ಮಾಗಡಿ: ಶಿಕ್ಷಕರ ಋಣ ನನ್ನ ಮೇಲಿದ್ದು, ನನ್ನ ಕೊನೆ ಉಸಿರು ಇರುವರೆಗೂ ಶಿಕ್ಷಕರಿಗೆ ಮೋಸ ಮಾಡುವುದಿಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.
ಪಟ್ಟಣದ ಮಾರುತಿ ವಿದ್ಯಾಸಂಸ್ಥೆ ಆವರಣದಲ್ಲಿ ಶಿಕ್ಷಕರ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರ ನೂರು ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಜವಾಬ್ದಾರಿ ಎಂದು ನಂಬಿದ್ದೇನೆ. ನಾನೆಂದೂ ಶಿಕ್ಷಕರ ಶಕ್ತಿಯನ್ನು ಮರೆಯುವುದಿಲ್ಲ ಎಂದರು.
ಶಿಕ್ಷಕರ ಅನೇಕ ಸಮಸ್ಯೆಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದಿದ್ದೇನೆ. 6ನೇ ವೇತನ ಆಯೋಗ ಅನುಷ್ಠಾನ, ವರ್ಗಾವಣೆ ಸೇರಿದಂತೆ ಎಲ್ಲಾ ತರಹ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಮುಂದೆಯೂ ಬದ್ಧನಾಗಿರುವೆ ಎಂದು ತಿಳಿಸಿದರು.
350 ಕೋಟಿ ರೂ. ಕಾಲ್ಪನಿಕ ವೇತನ ಬಾಕಿ ಇದ್ದು,ಬಿಡುಗಡೆಗೆಮೊದಲಆದ್ಯತೆ ನೀಡಿದ್ದೇನೆ 305 ಪಿಯು ಪ್ರಾಂಶುಪಾಲರ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಿಸಿದ್ದೇನೆ. ಅನುದಾನಿತ ಶಿಕ್ಷಕರಿಗೆ ಪ್ಯಾಕೇಜ್ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. 3 ಬಾರಿ ನನ್ನನ್ನು ಶಿಕ್ಷಕರ ಕ್ಷೇತ್ರಕ್ಕೆ ಆಯ್ಕೆ ಮಾಡಿದ್ದೀರಿ, ಮುಂಬರುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಯೂ ನನ್ನನ್ನು ಗೆಲ್ಲಿಸುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಎಂ.ಸಿ.ಗೋವಿಂದರಾಜು, ಸಹ ಶಿಕ್ಷಕ ಸಂಘದ ಅಧ್ಯಕ್ಷ ವೆಂಕಟೇಶ್, ಮಾರುತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಗಂಗರಾಜು, ಶಿಕ್ಷಕರ ಸಂಘದ ಪ್ರಭುದೇವರು, ಜಿಲ್ಲಾಧ್ಯಕ್ಷ ಲೋಕೇಶ್, ಬಿ.ಆರ್.ರಾಜಶೇಖರ್, ರುದ್ರಮೂರ್ತಿ, ವೀರಭದ್ರಯ್ಯ ಮಾತನಾಡಿದರು.
ಇದೇ ವೇಳೆ ಶಿಕ್ಷಕರ ಸಂಘಟನೆ ಪದಾಧಿಕಾರಿಗಳು ಎಂಎಲ್ಸಿ ಪುಟ್ಟಣ್ಣ ಅವರನ್ನು ಸನ್ಮಾನಿಸಿದರು. ವೈ.ಎಲ್.ರಾಮಣ್ಣ, ಶಿಕ್ಷಕರ ಸಂಘದ ಗೌರಿಶಂಕರ್, ಗಂಗಾಧರ್, ಮುಖ್ಯ ಶಿಕ್ಷಕರ ಸಂಘದ ಎ.ಆರ್.ರಾಮಕೃಷ್ಣಯ್ಯ, ಕಾರ್ಯದರ್ಶಿ ನಾಗರಾಜು, ಮಹದೇವ್, ಗಂಗಹನುಮಯ್ಯ, ಜಾಲಮಂಗಲ ನಾಗರಾಜು, ವಾಸುದೇವ್, ಶ್ರೀನಿವಾಸ್, ವಸಂತ ಕುಮಾರ್, ನರಸೇಗೌಡ, ಆರಾಧ್ಯ, ಗುಣಶೇಖರ್, ಮಾರುತಿ ಸಂಸ್ಥೆಯ ಕಾರ್ಯದರ್ಶಿ ವೇದಾವತಿ, ರಾಧಾ, ಗಿರಿಜಾಮತ್ತಿತರರು ಇದ್ದರು.