Advertisement

ಟ್ರಂಪ್‌ ಪದಚ್ಯುತಿಗೆ ಶ್ವೇತಭವನದಲ್ಲೇ ಸಿದ್ಧತೆ?

11:21 AM May 21, 2017 | Team Udayavani |

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಸೌದಿ ಅರೇಬಿಯಾ ಪ್ರವಾಸಕ್ಕಾಗಿ ರಿಯಾದ್‌ಗೆ ಬಂದಿದ್ದರೆ, ಅತ್ತ ಅವರ ಮಹಾಭಿಯೋಗಕ್ಕೆ ಸಿದ್ಧªತೆ ನಡೆಯುತ್ತಿದೆ ಎಂಬ ವರದಿ ಬಹಿರಂಗವಾಗಿದೆ.

Advertisement

ವೈಟ್‌ಹೌಸ್‌ನಲ್ಲೇ ಇಬ್ಬರು ವಕೀಲರು ಈ ಸಂಬಂಧ ಕಾನೂನು ಮಾಹಿತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸೆನೆಟ್‌ ಮತ್ತು ಕಾಂಗ್ರೆಸ್‌ನಲ್ಲಿ ರಿಪಬ್ಲಿಕನ್‌ ಸಂಸದರೇ ಹೆಚ್ಚಿರು ವುದರಿಂದ ಅವರ ಮಹಾಭಿಯೋಗ ಕಷ್ಟ ಎಂದು ಹೇಳಲಾಗು ತ್ತಿದೆ.  ಅಲ್ಲದೆ ಈಗಲೇ ಮಹಾಭಿಯೋಗದ ಬಗ್ಗೆ ಮಾತನಾಡು ವುದು ತೀರಾ ಅವಸರದ್ದು ಎಂದು ಡೆಮಾಕ್ರಾಟ್‌ ಸಂಸದರು ಅಭಿಪ್ರಾಯ ಪಡುತ್ತಿದ್ದಾರೆ ಎನ್ನಲಾಗಿದೆ. ಆದರೂ ಶೇÌತಭವನ ದಲ್ಲಿರುವ ಕಾನೂನು ತಂಡದ ಇಬ್ಬರು ವಕೀಲರು ಈ ಬಗ್ಗೆ ಆಚೆ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಎಫ್ಬಿಐ ಮುಖ್ಯಸ್ಥರನ್ನು ವಜಾ ಮಾಡಿದ ಅನಂತರ, ಟ್ರಂಪ್‌ ಅವರ ರಷ್ಯಾ ಸ್ನೇಹದ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಶ್ವೇತಭವನವೂ ಸೇರಿ ಉನ್ನತ ಮಟ್ಟದ ಹುದ್ದೆಗಳಿಗೆ ನೇಮಕವೂ ಆಗಿಲ್ಲ. ಹೀಗಾಗಿ ಅಧಿಕಾರ ನಡೆಸುವಲ್ಲಿ ವಿಫ‌ಲರಾ ಗಿದ್ದಾರೆಂದು ಆರೋಪಿಸಿ ಪದಚ್ಯುತಿಗೆ ಯತ್ನಿಸಲಾಗುತ್ತಿದೆ.
 

Advertisement

Udayavani is now on Telegram. Click here to join our channel and stay updated with the latest news.

Next