನೆಗೆ ಕಾರಣವಾಗಿದೆ. ಸೋಮವಾರ ರಾತ್ರಿ ವೇಳೆ ಉಡುಪಿ-ಮಣಿಪಾಲದಲ್ಲಿ ಗಾಳಿ ಮಳೆಯ ಜತೆಗೆ ಸಿಡಿಲು ಮಿಂಚು ಜೋರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next