Advertisement

ಬರ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ಪುನರ್‌ರಚನೆ

12:50 AM Jan 05, 2019 | Team Udayavani |

ಬೆಂಗಳೂರು:ರಾಜ್ಯದ ಪ್ರವಾಹ ಪೀಡಿತ ಹಾಗೂ ಬರಪೀಡಿತ ಪ್ರದೇಶಗಳ ಅಧ್ಯಯನ, ಪರಿಹಾರ ಹಾಗೂ ನಿರ್ವಹಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಚಿವ ಸಂಪುಟ ಉಪ ಸಮಿತಿ ಪುನರ್‌ರಚಿಸಲಾಗಿದೆ.

Advertisement

ರಾಜ್ಯ ಸಚಿವ ಸಂಪುಟ ಪುನರ್‌ರಚನೆಯಾದ ಹಿನ್ನೆಲೆಯಲ್ಲಿ ಕಂದಾಯ ವಿಭಾಗವಾರು ಸದಸ್ಯರನ್ನು ನೇಮಿಸಲಾಗಿದೆ.
ಬೆಳಗಾವಿ ವಿಭಾಗ: ಆರ್‌.ವಿ.ದೇಶಪಾಂಡೆ- ಅಧ್ಯಕ್ಷರು. ಸತೀಶ್‌ ಜಾರಕಿಹೊಳಿ, ಶಿವಾನಂದಪಾಟೀಲ್‌, ಜಮೀರ್‌ ಅಹಮದ್‌ ಖಾನ್‌, ಎಂ.ಸಿ.ಮನಗೊಳಿ, ಸಿ.ಎಸ್‌.ಶಿವಳ್ಳಿ, ಆರ್‌.ಬಿ.ತಿಮ್ಮಾಪುರ. (ಸದಸ್ಯರು)

ಕಲಬುರಗಿ ವಿಭಾಗ: ಬಂಡೆಪ್ಪ ಕಾಶಂಪೂರ್‌ – ಅಧ್ಯಕ್ಷರು. ಪ್ರಿಯಾಂಕ್‌ ಖರ್ಗೆ, ರಾಜಶೇಖರ ಪಾಟೀಲ್‌ ಹುಮ್ನಾಬಾದ್‌, ಟಿ.ಪಿ.ಪರಮೇಶ್ವರ್‌ ನಾಯಕ್‌, ವೆಂಕಟರಾವ್‌ ನಾಡಗೌಡ, ರಹೀಂಖಾನ್‌, ತುಕಾರಂ. (ಸದಸ್ಯರು)

ಬೆಂಗಳೂರು ವಿಭಾಗ: ಶಿವಶಂಕರರೆಡ್ಡಿ- ಅಧ್ಯಕ್ಷರು. ಡಿ.ಕೆ.ಶಿವಕುಮಾರ್‌, ವೆಂಕಟರಮಣಪ್ಪ, ಎಸ್‌.ಆರ್‌.ಶ್ರೀನಿವಾಸ್‌, ಡಿ.ಸಿ.ತಮ್ಮಣ್ಣ, ಎಂ.ಟಿ.ಬಿ.ನಾಗರಾಜ್‌. (ಸದಸ್ಯರು)

ಮೈಸೂರು ವಿಭಾಗ: ಕೃಷ್ಣಬೈರೇಗೌಡ- ಅಧ್ಯಕ್ಷರು. ಎಚ್‌.ಡಿ.ರೇವಣ್ಣ, ಕೆ.ಜೆ.ಜಾರ್ಜ್‌, ಯು.ಟಿ.ಖಾದರ್‌, ಜಿ.ಟಿ.ದೇವೇಗೌಡ, ಸಿ.ಎಸ್‌.ಪುಟ್ಟರಾಜು, ಸಾ.ರಾ.ಮಹೇಶ್‌, ಡಾ.ಜಯಮಾಲಾ, ಸಿ.ಪುಟ್ಟರಂಗಶೆಟ್ಟಿ ಅವರನ್ನು ನೇಮಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next