Advertisement

ಖರಾಬು ನೋಟುಗಳಿಗೆ ಬದಲಿ ನೋಟು ಇಲ್ಲ

06:00 AM Sep 09, 2018 | |

ನವದೆಹಲಿ: ನಿಮ್ಮಲ್ಲಿ ಹರಿದು ಹೋದ ಅಥವಾ ಮಾಸಿ ಹೋದ 2000 ರೂ. ಅಥವಾ 200 ರೂ. ನೋಟುಗಳು ಇವೆಯೇ? ಅವುಗಳನ್ನು ಬ್ಯಾಂಕುಗಳಲ್ಲಿ ಅಥವಾ ಭಾರತೀಯ ರಿಸರ್ವ್‌ ಬ್ಯಾಂಕಿನಲ್ಲಿ (ಆರ್‌ಬಿಐ) ಬದಲಾಯಿಸಲು ನಿರ್ಧರಿಸಿದ್ದೀರಾ? ಹಾಗಿದ್ದರೆ ಸ್ವಲ್ಪ ತಾಳಿ. 

Advertisement

ನೋಟು ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದ್ದು, ನೀವು ಬದಲಾಯಿಸಲು ಇಚ್ಛಿಸುವ ನೋಟಿನ ಸ್ಥಿತಿಗತಿಯ ಮೇಲೆ ನಿಮಗೆಷ್ಟು ಮೌಲ್ಯದ ಹಣ ನೀಡಬೇಕೆಂದು ನಿರ್ಧರಿಸಲಾಗುತ್ತದೆ. ಅಂದರೆ, ಹರಿದ ನೋಟಿನ ಸ್ಥಿತಿ ಪರವಾಗಿಲ್ಲ ಎನ್ನುವಂತಿದ್ದರೆ ನಿಮಗೆ ಅದರ ಅರ್ಧ ಮೌಲ್ಯದಷ್ಟು ಹಣ ಸಿಗುತ್ತದೆ. ಆದರೆ, ನೋಟಿನ ಸ್ಥಿತಿ ತೀರಾ ಕೆಟ್ಟದಾಗಿದ್ದರೆ ನಿಮಗೆ ಯಾವ ಹೊಸ ನೋಟೂ ಸಿಗುವುದಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನೀವು ಮನೆಗೆ ಮರಳಬೇಕಾಗುತ್ತದೆ. 

ಇಂಥದ್ದೊಂದು ಹೊಸ ನಿಯಮಗಳನ್ನು ಜಾರಿಗೆ ತರಲೆಂದೇ 2009ರ ಆರ್‌ಬಿಐನ ನೋಟು ಬದಲಾವಣೆಯ ನಿಯಮಗಳಲ್ಲಿ ತಿದ್ದುಪಡಿ ತರಲಾಗಿದೆ. ಹಾಗಾಗಿ, 2000 ರೂ. ಹಾಗೂ 200 ರೂ. ಮುಖಬೆಲೆಯ ಹೊಸ ನೋಟುಗಳು ಹಾಗೂ ಆನಂತರ ಜಾರಿಗೊಂಡ 10, 20, 50 ಹಾಗೂ 100 ರೂ. ಮುಖ ಬೆಲೆಯ ಮಹಾತ್ಮಾಗಾಂಧಿ ಸರಣಿಯ ನೋಟುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next