Advertisement

ನಾವು ಸಂತೋಷದಿಂದ ಬಿಜೆಪಿ ಸೇರಿದ್ದೇವೆ: ಎಚ್. ವಿಶ್ವನಾಥ್

09:47 AM Nov 15, 2019 | Team Udayavani |

ಬೆಂಗಳೂರು: ನಾವು 17 ಜನರು ಅತ್ಯಂತ ಸಂತೋಷದಿಂದ ಬಿಜೆಪಿಯನ್ನು ಸೇರಿದ್ದೇವೆ. ನಾವು ಬಹಳ ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದವರು. ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ ಎಂದು ಎಚ್ ವಿಶ್ವನಾಥ್ ಹೇಳಿದರು.

Advertisement

ಅನರ್ಹರಾಗಿದ್ದ ಶಾಸಕರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ನಂತರ ಮಾತನಾಡಿದ ಎಚ್ ವಿಶ್ವನಾಥ್, ಎಲೈ ಮನುಷ್ಯನೆ ಯಾವ ಕಾಲಕ್ಕೆ ನಿನಗೆ ಯೋಗ ಫಲಾಪಲ. ಬರುತ್ತದೆಯೋ ದೃಷ್ಟಿ ಕರ್ತನಾದ ನನಗೆ ಅರ್ಥವಾಗುವುದಿಲ್ಲ. ಬಂದ ಫಲಾನುಫಲಗಳನ್ನು ಅನಭವಿಸು ಎಂದು ಸೃಷ್ಟಿಕರ್ತ ಹೇಳುತ್ತಾನೆ. ನಾವ್ಯಾರು ಅಧಿಕಾರಕ್ಕಾಗಿ ಅಧಿಕಾರ ತ್ಯಾಗ ಮಾಡಿದವರಲ್ಲ. ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ ಅಂತ್ಯಗೊಳಿಸಲು ನಾವು ಪಕ್ಷಾಂತರ ಮಾಡಬೇಕಾಯಿತು. ಇದು ಪಕ್ಷಾಂತರ ಅಲ್ಲ. ಈಗ ಪಕ್ಷ ರಾಜಕಾರಣ ವಿಫಲವಾಗಿದೆ. ಇಡೀ ದೇಶದಲ್ಲಿಯೇ ರಾಜಕಾರಣ ಧ್ರುವೀಕರಣ ಆಗಿದೆ ಎಂದರು.

17 ಜನರಿಗೆ ಶಿಕ್ಷೆ ಮಾಡಲೇಬೇಕೆಂದು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಕರ್ನಾಟಕದ ರಾಜಕಾರಣದಿಂದ ದೂರ ಇಡಲು ಹುನ್ನಾರ ಮಾಡಿದ್ದರು. ಅವರ ಹುನ್ನಾರವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ನಮಗೆ ಸ್ಪರ್ಧೆಗೆ ಅವಕಾಶ ಕೊಟ್ಟಿದೆ ಎಂದು ಹೇಳಿದರು.

ಇವತ್ತು ದೇಶದಲ್ಲಿ ಸಾಕಷ್ಟು ವಿಷಯಗಳು ಚರ್ಚೆಯಾಗಬೇಕು. ಪ್ರಧಾನಿ ನರೇಂದ್ರ ಮೋದಿಯವರ ಹೊಸ ಕನಸುಗಳಿಗೆ ಬೆಂಬಲವಾಗಿ ನಿಲ್ಲಲು ಬಂದಿದ್ದೇವೆ. ರಾಜ್ಯದ ಅಭಿವೃದ್ಧಿಗೆ ದುಡಿಯುವಲ್ಲಿ ನಮ್ಮದೂ ಒಂದು ಭಾಗವಾಗಲಿ ಎಂದು ನಾವು ಬಿಜೆಪಿಯೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next