Advertisement

ಆರ್‌ಸಿ ಹರ್ಷ ಗುಪ್ತಾ ನಗರ ಪ್ರದಕ್ಷಿಣೆ

05:01 PM May 10, 2017 | Team Udayavani |

ಕಲಬುರಗಿ: ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಮಂಗಳವಾರ ಸಂಜೆ ನಗರದಲ್ಲಿ ದಿಢೀರ್‌ ಪ್ರದಕ್ಷಿಣೆ ಹಾಕಿ ಒತ್ತುವರಿ ಹಾಗೂ ಅಕ್ರಮ ಕಟ್ಟಡಗಳನ್ನು ವೀಕ್ಷಿಸಿ ಪಾರ್ಕಿಂಗ್‌ಗೆ ಜಾಗ ಕಲ್ಪಿಸಲು ಅಕ್ರಮ ಕಟ್ಟಡದಾರರಿಗೆ ಸೂಚನೆ ನೀಡಿದರು. 

Advertisement

ಹೀರಾಪುರ, ಆರ್‌ಟಿಒ ಕ್ರಾಸ್‌, ಸೇಡಂ ರಸ್ತೆ, ಮುಸ್ಲಿಂ ಚೌಕ್‌, ಹುಮನಾಬಾದ ಬೇಸ್‌, ನೆಹರು ಗಂಜ್‌ ಸೇರಿದಂತೆ ಇತರ ಪ್ರದೇಶಗಳಲ್ಲಿ ಪ್ರದಕ್ಷಿಣೆ ಹಾಕಿ, ಪಾರ್ಕಿಂಗ್‌ ಸಲುವಾಗಿ ಜಾಗ ಬಿಡದಿರುವ ಕಟ್ಟಡಗಳನ್ನು ವೀಕ್ಷಿಸಿದರು. ಈಗಾಗಲೇ ನೋಟಿಸ್‌ ನೀಡಲಾಗಿದೆ. ಸ್ವಯಂ ಆಗಿ ತೆರವುಗೊಳಿಸಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಒಂದು ವೇಳೆ ಪಾರ್ಕಿಂಗ್‌, ಶೆಟ್‌ಬ್ಯಾಕ್‌ ಕಲ್ಪಿಸದಿದ್ದರೆ ತದನಂತರ ಜಿಲ್ಲಾಡಳಿತವೇ ಕಾರ್ಯಾಚರಣೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ನೊಟೀಸ್‌ಗೆ ಹೆದ್ದರಿದ್ದ ಅಕ್ರಮ ಒತ್ತುವರಿಗಾರರು ಹಾಗೂ ಅಕ್ರಮ ಕಟ್ಟಡದಾರರು, ಆರ್‌ಸಿಯವರ ಈ ಎಚ್ಚರಿಕೆಯಿಂದ ಅಕ್ಷರಶ ಗಾಬರಿಯಾದಂತೆ ಕಂಡು ಬಂತು. ಇಂತಿಷ್ಟು ಸಮಯದೊಳಗೆ ಕಟ್ಟಡದ ಕೆಳಗಿನ ಭಾಗದಲ್ಲಿ ಪಾರ್ಕಿಂಗ್‌ಗೆ ಅವಕಾಶ ನೀಡದಿದ್ದಲ್ಲಿ ತಾವೇ ಜೆಸಿಬಿ ತಂದು ಒಡೆಯಿರಿ ಎಂದು ಕೆಲವರು ಆರ್‌ಸಿ ಅವರಲ್ಲಿ ವಿನಂತಿಸಿ ಸಮಯಾವಕಾಶ ಕೇಳಿದರು. 

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ನಗರದಲ್ಲಿ 500ಕ್ಕೂ  ಹೆಚ್ಚು ಕಟ್ಟಡದಾರರಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಒತ್ತುವರಿ ತೆರವುಗೊಳಿಸುವಂತೆ ನೋಟಿಸ್‌ ನೀಡಲಾಗಿದೆ. ಈಗಾಗಲೇ ಕೆಲವರು ಸ್ವಯಂ ಪ್ರೇರಿತವಾಗಿ  ತೆರವಿಗೆ ಮುಂದಾಗಿದ್ದಾರೆ. ಇನ್ನಷ್ಟು ದಿನ ಜಿಲ್ಲಾಡಳಿತ ಕಾಯ್ದು ನೋಡಲಿದ್ದು, ತದನಂತರ ಕಾರ್ಯಾಚರಣೆಗೆ ಇಳಿಯಲಿದೆ ಎಂದು ಸ್ಪಷ್ಟಪಡಿಸಿದರು. ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಹಾಗೂ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next