Advertisement

ಮುಂಬಯಿ ಸೇರಿ 4 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

03:15 AM Jul 05, 2020 | Sriram |

ಮುಂಬಯಿ/ಪಾಟ್ನಾ: ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದ್ದು, ಶನಿವಾ­ರವೂ ಧಾರಾಕಾರ ಮಳೆಯಾಗಿದೆ. ಪಾಲ್‌ಘಾರ್‌, ಮುಂಬಯಿ, ಥಾಣೆ ಮತ್ತು ರಾಯಗಡ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ರವಿವಾರವೂ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಸಮುದ್ರದಲ್ಲಿ 4.57 ಮೀಟರ್‌ ಎತ್ತರದಲ್ಲಿ ಅಲೆಗಳು ಅಪ್ಪಳಿಸುತ್ತಿದ್ದು, ಕಡಲ ತಟದಿಂದ ದೂರವಿರುವಂತೆ ನಾಗರಿಕರಿಗೆ ಬೃಹನ್ಮುಂಬೈ ನಗರ ಪಾಲಿಕೆ ಸೂಚಿಸಿದೆ.

ಮುಂಬಯಿನಲ್ಲಿ ಶುಕ್ರವಾರ ಬೆಳಗ್ಗೆ 8.30ರಿಂದ ರಾತ್ರಿ 8.30ರವರೆಗೆ 161.4 ಮಿ.ಮೀ. ಮಳೆಯಾ­ಗಿದೆ. ಶನಿವಾರ ಬೆಳಗ್ಗೆ 8.30ರ ಬಳಿಕ ಮುಂಬಯಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 25 ರಿಂದ 30ಮಿ.ಮೀ. ಮಳೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಭಾರೀ ಮಳೆಯಿಂ­ದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಹಾಗೂ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ.

ಬಿಹಾರದಲ್ಲಿ ಮಳೆ, ವಿವಿಧೆಡೆ ಸಿಡಿಲಿಗೆ 23 ಸಾವು
ಬಿಹಾರದಲ್ಲಿ ಮತ್ತೆ ಮಳೆ, ಮಿಂಚಿನ ಆರ್ಭಟಕ್ಕೆ 23 ಮಂದಿ ಬಲಿಯಾಗಿದ್ದಾರೆ. ಶನಿವಾರ ಭೋಜ್‌ಪುರ, ಸಾರನ್‌, ಕೈಮೂರ್‌, ಪಾಟ್ನಾ ಮತ್ತು ಬಕ್ಸಾರ್‌ ಜಿಲ್ಲೆಗಳಲ್ಲಿ ಸಿಡಿಲು ಬಡಿದು 23 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಪೈಕಿ ಭೋಜ್‌ಪುರ್‌ವೊಂ­ದರಲ್ಲೇ 9 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರವಷ್ಟೇ ಸಿಡಿಲಿಗೆ ರಾಜ್ಯದಲ್ಲಿ 8 ಮಂದಿ ಬಲಿಯಾಗಿ­ದ್ದರು. ಈ ಮೂಲಕ ಒಂದು ವಾರದಲ್ಲಿ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next