ಬೆಂಗಳೂರು: ಬಜೆಟ್ ಅಧಿವೇಶನದ ಮೊದಲ ದಿನ ಸದನಕ್ಕ ಗೈರಾಗಿ ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿರುವ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡ ಅವರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಎಂದು ವರದಿಯಾಗಿದೆ.
ನಾರಾಯಣ ಗೌಡ ಅವರು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಧೋರಣೆ ಖಂಡಿಸಿ ಅಸಮಾಧಾನ
ಹೊರ ಹಾಕಿದ್ದರು. ಅನಾರೋಗ್ಯದ ಕಾರಣ ನೀಡಿ ಸದನಕ್ಕೆ ಗೈರಾಗಿದ್ದಾರೆ.
ಸದನಕ್ಕೆ ಗೈರಾದ ಹಿನ್ನಲೆಯಲ್ಲಿ ಸಚಿವ ಪುಟ್ಟರಾಜು ಅವರು ನಾರಾಯಣ ಗೌಡ ಅವರ ನಿವಾಸಕ್ಕೆ ತೆರಳಿ ವಾಪಾಸಾಗಿದ್ದಾರೆ . ಪುಟ್ಟರಾಜು ಅವರು ಆಗಮಿಸಿದ್ದ ವೇಳೆ ನಾರಾಯಣ ಗೌಡ ಅವರು ನಿವಾಸದಲ್ಲಿ ಇರಲಿಲ್ಲ.
ನಾರಾಯಣಗೌಡ ಅವರು ಮುಂಬಯಿಯಲ್ಲಿ ಇದ್ದು ಬಿಜೆಪಿ ಸಂಪರ್ಕಕದಲ್ಲಿ ಇದ್ದಾರೆ ಎನ್ನಲಾಗಿದೆ.
ಸದನದ ಮೊದಲ ದಿನ ಪಕ್ಷೇತರ ಇಬ್ಬರು, ಜೆಡಿಎಸ್‌ನ ಓರ್ವ ಮತ್ತು ಕಾಂಗ್ರೆಸ್‌ನ 7 ಮಂದಿ ಶಾಸಕರು ಗೈರಾಗಿ ಸರ್ಕಾರಕ್ಕೆ ಹೆದರಿಕೆ ಹುಟ್ಟಿಸಿದ್ದಾರೆ.