Advertisement

ಆರ್‌ಸಿಬಿ-ಕೆಕೆಆರ್‌ ಎಲಿಮಿನೇಟರ್‌ ಪಂದ್ಯ

11:26 PM Oct 08, 2021 | Team Udayavani |

ದುಬಾೖ: ಕೇವಲ ಔಪಚಾರಿಕ ಪಂದ್ಯವಾಗಿದ್ದ ಡೆಲ್ಲಿ ಎದುರಿನ ಅಂತಿಮ ಲೀಗ್‌ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದ ಆರ್‌ಸಿಬಿ 3ನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದೆ. ಸೋಮವಾರದ ಎಲಿಮಿನೇಟರ್‌ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಸೆಣಸಲಿದೆ.

Advertisement

ಅಗ್ರಸ್ಥಾನಿ ಡೆಲ್ಲಿ 5 ವಿಕೆಟಿಗೆ 164 ರನ್‌ ಗಳಿಸಿದರೆ, ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟಿಗೆ 166 ರನ್‌ ಬಾರಿಸಿತು. ಕೀಪರ್‌ ಶ್ರೀಕರ್‌ ಭರತ್‌ (ಅಜೇಯ 78) ಅಂತಿಮ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಆರ್‌ಸಿಬಿ ಗೆಲುವನ್ನು ಸಾರಿದರು. ಪ್ರಚಂಡ ಫಾರ್ಮ್ ನಲ್ಲಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಜೇಯ 51 ರನ್‌ ಮಾಡಿದರು. ಇವರಿಬ್ಬರ 4ನೇ ವಿಕೆಟ್‌ ಜತೆಯಾಟದಲ್ಲಿ 111 ರನ್‌ ಹರಿದು ಬಂತು. ಎಬಿಡಿ 26 ರನ್‌ ಮಾಡಿದರು.

ಶಿಖರ್‌ ಧವನ್‌-ಪೃಥ್ವಿ ಶಾ ಜೋಡಿ ಪವರ್‌ ಪ್ಲೇ ಅವಧಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದರು. ಸ್ಕೋರ್‌ ವಿಕೆಟ್‌ ನಷ್ಟವಿಲ್ಲದೆ 55ಕ್ಕೆ ಏರಿತು. ಮೊದಲ ವಿಕೆಟಿಗೆ 10.1 ಓವರ್‌ಗಳಿಂದ 88 ರನ್‌ ಒಟ್ಟುಗೂಡಿತು.

43 ರನ್‌ ಮಾಡಿದ ಧವನ್‌ (35 ಎಸೆತ, 3 ಬೌಂಡರಿ, 2 ಸಿಕ್ಸರ್‌) ಅವರನ್ನು ಔಟ್‌ ಮಾಡಿದ ಹರ್ಷಲ್‌ ಪಟೇಲ್‌ ಮೊದಲ ಬೇಟೆಯಾಡಿದರು. ಸ್ಕೋರ್‌ ನೂರರ ಗಡಿ ದಾಟಿದೊಡನೆ ಪೃಥ್ವಿ ಶಾ ವಿಕೆಟ್‌ ಉರುಳಿತು. ಶಾ 41 ಎಸೆತ ನಿಭಾಯಿಸಿ 48 ರನ್‌ ಬಾರಿಸಿದರು (4 ಫೋರ್‌, 2 ಸಿಕ್ಸರ್‌). ಇವರು ಚಹಲ್‌ ಮೋಡಿಗೆ ಸಿಲುಕಿದರು. ನಾಯಕ ಪಂತ್‌ ಸಿಡಿಯಲು ವಿಫ‌ಲರಾದರು (10). ಶ್ರೇಯಸ್‌ ಅಯ್ಯರ್‌ 18 ರನ್‌ ಮಾಡಿದರೆ, ಹೆಟ್‌ಮೈರ್‌ 22 ಎಸೆತಗಳಿಂದ 29 ರನ್‌ ಗಳಿಸಿ ಕೊನೆಯ ಎಸೆತದಲ್ಲಿ ಔಟಾದರು (2 ಬೌಂಡರಿ, 2 ಸಿಕ್ಸರ್‌).

ಇದನ್ನೂ ಓದಿ:ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌: ಭಾರತಕ್ಕೆ 10 ಗೋಲ್ಡ್‌

Advertisement

ಈ ಪಂದ್ಯಕ್ಕಾಗಿ ಎರಡೂ ತಂಡಗಳಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ.

ಸಂಕ್ಷಿಪ್ತ ಸ್ಕೋರ್‌
ಡೆಲ್ಲಿ-5 ವಿಕೆಟಿಗೆ 164 (ಶಾ 48, ಧವನ್‌ 43, ಹೆಟ್‌ಮೈರ್‌ 29, ಸಿರಾಜ್‌ 25ಕ್ಕೆ 2, ಕ್ರಿಸ್ಟಿಯನ್‌ 19ಕ್ಕೆ 1, ಚಹಲ್‌ 34ಕ್ಕೆ 1, ಪಟೇಲ್‌ 34ಕ್ಕೆ 1). ಆರ್‌ಸಿಬಿ-20 ಓವರ್‌ಗಳಲ್ಲಿ 3 ವಿಕೆಟಿಗೆ 166 (ಭರತ್‌ ಔಟಾಗದೆ 78, ಮ್ಯಾಕ್ಸ್‌ವೆಲ್‌ ಔಟಾಗದೆ 51, ಎಬಿಡಿ 26, ನೋರ್ಜೆ 24ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next