Advertisement

ಬಳಸಿದ ಅಲ್ಯುಮಿನಿಯಂ ಕ್ಯಾನ್ ಸಂಗ್ರಾಹಕರ ಕಲ್ಯಾಣಕ್ಕೆ ರೀಸೈಕಲ್, ಬಾಲ್ ಕಾರ್ಪೊರೇಷನ್ ಯೋಜನೆ

03:19 PM Dec 24, 2020 | keerthan |

ಬೆಂಗಳೂರು: ಭಾರತದ ಮೊದಲ ಡಿಜಿಟಲ್ ತ್ಯಾಜ್ಯಗಳ ವಾಣಿಜ್ಯ (ಡಬ್ಲ್ಯು-ಕಾಮರ್ಸ್) ಕಂಪನಿಯಾದ ‘ರಿಸೈಕಲ್’ ಮತ್ತು ವಿಶ್ವದ ಪ್ರಮುಖ ಅಲ್ಯೂಮಿನಿಯಂ ಪಾನೀಯ ಕ್ಯಾನ್, ಬಾಟಲಿಗಳು ಮತ್ತು ಕಪ್‌ಗಳ ಉತ್ಪಾದಕ ಕಂಪೆನಿ “’ಬಾಲ್ ಕಾರ್ಪೊರೇಷನ್’ ಬೆಂಗಳೂರಿನ 5 ಸಾವಿರ ಮಂದಿ ತ್ಯಾಜ್ಯ ಸಂಗ್ರಹಿಸುವವರಿಗೆ ನೆರವಾಗುವ ಯೋಜನೆಯೊಂದನ್ನು ರೂಪಿಸಿವೆ.

Advertisement

ತ್ಯಾಜ್ಯ ಸಂಗ್ರಹಕಾರರಿಗೆ ನಿರಂತರ ಆದಾಯದ ಮಾರ್ಗವನ್ನು ಒದಗಿಸುವ ಮೂಲಕ ಅವರ ಜೀವನೋಪಾಯಕ್ಕಾಗಿ, ಬಳಕೆ ಮಾಡಿದ ಅಲ್ಯುಮಿನಿಯಂ ಕ್ಯಾನ್‍ ಗಳನ್ನು ಮರುಬಳಕೆಗಾಗಿ ಸಂಗ್ರಹಿಸಲು ಪೈಲಟ್‍ ಯೋಜನೆಯೊಂದನ್ನು ರೂಪಿಸಿದೆ.

ಈ ಯೋಜನೆಯಡಿ, ರೀಸೈಕಲ್‍ ಕಂಪೆನಿಯು ಅಲ್ಯುಮಿನಿಯಂ ಕ್ಯಾನ್‍ಗಳನ್ನು ತ್ಯಾಜ್ಯ ಸಂಗ್ರಹಕಾರರ ಜಾಲದ ಮೂಲಕ ಜನವಸತಿ ಬಡಾವಣೆಗಳು, ಅಪಾರ್ಟ್‌ಮೆಂಟ್‌ಗಳು, ವ್ಯಾಪಾರ ಸ್ಥಳಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ಸಂಗ್ರಹಿಸುತ್ತದೆ. ನಂತರ ಕ್ಯಾನ್‌ಗಳನ್ನು ಬಾಲ್ ಬೆವರೇಜ್ ಪ್ಯಾಕೇಜಿಂಗ್ ಇಂಡಿಯಾ ಕಂಪೆನಿಯ ಮೂಲಕ ಮರುಬಳಕೆಗಾಗಿ ಕಳುಹಿಸಲಾಗುತ್ತದೆ. ಭಾರತದಲ್ಲಿ ತ್ಯಾಜ್ಯ ಸಂಗ್ರಹಿಸುವ ಸಮುದಾಯಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಆರು ತಿಂಗಳ ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇತರ ಮಹಾನಗರಗಳಿಗೆ ವಿಸ್ತರಿಸಲಾಗುವುದು.

ನಗರ ಅಸಂಘಟಿತ ಉದ್ಯೋಗಗಳಲ್ಲಿ ತ್ಯಾಜ್ಯವನ್ನು ಆರಿಸುವುದು ಅತ್ಯಂತ ಕೆಳ ಸ್ಥಾನದಲ್ಲಿದೆ. ಇದರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.  ಭಾರತದಲ್ಲಿ 40 ಲಕ್ಷ ಜನ ತ್ಯಾಜ್ಯ ಸಂಗ್ರಾಹಕರಿದ್ದಾರೆ.  ಇವರ ಜೀವನವು ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅವಲಂಬಿಸಿರುತ್ತದೆ. ಅಲ್ಯುಮಿನಿಯಂ ಹೆಚ್ಚಿನ ಮೌಲ್ಯದ ಲೋಹವಾಗಿದ್ದು, ಈ ಪೈಲಟ್‍ ಯೋಜನೆ ತ್ಯಾಜ್ಯ ಸಂಗ್ರಹಕಾರರ ಜೀವನ ಸುಧಾರಿಸಲು ನೆರವಾಗಲಿದೆ.

Advertisement

ಈ ಉಪಕ್ರಮದಡಿಯಲ್ಲಿ ಬಾಲ್ ಬೆವರೇಜ್ ಪ್ಯಾಕೇಜಿಂಗ್ ಇಂಡಿಯಾ ಮತ್ತು ರಿಸೈಕಲ್ ನೇರವಾಗಿ 5,000 ತ್ಯಾಜ್ಯ ಸಂಗ್ರಹಕಾರರನ್ನು ದಾಖಲಿಸಿಕೊಳ್ಳಲಿದೆ. ಒಂದು ಮಿಲಿಯನ್ ತ್ಯಾಜ್ಯ ಸಂಗ್ರಹಕಾರರನ್ನು ತಲುಪುವುದು ಮತ್ತು ನಿರಂತರ ಜೀವನೋಪಾಯದ ಅವಕಾಶಗಳೊಂದಿಗೆ ಅವರನ್ನು ಸಶಕ್ತಗೊಳಿಸುವುದು ನಮ್ಮ ಗುರಿ ಎಂದು ರಿಸೈಕಲ್ ನ ನಿರ್ದೇಶಕ ಅಫ್ಸರ್ ಅಹ್ಮದ್ ಮೊಹಮ್ಮದ್ ತಿಳಿಸಿದ್ದಾರೆ.

ಉಪಕ್ರಮದ ಕುರಿತು ಮಾತನಾಡಿದ ಭಾರತ ಮತ್ತು ಆಗ್ನೇಯ ಏಷ್ಯಾ ಪ್ರದೇಶದ ಬಾಲ್ ಬೆವರೇಜ್ ಪ್ಯಾಕೇಜಿಂಗ್ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಲಾಹೋಟಿ, ಈ ಸಹಯೋಗದ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಏಕೆಂದರೆ ಇದು ನಮ್ಮ ಸಮುದಾಯದಲ್ಲಿ ತ್ಯಾಜ್ಯ ಸಂಗ್ರಹಕಾರರ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಲೋಹವು ನಿರತಂತರವಾಗಿ ಮರುಬಳಕೆಯಾಗುವುದರಿಂದ ಅಲ್ಯೂಮಿನಿಯಂ ಬೆವರೇಜ್ ಕ್ಯಾನುಗಳು ಆರ್ಥಿಕ ವೃತ್ತಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಜಗತ್ತಿನಲ್ಲಿ ಉತ್ಪಾದಿಸಲಾದ ಒಟ್ಟು ಅಲ್ಯೂಮಿನಿಯಂನಲ್ಲಿ ಸುಮಾರು ಶೇ. 75ರಷ್ಟು ಇಂದಿಗೂ ಬಳಕೆಯಲ್ಲಿದೆ ಎಂಬುದು ಇದಕ್ಕೆ ಒಂದು ದೊಡ್ಡ ಪುರಾವೆಯಾಗಿದೆ. ಅಲ್ಯೂಮಿನಿಯಂ ಕ್ಯಾನುಗಳು ಇತರ ಸಾಮಾನ್ಯ ಪ್ಯಾಕೇಜಿಂಗ್ ಸ್ವರೂಪಗಳಿಗಿಂತ ಕಡಿಮೆ ಇಂಗಾಲ ಹೊಂದಿವೆ. ಜಾಗತಿಕ ಸಂಪನ್ಮೂಲಗಳು ಸೀಮಿತವಾಗಿವೆ ಆದರೂ ಬಳಕೆಯ ಬೇಡಿಕೆಗಳು ಹೆಚ್ಚುತ್ತಲೇ ಇವೆ. ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಅಮೂಲ್ಯವಾದ ವಸ್ತುಗಳನ್ನು ಆರ್ಥಿಕ ವೃತ್ತಕ್ಕೆ ಮರಳಿಸಲು ಈ ರೀತಿಯ ಉಪಕ್ರಮಗಳು ಬೇಕಾಗುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next