Advertisement
ಹಿಂದೆ ಫಲಿತಾಂಶ ಪ್ರಕಟಗೊಂಡ ತಿಂಗಳುಗಳ ಬಳಿಕ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ತಿಂಗಳು ಗಟ್ಟಲೆ ಕಳೆಯುವ ಸ್ಥಿತಿ ವಿದ್ಯಾರ್ಥಿಗಳದ್ದಾಗಿತ್ತು. ಇದರಿಂದ 6ನೇ ಸೆಮಿಸ್ಟರ್ ಮುಗಿಸಿರುವ ಹೆಚ್ಚು ಅಂಕದ ನಿರೀಕ್ಷೆಯಲ್ಲಿರುವ ಮರುಮೌಲ್ಯಮಾಪನಕ್ಕೆ ಆಕಾಂಕ್ಷಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಆದರೆ ಈ ಬಾರಿ ತುರ್ತು ಮರು ಮೌಲ್ಯಮಾಪನದಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಸ್ನಾತ ಕೋತ್ತರ ಪದವಿಯ ಆಯ್ಕೆಯ ಕೌನ್ಸೆಲಿಂಗ್‌ಗೆ ಮೊದಲೇ ವಿದ್ಯಾರ್ಥಿಗಳು ಮರುಮೌಲ್ಯಮಾಪನದ ಫಲಿತಾಂಶ ಪಡೆಯಲಿದ್ದಾರೆ.
ಮಂಗಳೂರು ವಿ.ವಿ.ಯಲ್ಲಿ ಈ ಹಿಂದೆ ಹಂತ ಹಂತವಾಗಿ 6ನೇ ಸೆಮಿಸ್ಟರ್, 4ನೇ ಸೆಮಿಸ್ಟರ್ ಮತ್ತು 2ನೇ ಸೆಮಿಸ್ಟರ್‌ನ ಫಲಿತಾಂಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಏಕಕಾಲದಲ್ಲಿ ಎಲ್ಲ ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ಸ್ (ಬಿವಿಸಿ), ಬಿಎಸ್ಸಿ ಆ್ಯನಿ ಮೇಶನ್ ಪದವಿಯ ಫಲಿತಾಂಶ ಹೊರತುಪಡಿಸಿ ಉಳಿದ ಎಲ್ಲ ಕೋರ್ಸುಗಳ ಫಲಿತಾಂಶ ಏಕಕಾಲ ದಲ್ಲಿ ಪ್ರಥಮ ಬಾರಿಗೆ ಪ್ರಕಟ ಮಾಡುವ ಮೂಲಕ ದಾಖಲೆ ಬರೆದಿದೆ. ಪರೀಕ್ಷಾ ನೋಂದಣಿ, ಆಂತರಿಕ ಪರೀಕ್ಷಾ ಅಂಕಗಳು, ಹಾಲ್ ಟಿಕೆಟ್, ಪರೀಕ್ಷಾ ಹಾಜ ರಾತಿಯ ಮಾಹಿತಿ ಪರೀಕ್ಷೆ ಪ್ರಾರಂಭ ವಾದ ಒಂದು ಗಂಟೆಯಲ್ಲಿ ಆನ್‌ಲೈನ್ ಮೂಲಕವೇ ಸರ್ವರ್‌ಗೆ ಮಾಹಿತಿ ಸಿಗುವುದರಿಂದ ಪರೀಕ್ಷಾಂಗ ಕಾರ್ಯಗಳು ಸುಸೂತ್ರವಾಗಿ ನಡೆಯಲು ಸಾಧ್ಯವಾಗಿದೆ. ಪ್ರತೀ ವರ್ಷ ಮೌಲ್ಯಮಾಪನ ನಡೆದ ಒಂದು ತಿಂಗಳ ಬಳಿಕ ಫಲಿತಾಂಶ ಪ್ರಕಟವಾಗುತ್ತಿತ್ತು. ಆದರೆ ಈ ಬಾರಿ ಜೂ. 12ಕ್ಕೆ ಮೌಲ್ಯಮಾಪನ ಕಾರ್ಯ ಮುಗಿದು ಒಎಂಆರ್ ಶೀಟ್ ಶೀಘ್ರವೇ ಮುಗಿಸಿ, ಪರೀಕ್ಷಾಂಗ ಪರಿಣತರನ್ನು ಸ್ಥಳದಲ್ಲಿಯೇ ಕರೆಸಿ ಫಲಿ ತಾಂಶವನ್ನು ಆನ್‌ಲೈನ್‌ಗೆ ಅಪ್‌ಡೇಟ್ ಮಾಡಿ ಜೂ. 24ಕ್ಕೆ ಫಲಿತಾಂಶ ಪ್ರಕಟವಾಗಲು ಸಹಕಾರಿಯಾಗಿದೆ. ಪ್ರತೀ ವರ್ಷ ಜುಲೈ 18ರ ಸುಮಾರಿಗೆ ಫಲಿತಾಂಶ ಪ್ರಕಟ ವಾಗುತ್ತಿತ್ತು. ಅಂಕಪಟ್ಟಿಯೂ ಜು. 5ರೊಳಗೆ ಕಾಲೇಜುಗಳಿಗೆ ರವಾನೆ ಯಾಗಲಿದೆ.
Related Articles
Advertisement
ಈ ಬಾರಿ ಪ್ರಥಮ ಬಾರಿಗೆ ಪರೀ ಕ್ಷಾಂಗ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಕಾರ್ಯ ಗಳನ್ನು ಆನ್‌ಲೈನ್‌ನಲ್ಲೇ ನಡೆಸಿದ್ದರಿಂದ ಕ್ಷಿಪ್ರ ಗತಿ ಯಲ್ಲಿ ಫಲಿತಾಂಶ ನೀಡಲು ಸಾಧ್ಯ ವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾ ರಣೆ ತರಲು ಪ್ರಯತ್ನಿಸಲಾಗುವುದು.– ಡಾ| ಎ.ಎಂ. ಖಾನ್
ಪರೀಕ್ಷಾಂಗ ಕುಲಸಚಿವರು ಮಂಗಳೂರು ವಿ.ವಿ.