Advertisement

ತಿರುಮಲದಲ್ಲಿ ಎರಡೇ ದಿನಗಳಲ್ಲಿ ಸುಮಾರು 250ಕ್ಕೂ ಅಧಿಕ ವಿವಾಹಗಳು

12:22 PM Aug 14, 2022 | Team Udayavani |

ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ತಿರುಮಲದಲ್ಲಿ ಗುರುವಾರ ಮತ್ತು ಶುಕ್ರವಾರ ಮದುವೆ ಹಬ್ಬವೇ ನಡೆದಿದೆ!

Advertisement

ಶ್ರಾವಣ ಮಾಸದ ಈ ದಿನಗಳಂದು ಒಳ್ಳೆಯ ವಿವಾಹ ಮುಹೂರ್ತವಿದ್ದಿದ್ದರಿಂದಾಗಿ ಎರಡೇ ದಿನಗಳಲ್ಲಿ ಸುಮಾರು 250ಕ್ಕೂ ಅಧಿಕ ವಿವಾಹಗಳು ತಿರುಮಲದಲ್ಲಿ ನಡೆದಿದೆ.

ತಿರುಪತಿ ತಿರುಮಲ ದೇವಸ್ಥಾನಂ ಮಂಡಳಿಯ (ಟಿಟಿಡಿ) ಪುರೋಹಿತ್‌ ಸಂಗಂ ಮಂಟಪದಲ್ಲಿಯೇ 78 ವಿವಾಹಗಳು ನಡೆದಿವೆ.

ಅದಲ್ಲದೆ, ಸಭಾಭವನಗಳು, ಮದುವೆ ಹಾಲ್‌ಗ‌ಳು, ಮಠ ಗಳಲ್ಲಿಯೂ ಹತ್ತಾರು ಮದುವೆ ಗಳನ್ನು ನಡೆಸಿ ಕೊಡಲಾಗಿದೆ. ತಿರುಮಲದಲ್ಲಿ ಮದುವೆಯಾಗುವ ಜೋಡಿ ನಡುವೆ ಬಿರುಕು ಉಂಟಾಗುವುದಿಲ್ಲ ಎನ್ನುವ ನಂಬಿಕೆಯಿರುವ ಹಿನ್ನೆಲೆ ಅತೀ ಹೆಚ್ಚು ಮದುವೆಗಳು ಇಲ್ಲಿ ನಡೆಯು ತ್ತವೆ ಎಂದಿದ್ದಾರೆ ಟಿಟಿಡಿ ಮಂಡಳಿಯವರು. ಶನಿವಾರವೂ ಒಳ್ಳೆಯ ಮುಹೂರ್ತವಿದ್ದ ಹಿನ್ನೆಲೆ ನೂರಾರು Êಡುದುವೆಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next