ಬೆಂಗಳೂರು: ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡುವುದಕ್ಕೆ ರಾಜ್ಯ ಸರಕಾರ ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಿರುವುದು ತಾಂತ್ರಿಕವಾಗಿ ಗೊಂದಲ ಸೃಷ್ಟಿ ಮಾಡಿದ್ದು ” ಕೆಪಿಎಂಇ” ಕಾಯ್ದೆಯ ಅಸ್ಥಿತ್ವದ ಬಗ್ಗೆ ಪ್ರಶ್ನೆ ಮೂಡಿಸಿದೆ.
ಕಾಂಗ್ರೆಸ್ ನಾಯಕ, ಮಾಜಿ ಸಚಿವ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ರಾಜ್ಯಪಾಲರಿಂದ ಅಂಗೀಕೃತಗೊಂಡ ಕೆಪಿಎಂಇ ಕಾಯಿದೆಯ ಬಗ್ಗೆ ಸರಕಾರದ ನಿಲುವೇನು? ಎಂದು ಪ್ರಶ್ನಿಸಿದ್ದಾರೆ.
ಯಶಸ್ವಿನಿ ಯೋಜನೆಯ ಅನ್ವಯ ಪ್ರಾಥಮಿಕ ಸಹಕಾರ ಸಂಘದಲ್ಲಿ ನೋಂದಣಿಯಾದ ರೈತ ಕುಟುಂಬಕ್ಕೆ ಮಾತ್ರ ಎರಡು ಲಕ್ಷ ರೂ.ವರೆಗೆ ವೈದ್ಯ ಸೌಕರ್ಯ ದ ಸೌಲಭ್ಯ ಸಿಗುತ್ತದೆ. ಇದಕ್ಕಿಂದ ಹೆಚ್ಚು ಹಣ ಖರ್ಚಾದರೆ ಯಾರು ಭರಿಸುತ್ತಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಎರಡು ಲಕ್ಷಕ್ಕೂ ಮೇಲ್ಪಟ್ಟು ವೈದ್ಯ ವೆಚ್ಚಕ್ಜೆ ಆಯುಷ್ಮಾನ್ ಭಾರತ್ ಯೋಜನೆ ಅನ್ವಯ ಸೌಲಭ್ಯ ಪಡೆಯಬಹುದು ಎಂದರು. ಆದರೆ ಕೆಪಿಎಂಇ ಕಾಯಿದೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಂಗಳವಾರ ಬಜೆಟ್ ಮೇಲಿನ ಉತ್ತರ ಸಂದರ್ಭದಲ್ಲಿ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.