ಸುವುದು ಗ್ಯಾರಂಟಿ, ಗ್ಯಾರಂಟಿ, ಗ್ಯಾರಂಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.
Advertisement
ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾವು ನೀಡಿರುವ ಭರವಸೆಗಳನ್ನು ಈಡೇರಿಸಿಯೇ ತೀರುತ್ತೇವೆ. 5 ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಅನುಷ್ಠಾನಗೊಳಿಸಿದ್ದೇವೆ. ಜುಲೈ 1ರಿಂದ ಗೃಹಜ್ಯೋತಿ ಆರಂಭವಾಗಲಿದೆ. ಆ. 15ರ ಅನಂತರ ಗೃಹಲಕ್ಷ್ಮಿ ಅನುಷ್ಠಾನವಾಗಲಿದೆ. 2022-23ನೇ ಸಾಲಿನಲ್ಲಿ ಪಾಸಾದ ಪದವೀಧರರು, ಡಿಪ್ಲೊಮಾ ಪಾಸಾದವರಿಗೂ ಯುವ ನಿಧಿ ಯೋಜನೆ ಜಾರಿಯಾಗಲಿದೆ ಎಂದರು.
ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರ ಅಕ್ಕಿ ಕೊಡದೆ ನೀಚತನದ ರಾಜಕಾರಣ ಮಾಡುತ್ತಿದೆ. ಎಫ್ಸಿಐನಲ್ಲಿ ಸಾಕಷ್ಟು ಅಕ್ಕಿ ದಾಸ್ತಾನಿದೆ. ಆದರೂ ಕೇಂದ್ರ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಕರ್ನಾಟಕಕ್ಕೆ ಅಕ್ಕಿ ಕೊಡದಂತೆ ಸೂಚಿಸಿದ್ದರಿಂದ ಎಫ್ಸಿಐ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಜೂ. 9ರಂದು ರಾಜ್ಯ ಸರಕಾರ ಅಕ್ಕಿ ಕೋರಿ ಬರೆದ ಪತ್ರಕ್ಕೆ ಎಫ್ಸಿಐ ಸ್ಪಂದಿಸಿ ಜೂ. 12ರಂದು ಅಕ್ಕಿ ಕೊಡುವುದಾಗಿ ಒಪ್ಪಿ ಪತ್ರ ಬರೆದಿತ್ತು. ಆದರೆ ಜೂ. 14ರಂದು ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದೆ. ನಾವೇನು ಪುಕ್ಕಟೆ ಕೇಳುತ್ತಿಲ್ಲ. ಕೆಜಿಗೆ 36.70 ರೂ. ದರದಲ್ಲಿ ಖರೀದಿಸುವುದಾಗಿ ಹೇಳಿದರೂ ಕೊಡುತ್ತಿಲ್ಲ. ಬಿಜೆಪಿ ಬಡವರ ವಿರೋಧಿ, ಬಡವರಿಗೆ ಅಕ್ಕಿ ಕೊಡದ ನೀಚ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರಕಾರದ ಹಗರಣಗಳ ತನಿಖೆ
ಹಿಂದಿನ ಬಿಜೆಪಿ ಸರಕಾರದಲ್ಲಿ ನಡೆದಿದ್ದ ಹಲವು ಹಗರಣಗಳನ್ನು ತನಿಖೆ ನಡೆಸಲಾಗುವುದು. 4 ಮೆಡಿಕಲ್ ಕಾಲೇಜುಗಳ ನಿರ್ಮಾಣ ಕಾಮಗಾರಿಗಳಲ್ಲಿಯೂ ಅವ್ಯವಹಾರ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಖರೀದಿಸಿದ ಚಿಕಿತ್ಸಾ ಸಾಮಗ್ರಿಗಳ ಖರೀದಿಯಲ್ಲಿಯೂ ಅಕ್ರಮ ನಡೆದಿದೆ. ಆಕ್ಸಿಜನ್ ಸಿಗದೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸಾವುಗಳಾಗಿದ್ದವು. ಅಂದಿನ ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳಿದ್ದರು. ಆದರೆ ಹತ್ತಾರು ಮಂದಿ ಸಾವನ್ನಪ್ಪಿದ್ದರು ಈ ಬಗ್ಗೆ ತನಿಖೆ ನಡೆಯಲಿದೆ. ಶೇ. 49 ಕಮಿಷನ್, ನೀರಾವರಿ ಇಲಾಖೆಯ ಕಾಮಗಾರಿಗಳ ಅಕ್ರಮದ ಹಗರಣದ ಬಗ್ಗೆಯೂ ತನಿಖೆ ಮಾಡಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
Related Articles
ಎನ್‌ಸಿಸಿಎಫ್, ನ್ಯಾಫೆಡ್, ಕೇಂದ್ರ ಭಂಡಾರದಿಂದ ಅಕ್ಕಿ ಖರೀದಿಗೆ ಕೊಟೇಷನ್ ಕೇಳಿದ್ದೇವೆ. ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್‌ನಿಂದಲೂ ಅಕ್ಕಿ ಖರೀದಿ ಪ್ರಯತ್ನ ನಡೆಸಿದ್ದೇವೆ. ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಕ್ಕಿ ಖರೀದಿಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಕ್ಕಿ ಲಭ್ಯವಾದ ನಂತರ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದರು.
Advertisement
ವಾರ್ಷಿಕ 59 ಸಾವಿರ ಕೋಟಿ ಹೊರೆ5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿ ಸಲು ಸರಕಾರಕ್ಕೆ ವಾರ್ಷಿಕ 59 ಸಾವಿರ ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತದೆ. ಏನೇ ಆದರೂ, ಯಾರು ಏನೇ ಹೇಳಿದರೂ ಗ್ಯಾರಂಟಿಗಳನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ಹೇಳಿದರು.