Advertisement
ಲಕ್ನೋ 3 ಪಂದ್ಯಗಳಲ್ಲಿ ಎರಡನ್ನು ಗೆದ್ದರೆ, ಬೆಂಗಳೂರು ಎರಡರಲ್ಲಿ ಒಂದನ್ನು ಗೆದ್ದು ಇನ್ನೊಂದನ್ನು ಕಳೆದು ಕೊಂಡಿದೆ. ಮೊದಲ ಪಂದ್ಯದ ಗೆಲುವು ಚಿನ್ನಸ್ವಾಮಿ ಅಂಗಳದಲ್ಲೇ ಮುಂಬೈ ವಿರುದ್ಧ ಒಲಿದಿತ್ತು. ಆದರೆ ಕೋಲ್ಕತಾಕ್ಕೆ ಹೋಗಿ ಕೆಕೆಆರ್‌ಗೆ ಸಂಪೂರ್ಣ ಶರಣಾಗಿ ಬಂತು.ಮುಂಬೈಯನ್ನು ಫಾ ಡುಪ್ಲೆಸಿಸ್-ವಿರಾಟ್ ಕೊಹ್ಲಿ ಇಬ್ಬರೇ ಸೇರಿ ಕೊಂಡು ಕೆಡವಿದಾಗ ಆರ್‌ಸಿಬಿ ಅಭಿ ಮಾನಿಗಳು ಸಂಭ್ರಮಿಸಿದ್ದು ಅಷ್ಟಿಷ್ಟಲ್ಲ. ಆದರೆ ತಂಡದ ಬ್ಯಾಟಿಂಗ್ ಆಳ ಏನೂ ಇಲ್ಲ ಎಂಬುದು ಕೆಕೆಆರ್ ವಿರುದ್ಧ ಸ್ಪಷ್ಟವಾಗಿ ಅರಿವಿಗೆ ಬಂತು. ಡುಪ್ಲೆಸಿಸ್, ಕೊಹ್ಲಿ ಹೊರತುಪಡಿಸಿದರೆ ನಿಂತು ಆಡುವವರು ಇಲ್ಲ. ಇವರಿಬ್ಬರು ಬೇಗ ಪೆವಿಲಿಯನ್ ಸೇರಿಕೊಂಡರೆ ಏನಾಗಬೇಕಿತ್ತೋ ಅದೇ ಆಯಿತು. ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳ ಅಭಾವ ಎದ್ದು ಕಾಣುತ್ತದೆ.
ಆರ್‌ಸಿಬಿಗೆ ತುರ್ತು ಅಗತ್ಯವಿರು ವುದು ಸ್ಪೆಷಲಿಸ್ಟ್ ವನ್‌ಡೌನ್ ಹಾಗೂ ಮಿಡ್ಲ್ ಆರ್ಡರ್ ಬ್ಯಾಟ್ಸ್ ಮನ್. ಇಲ್ಲಿ ಗೋಚರಿಸುವ ಹೆಸರು ಮಹಿಪಾಲ್ ಲೊನ್ರೋರ್, ಸುಯಶ್ ಪ್ರಭುದೇಸಾಯಿ ಮಾತ್ರ. ಹಾಗೆಯೇ ಘಾತಕ ಬೌಲರ್. ವೇಯ್ನ ಪಾರ್ನೆಲ್ ಬಂದರೆ ಪರಿಸ್ಥಿತಿ ಸುಧಾರಿಸಬಹುದು.
Related Articles
ಲಕ್ನೋ ಸೂಪರ್‌ಜೈಂಟ್ಸ್ ಬಿಗ್ ಹಿಟ್ಟರ್ ಹಾಗೂ ಉತ್ತಮ ದರ್ಜೆಯ ಆಲ್‌ರೌಂಡರ್‌ಗಳನ್ನು ಹೊಂದಿರುವ ತಂಡ. ಜತೆಗೆ ಅತ್ಯುತ್ತಮ ದರ್ಜೆಯ ಸ್ಪಿನ್ನರ್‌ಗಳನ್ನೂ ಹೊಂದಿದೆ. ಹೈದರಾ ಬಾದ್ ವಿರುದ್ಧ ಕೃಣಾಲ್ ಪಾಂಡ್ಯ ಆಲ್‌ರೌಂಡ್ ಶೋ ನೀಡಿದ್ದನ್ನು ಮರೆ ಯುವಂತಿಲ್ಲ. ಜತೆಗೆ ರವಿ ಬಿಷ್ಣೋಯಿ, ಅಮಿತ್ ಮಿಶ್ರಾ ಕೂಡ ಉತ್ತಮ ಲಯದಲ್ಲಿದ್ದಾರೆ. ಬಿಷ್ಣೋಯಿ ಈಗಾ ಗಲೇ 6 ವಿಕೆಟ್ ಉರುಳಿಸಿದ್ದಾರೆ.
Advertisement
ಕೈಲ್ ಮೇಯರ್, ರಾಹುಲ್, ಹೂಡಾ, ಸ್ಟೋಯಿನಿಸ್, ಶೆಫರ್ಡ್, ಪೂರಣ್ ಅವರನ್ನೊಳಗೊಂಡ ಲಕ್ನೋ ಬ್ಯಾಟಿಂಗ್ ಸರದಿ ಕೂಡ ವೈವಿಧ್ಯ ಮಯ. ಮೇಲ್ನೋಟಕ್ಕೆ ಲಕ್ನೋ ಪಡೆ ಆರ್‌ಸಿಬಿಗಿಂತ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ.
ಡೆಲ್ಲಿ ವಿರುದ್ಧ 50 ರನ್ ಜಯ, ಚೆನ್ನೈ ವಿರುದ್ಧ 12 ರನ್ ಸೋಲಿನ ಬಳಿಕ ಹೈದರಾಬಾದ್‌ಗೆ 5 ವಿಕೆಟ್ ಸೋಲುಣಿಸಿದ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನ ಹಳಿ ಏರಿದೆ.