Advertisement

ಮೆಟ್ರೋ ಹೆಚ್ಚುವರಿ ಟ್ರಿಪ್‌ಗ್ಳಲ್ಲಿ ದಾಖಲೆ ಪ್ರಯಾಣಿಕರು

12:31 PM Jan 09, 2018 | |

ಬೆಂಗಳೂರು: ಕೆಲ ದಿನಗಳ ಹಿಂದೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಹೆಚ್ಚುವರಿ ಟ್ರಿಪ್‌ಗ್ಳನ್ನು ಮೆಟ್ರೋ ಸೋಮವಾರ ಆರಂಭಿಸಿದ್ದು, ಮೊದಲ ದಿನವೇ  ದಾಖಲೆ ಪ್ರಮಾಣದಲ್ಲಿ ಪ್ರಯಾಣಿಕರು ಸಂಚರಿಸಿದ್ದಾರೆ. ಸೋಮವಾರ ಬೆಳಿಗ್ಗೆ 9-30ರಿಂದ 10-30ರ ವರೆಗಿನ ಪೀಕ್‌ ಅವರ್‌ನಲ್ಲಿ 44,356 ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.

Advertisement

ಈ ಹಿಂದೆ ಇದೇ ಅವಧಿಯಲ್ಲಿ ಸುಮಾರು 40 ಸಾವಿರ ಜನ ಪ್ರಯಾಣಿಸಿದ್ದ ದಾಖಲೆ ಸರಿಗಟ್ಟಿದ್ದು, 4.50 ಸಾವಿರ ಹೆಚ್ಚು ಜನ ಪ್ರಯಾಣಿಸಿದ್ದಾರೆ. ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ನಡುವೆ ಪ್ರತಿ 3.50 ನಿಮಿಷಕ್ಕೊಂದರಂತೆ 16 ರೈಲು ಹಾಗೂ ಐದು ಶಾರ್ಟ್‌ ಲೂಪ್‌  ( ನೇರವಾಗಿ ಮೆಜೆಸ್ಟಿಕ್‌ -ಬೈಯಪ್ಪನಹಳ್ಳಿ) ರೈಲು ಕಾರ್ಯಾಚರಣೆ ಮಾಡಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.  

ಇನ್ನು ಜ. 2ರಂದು ಕೂಡ ಹೆಚ್ಚುವರಿ ಟ್ರಿಪ್‌ಗ್ಳನ್ನು ಪರಿಚಯಿಸಲಾಗಿತ್ತು. ಆದರೆ, ಈ ಸೇವೆ ಪರಿಚಯಿಸಿದ ದಿನವೇ ಒಂದೇ ಮಾರ್ಗದಲ್ಲಿ ಎರಡು ಬಾರಿ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಆಗಿತ್ತು. ನಂತರ ಎರಡನೇ ದಿನಗಳಲ್ಲಿ ಈ ಹೆಚ್ಚುವರಿ ಟ್ರಿಪ್‌ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next