Advertisement
ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಅರಿತುಕೊಳ್ಳಿಎಲ್ಲರೂ ಎಲ್ಲ ಕ್ಷೇತ್ರಗಳಲ್ಲಿ ಉತ್ತಮರಾಗಿರಲು ಸಾಧ್ಯವಿಲ್ಲ. ಆದರೆ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಮೊದಲು ಅರಿತುಕೊಳ್ಳಿ . ಆಗ ನಿಮ್ಮ ಸಾಮರ್ಥ್ಯಗಳ ಮೇಲೆ ಹೆಚ್ಚು ಪರಿಶ್ರಮ ಹಾಕಿದರೆ ಅದೇ ಕ್ಷೇತ್ರದಲ್ಲಿ ನೀವು ಯಶಸ್ಸು ಸಾಧಿಸಲು ಸಹಾಯಕವಾಗುತ್ತದೆ.
ತಾಳ್ಮೆ ಮನುಷ್ಯನಿಗೆ ಬೇಕಾದ ಅತೀ ಮುಖ್ಯ ಅಂಶ. ತಾಳ್ಮೆ ಇಲ್ಲವಾದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ ಅತೀ ಅವಶ್ಯ. ಯಶಸ್ಸು ಯಾವತ್ತಿಗೂ ಸುಲಿದ ಬಾಳೆ ಹಣ್ಣಲ್ಲ. ಅದಕ್ಕೆ ಪರಿಶ್ರಮ, ಪ್ರಯತ್ನಗಳು ಎಷ್ಟು ಮುಖ್ಯವೋ, ತಾಳ್ಮೆ ಅಷ್ಟೆ ಮುಖ್ಯ. ಓದಿನಲ್ಲಿ ತಾಳ್ಮೆ ಇದ್ದಲ್ಲಿ ಮಾತ್ರ ಯಶಸ್ಸುಗಳಿಸಬಹುದು ಏಕೆಂದರೆ ಅಲ್ಲಿ ಸ್ಪರ್ಧೆ ಅಧಿಕ. ಮೊದಲ ಪ್ರಯತ್ನದಲ್ಲಿ ಸೋಲಾಗಬಹುದು, ಪದೇ ಪದೇ ಸೋಲಾದರೂ ಪ್ರಯತ್ನ ಮಾತ್ರ ನಿಲ್ಲಬಾರದು. ಸೋಲುಗಳು ನಿಮ್ಮ ಮೇಲೆರಗಿ ಮುಚ್ಚಿ ಹಾಕಲು ಪ್ರಯತ್ನಿಸಿದಾಗಲೆಲ್ಲಾ ತುಳಿದು ಮೇಲೆ ನಿಲ್ಲಲು ಕಲಿಯಿರಿ ಆಗ ಮಾತ್ರ ಯಶಸ್ಸಿನ ಶಿಖರಕ್ಕೇರಲು ಸಾಧ್ಯ.
Related Articles
ಬಿಚ್ಚಿಟ್ಟದ್ದು ಬೆಳೆಯಿತು, ಮುಚ್ಚಿದ್ದು ಕೊಳೆಯಿತು ಎನ್ನುವ ಗಾದೆ ಮಾತಿನಂತೆ ಜ್ಞಾನವನ್ನು ಹಂಚಿಕೊಂಡಷ್ಟು ಅದು ಇನ್ನಷ್ಟು ಹರವನ್ನು ಪಡೆದುಕೊಳ್ಳುತ್ತದೆ. ಗೊತ್ತಿರುವುದನ್ನು ಪರರೊಂದಿಗೆ ಹಂಚಿಕೊಳ್ಳಿ. ಆಗ ಮಾತ್ರ ಹೊಸ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಇಲ್ಲಿ ನನಗೆ ಗೊತ್ತಿರುವುದನ್ನು ನನ್ನ ಸಹಪಾಠಿಗೆ ಹೇಳಿದರೆ ಅವನು ಜಾಣನಾಗುತ್ತಾನೆ ಎನ್ನುವ ಅಭಿಪ್ರಾಯವೇ ಇದಕ್ಕೆ ಕಾರಣ. ಮೊದಲು ಇದನ್ನು ತೆಗೆದು ಹಾಕಿ.
Advertisement
ಶಿವಾನಂದ್ ಎಚ್.