Advertisement

Udupi: ರೈಲಿನಲ್ಲಿ ಬ್ಯಾಗ್‌ ಬಾಕಿ; ಸುರಕ್ಷಿತವಾಗಿ ಮರಳಿ ಪಡೆದ ಯಾತ್ರಿಕ

08:24 PM Dec 29, 2024 | Team Udayavani |

ಉಡುಪಿ: ರೈಲ್ವೇ ಪ್ರಯಾಣಿಕರೋರ್ವರು ರೈಲಿನಿಂದ ಇಳಿಯುವ ವೇಳೆ ಲಗೇಜು ಬ್ಯಾಗ್‌ ಮರೆತು ಇಳಿದಿದ್ದು, ಸಕಾಲದಲ್ಲಿ ಸ್ಪಂದಿಸಿದ ಉಡುಪಿ ರೈಲ್ವೇ ನಿಲ್ದಾಣದ ರೈಲ್ವೇ ರಕ್ಷಣಾ ತಂಡದ (ಆರ್‌ಪಿಎಫ್) ಅಧಿಕಾರಿಗಳು ವಾರಸುದಾರರಿಗೆ ಬ್ಯಾಗ್‌ ಸುರಕ್ಷಿತವಾಗಿ ಮರಳಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸನತ್‌ ದೇವಾಡಿಗ ಎಂಬವರು ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತಿದ್ದ ವೇಳೆ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ಡಿಬೋರ್ಡಿಂಗ್‌ ಮಾಡುವಾಗ ಬ್ಯಾಗ್‌ ಅನ್ನು ರೈಲ್ವೇ ಕೋಚ್‌ನಲ್ಲಿ ಮರೆತು ಇಳಿದಿದ್ದರು. ಗಮನಕ್ಕೆ ಬಂದ ತತ್‌ಕ್ಷಣ ಅವರು ರೈಲ್ವೇ ಕಂಟ್ರೋಲ್‌ ನಂಬರ್‌ 139 ಅನ್ನು ಸಂಪರ್ಕಿಸಿ ಮಾಹಿತಿ ಹಂಚಿಕೊಂಡಿದ್ದಾರೆ.

ರೈಲು ಉಡುಪಿ ರೈಲ್ವೇ ನಿಲ್ದಾಣಕ್ಕೆ ಬಂದಾಗ ಅಲ್ಲಿನ ಅಧಿಕಾರಿಗಳು ಬ್ಯಾಗ್‌ ಪತ್ತೆ ಹಚ್ಚಿ ರಕ್ಷಿಸಿಟ್ಟಿದ್ದಾರೆ. ತದಂತದ ಬ್ಯಾಗ್‌ನ ವಾರಸುದಾರರಿಗೆ ಮಾಹಿತಿ ನೀಡಿದ್ದು, ಅವರು ರೈಲ್ವೇ ನಿಲ್ದಾಣಕ್ಕೆ ಬಂದು ಲಗೇಜ್‌ನ ಗುರುತು ನೀಡಿ ಸೊತ್ತುಗಳನ್ನು ಪಡೆದುಕೊಂಡರು.

ಬ್ಯಾಗ್‌ನಲ್ಲಿ ಚಿನ್ನಾಭರಣ ಮತ್ತು ಎರಡು ಲ್ಯಾಪ್‌ಟಾಪ್‌ ಸೇರಿ 4ಲಕ್ಷ ರೂ. ಮೌಲ್ಯದ ಸೊತ್ತುಗಳಿದ್ದವು. ಎಲ್ಲವೂ ಸುರಕ್ಷಿತವಾಗಿ ವಾರಸುದಾರರ ಕೈ ಸೇರಿದೆ. ಸುರಕ್ಷಿತವಾಗಿ ಸೊತ್ತು ವಾಪಸ್‌ ಪಡೆಯುವಲ್ಲಿ ನೆರವಾದ ರೈಲ್ವೇ ಅಧಿಕಾರಿ, ಸಿಬಂದಿಗಳ ಬಗ್ಗೆ ಸನತ್‌ ದೇವಾಡಿಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next