Advertisement

ದಾಖಲೆಯ ಸೂರ್ಯ ನಮಸ್ಕಾರ

11:09 AM Jan 22, 2018 | |

ಮಂಗಳೂರು: ದಾಖಲೆ ಸಂಖ್ಯೆಯ ಸಾರ್ವಜನಿಕರ ಸಮ್ಮಿಲನದೊಂದಿಗೆ ಮಹಾ “ಸೂರ್ಯ ನಮಸ್ಕಾರ’ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ರವಿವಾರ ಮುಂಜಾನೆ ನಡೆಯಿತು. ಸಾವಿರಾರು ಸಾರ್ವಜನಿಕರು ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡರು.

Advertisement

ಸಂಸ್ಕಾರ- ಸಂಘಟನೆ- ಸೇವಾ ಕೈಂಕರ್ಯದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌ಪಿವೈಎಸ್‌ಎಸ್‌) ಆಶ್ರಯದಲ್ಲಿ “ಆರೋಗ್ಯಕ್ಕಾಗಿ ಸೂರ್ಯ ನಮಸ್ಕಾರ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಜಾನೆ 5.30ಕ್ಕೆ ಪ್ರಾರ್ಥನೆಯೊಂದಿಗೆ ನಿತ್ಯಾಭ್ಯಾಸ ಆರಂಭಗೊಂಡಿತು. ಯೋಗ ಶಿಕ್ಷಕರು ಸಾರ್ವಜನಿಕರಿಗೆ ಸೂರ್ಯ ನಮಸ್ಕಾರ ಮತ್ತು ಅದರ ಮಹತ್ವ ತಿಳಿಸಿದರು. 6.30ರಿಂದ ಸಾರ್ವಜನಿಕರು ಮತ್ತು ಯೋಗ ಬಂಧುಗಳನ್ನು ಒಳಗೊಂಡು ಸೂರ್ಯನಮಸ್ಕಾರ ಆರಂಭವಾಯಿತು. 

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್‌ ಬೋಳಾರ್‌, ಶಾರದಾ ಕಾಲೇಜಿನ ದಯಾ ನಂದ ಕಟೀಲು, ಪತಂಜಲಿ ವಿದ್ಯಾಪೀಠದ ಕರ್ನಾಟಕ ರಾಜ್ಯ ಮುಖ್ಯಸ್ಥ ಡಾ| ಜ್ಞಾನೇಶ್ವರ್‌ ನಾಯ್ಕ, ಎಸ್‌ಪಿವೈಎಸ್‌ಎಸ್‌ ಸಂಘಟನ ವಿಭಾಗದ ಪ್ರಾಂತ ಸಂಚಾಲಕ ರವೀಶ್‌ ಕುಮಾರ್‌, ಸಂಘಟಕ ನವನೀತ್‌ ಶೆಟ್ಟಿ ಕದ್ರಿ, ಜಿಲ್ಲಾ ಸಂಚಾಲಕ ಹರೀಶ್‌, ಜಿಲ್ಲಾ ವ್ಯವಸ್ಥಾ ಪ್ರಮುಖ್‌ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ “ಆರೋಗ್ಯಕ್ಕಾಗಿ ಸೂರ್ಯ ನಮಸ್ಕಾರ’ ಮಂಗಳೂರಿನಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next