Advertisement

ಟಿ20 ವಿಶ್ವಕಪ್ ನಲ್ಲಿ ಕಿವೀಸ್ ವಿರುದ್ಧ ಉತ್ತಮವಾಗಿಲ್ಲ ದಾಖಲೆ! ಸೇಡು ತೀರಿಸಬಹುದೇ ಭಾರತ

09:32 AM Oct 31, 2021 | Team Udayavani |

ದುಬೈ: ಟಿ20 ವಿಶ್ವಕಪ್‌ ಅಭಿಯಾನವನ್ನು ಭಾರತ ತಂಡ ಇಂದು ಮುಂದುವರಿಸಲಿದೆ. ಅಪಾಯಕಾರಿ ನ್ಯೂಜಿಲೆಂಡ್‌ ಸವಾಲು ಕೊಹ್ಲಿ ಪಡೆಗೆ ಕಾದಿದೆ. ಎರಡೂ ತಂಡಗಳಿಗೆ ಇದು ಇದು ಅಳಿವು-ಉಳಿವಿನ ಪಂದ್ಯ. ಕ್ವಾರ್ಟರ್‌ ಫೈನಲ್‌ ಪಂದ್ಯದಷ್ಟೇ ಮಹತ್ವ ಹೊಂದಿದೆ. ಗೆದ್ದ ತಂಡಕ್ಕೆ ಸೆಮಿಫೈನಲ್‌ ಹಾದಿ ಸಲೀಸಾಗಲಿದೆ. ಸೋತರೆ ನೂರಾಯೆಂಟು ಲೆಕ್ಕಾಚಾರಗಳಿಗೆ ಜೋತು ಬೀಳಬೇಕು. ಮುಂದಿನ ಮಾರ್ಗ ಮುಚ್ಚಲೂಬಹುದು!

Advertisement

2019ರ ವಿಶ್ವಕಪ್ ಸೆಮಿ ಫೈನಲ್ ನೋವು, ಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಕಿವೀಸ್ ಮತ್ತೆ ಎದುರಾಗುತ್ತಿದೆ. ಅಂದಹಾಗೆ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತದ ದಾಖಲೆ ಉತ್ತಮವಾಗಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ.

ಮೊದಲ ಸೋಲು ಮೊದಲ ವಿಶ್ವಕಪ್‌ನಲ್ಲೇ ಎದುರಾಗಿತ್ತು. ಅಂದು ಧೋನಿ ಪಡೆ ಚಾಂಪಿಯನ್‌ ಆಗಿದ್ದರೂ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಕಿವೀಸ್‌ ವಿರುದ್ಧ 10 ರನ್‌ ಸೋಲನುಭವಿಸಿತ್ತು. ನ್ಯೂಜಿಲೆಂಡಿನ 190 ರನ್ನಿಗೆ ಜವಾಬಾಗಿ ಭಾರತ 9 ವಿಕೆಟಿಗೆ 180ರ ತನಕ ಬಂದು ಶರಣಾಗಿತ್ತು. ಗಂಭೀರ್‌ (51)-ಸೆಹವಾಗ್‌ (40) 5.5 ಓವರ್‌ಗಳಿಂದ 76 ರನ್‌ ಪೇರಿಸಿ ಭದ್ರ ಬುನಾದಿ ನಿರ್ಮಿಸಿದರೂ ಡೇನಿಯಲ್‌ ವೆಟ್ಟೋರಿ 20 ರನ್ನಿಗೆ 4 ವಿಕೆಟ್‌ ಕಿತ್ತು ಪಂದ್ಯದ ಗತಿಯನ್ನೇ ಬದಲಿಸಿದರು.

ಇದನ್ನೂ ಓದಿ:ಇಂದು ಗೆದ್ದರೆ ಭಾರತ ಬಚಾವ್‌; ಗೆದ್ದರೆ ಸೆಮಿಫೈನಲ್‌ ಹಾದಿ ಸಲೀಸು

ಅನಂತರದ ಸೋಲು ಎದುರಾದದ್ದು 2016ರ ಸೂಪರ್‌-10 ವಿಭಾಗದಲ್ಲಿ. ನಾಗ್ಪುರದ ಈ ಪಂದ್ಯ ಸಣ್ಣ ಮೊತ್ತಕ್ಕೆ ಸಾಕ್ಷಿಯಾಗಿತ್ತು. ನ್ಯೂಜಿಲೆಂಡ್‌ 7ಕ್ಕೆ 126 ರನ್‌ ಗಳಿಸಿದಾಗ ಭಾರತ ಸುಲಭದಲ್ಲೇ ಗೆಲ್ಲಲಿದೆ ಎಂದು ಭಾವಿಸಲಾಗಿತ್ತು. ಆದರೆ ಮಿಚೆಲ್‌ ಸ್ಯಾಂಟ್ನರ್‌ (11ಕ್ಕೆ), ಐಶ್‌ ಸೋಧಿ (18ಕ್ಕೆ 3) ಘಾತಕವಾಗಿ ಪರಿಣಮಿಸಿದರು. ಭಾರತ 18.1 ಓವರ್‌ಗಳಲ್ಲಿ 79 ರನ್ನಿಗೆ ಸರ್ವಪತನ ಕಂಡಿತು!

Advertisement
Advertisement

Udayavani is now on Telegram. Click here to join our channel and stay updated with the latest news.

Next