Advertisement

ತ್ಯಾಜ್ಯ ನೀರು ಮರುಬಳಕೆ :ಮಂಗಳೂರು ಮಹಾನಗರ ಪಾಲಿಕೆಗೆ ಪ್ರಶಸ್ತಿ

12:45 PM Feb 19, 2018 | |

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ತ್ಯಾಜ್ಯ ನೀರು ಮರು ಬಳಕೆಗೆ ಸಂಬಂಧಿಸಿ ಸಿಟಿ ಮ್ಯಾನೇಜರ್ ಅಸೋಸಿಯೇಶನ್‌ ಕರ್ನಾಟಕ ಮತ್ತು ರಾಜ್ಯ ಸರಕಾರದ ಪೌರಾಡಳಿತ ನಿರ್ದೇಶ ನಾ ಲಯವು ಅತ್ಯುತ್ತಮ ತ್ಯಾಜ್ಯ ನೀರು ಮರು ಬಳಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Advertisement

ಪ್ರಶಸ್ತಿಯು 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಫಲಕವನ್ನು ಒಳಗೊಂಡಿದೆ. ಬೆಂಗಳೂರಿನ ಖಾಸಗಿ ಹೊಟೇಲ್‌ ನಲ್ಲಿ  ಶನಿವಾರ ನಡೆದ ಸಮಾ ರಂಭ ದಲ್ಲಿ ಮನಪಾ ಆಯುಕ್ತ ಮಹಮ್ಮದ್‌ ನಝೀರ್‌, ಎಂಜಿನಿಯರ್‌ ರಘುಪಾಲ್‌, ಮಧುಮನೋಹರ್‌ ಅವರು ಪ್ರಶಸ್ತಿಯನ್ನು ಪೌರಾಡಳಿತ ಸಚಿವ ಪ್ರಕಾಶ್‌ ಖಂಡ್ರೆ ಅವರಿಂದ ಸ್ವೀಕರಿಸಿದರು. 

ಸಚಿವ ಕೆ.ಜೆ. ಜಾರ್ಜ್‌, ಪೌರಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್‌, ನಗರಾಭಿವೃದ್ಧಿ ಕಾರ್ಯ ದರ್ಶಿ ಅನುಮ್‌ ಪರ್ವೇಜ್‌, ಡಾ| ಆರ್‌. ವಿಶಾಲ್‌, ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ಎ.ಬಿ. ಇಬ್ರಾಹಿಂ ಉಪಸ್ಥಿತರಿದ್ದರು.

ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೈಗಾರಿಕೆಗಳ ಮರು ಬಳಕೆಗೆ ಪೂರೈಕೆ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next