Advertisement
ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಕೆ.ಎಸ್.ಟಿ.ಡಿ.ಸಿ ಮಾಜಿ ಅಧ್ಯಕ್ಷ ರಾದ ಎಚ್ .ಎ.ಹುಸೇನ್ ಪತ್ರಿಕಾ ಪ್ರಕಟಣೆ ನೀಡಿದ್ದು,ಮಾನ್ಯ ಸಿ.ಎಂ.ಇಬ್ರಾಹಿಂ ಅವರೇ, ನಿಮಗೆ ಗೌರವಪೂರ್ವಕ ವಂದನೆಗಳು. ವಿಧಾನ ಪರಿಷತ್ ವಿಪಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ತಾವು, ಆ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇನ್ನೂ ಮೂರು ವರ್ಷಗಳ ಅವಧಿ ಬಾಕಿ ಇರುವಾಗಲೇ ನಿಮ್ಮ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದರ ಜತೆಗೆ ಪಕ್ಷ ತ್ಯಾಗಕ್ಕೂ ನಿರ್ಧರಿಸುವ ವಿಚಾರ ನಮಗೆಲ್ಲರಿಗೂ ದಿಗ್ಬ್ರಮೆ ಮೂಡಿಸಿದೆ.
Related Articles
Advertisement
ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಸಿ.ಎಂ.ಇಬ್ರಾಹಿಂ ಅವರ ಅವರ ಮನವೊಲಿಸಲು ರಿಜ್ವಾನ್ ಅರ್ಷದ್ ಮುಂದಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅರ್ಷದ್, ಈಗ ಅಧಿಕಾರಕ್ಕಾಗಿ ಹೋರಾಟ ಮಾಡುವ ಸಮಯವಲ್ಲ.ಸೈದ್ಧಾಂತಿಕವಾಗಿ ಹೋರಾಟ ಮಾಡಬೇಕಿದೆ. ಇಬ್ರಾಹಿಂ ತಾಳ್ಮೆ ಕಳೆದುಕೊಳ್ಳುವುದು ಬೇಡ. ಪದೇ ಪದೇ ಪಕ್ಷದ ವಿರುದ್ಧ ಮಾತನಾಡುವುದು ತಪ್ಪು. ಪಕ್ಷ ಮತ್ತು ಹೈಕಮಾಂಡ್ ಗೆ ತಪ್ಪು ಸಂದೇಶ ರವಾನೆ ಆಗುತ್ತದೆ. ನಾವು ನೀವು ಸೇರಿ ಬಿಜೆಪಿ ವಿರುದ್ಧ ಹೋರಾಟ ಮಾಡೋಣ ಎಂದರು.
ಅಲ್ಪಸಂಖ್ಯಾತ ನಾಯಕರು ಗೇಣಿದಾರರು ಎಂಬ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಯುವಕರಾದರೂ ನಮಗೆ ಅವಕಾಶಗಳು ಕೊಟ್ಟಿದ್ದಾರೆ. ಕಾಂಗ್ರೆಸ್ ಆ ರೀತಿ ನಡೆಸಿಕೊಂಡಿಲ್ಲ. ಮಾತಿನ ಮಲ್ಲ ಇಬ್ರಾಹಿಂ ನೋವಿನಲ್ಲಿ ಇದ್ದಾರೆ.ಇಂತಹ ಸಂದರ್ಭದಲ್ಲಿ ಅವರ ಮಾತು ಸಿರಿಯಸ್ ಆಗಿ ತೆಗೆದುಕೊಳ್ಳ ಬಾರದು. ನಾನು ಸಹ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.