Advertisement

Bantwal ಖೋಟಾ ನೋಟು ವಿನಿಮಯ ದಂಧೆ ಪ್ರಕರಣ ; ಆರೋಪಿಗಳಿಂದ 506 ಖೋಟಾ ನೋಟುಗಳ ವಶ

01:53 AM May 19, 2024 | Team Udayavani |

ಬಂಟ್ವಾಳ: ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿದ್ದ ಕೇರಳದ ಮೂಲದ ತಂಡವನ್ನು ಭೇದಿಸಿದ್ದ ಬಂಟ್ವಾಳ ನಗರ ಪೊಲೀಸರು ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ಪಡೆದು ತಂಡದಿಂದ ಒಟ್ಟು 506 ನೋಟುಗಳನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದೆ.

Advertisement

ಮೇ 10ರಂದು ಬಿ.ಸಿ.ರೋಡಿನಲ್ಲಿ ಹೆದ್ದಾರಿ ಬದಿ ಕೇರಳ ನೋಂದಣಿಯ ಕಾರು ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದು, ಬಂಟ್ವಾಳ ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ಹಾಗೂ ಸಿಬಂದಿ ಕಾರಿನ ಬಳಿ ತೆರಳಿದಾಗ ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಓರ್ವನನ್ನು ಬಂಧಿಸಲಾಗಿತ್ತು. ಬಳಿಕ ಕಾರಿನಲ್ಲಿದ್ದ ಓರ್ವ ಮಹಿಳೆಯನ್ನೂ ಬಂಧಿಸಲಾಯಿತು.

ಕಾಸರಗೋಡಿನ ಕೂಡ್ಲು ಗ್ರಾಮದ ಚೂರಿ ನಿವಾಸಿಗಳಾದ ಮೊಹಮ್ಮದ್‌ ಸಿ.ಎ.(61) ಹಾಗೂ ಕಮರುನ್ನೀಸಾ(41) ಬಂಧಿತ ಆರೋಪಿಗಳಾಗಿದ್ದು, ಪೊಲೀಸ್‌ ಕಾರ್ಯಾಚರಣೆ ವೇಳೆ ಆರೋಪಿ ಶರೀಫ್‌ ಪರಾರಿಯಾಗಿದ್ದನು. ಆರೋಪಿಗಳಿಂದ 500 ರೂ. ಮುಖಬೆಲೆಯ 46 ಖೋಟಾ ನೋಟುಗಳು, 5,300 ರೂ.ನಗದು ಹಾಗೂ 3 ಮೊಬೈಲ್‌ ಗಳನ್ನು ವಶಪಡಿಕೊಂಡಿದ್ದರು.

ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಗಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದು, ಪ್ರಸ್ತುತ ಆರೋಪಿಗಳಿಂದ 500 ರೂ. ಮುಖಬೆಲೆಯ 460 ಖೋಟಾ ನೋಟುಗಳನ್ನು ವಶ ± ‌ಡಿಸಿಕೊಂಡಿದ್ದಾರೆ. ಹಿಂದಿನ ನೋಟುಗಳು ಸೇರಿ ಒಟ್ಟು ವಶಪಡಿಸಿಕೊಂಡ ನೋಟುಗಳ ಸಂಖ್ಯೆ 506 ಆಗಿದೆ.

ಆರೋಪಿಗಳು ಕೇರಳದಿಂದ ಖೋಟಾ ನೋಟುಗಳನ್ನು ತಂದು ಬಿ.ಸಿ.ರೋಡು ಭಾಗದ ಸಣ್ಣ ಅಂಗಡಿಗಳಿಗೆ ತೆರಳಿ ವಿನಿಮಯ ಮಾಡುತ್ತಿರುವ ಸತ್ಯವನ್ನು ಪೊಲೀಸ್‌ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದರು. ಇಲ್ಲಿನ ಸಣ್ಣ ಅಂಗಡಿ ಗಳಿಗೆ ಗ್ರಾಹಕರ ಸೋಗಿನಲ್ಲಿ ತೆರಳಿ ಕಡಿಮೆ ಬೆಲೆಯ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಿ 500 ರೂ. ಮುಖ ಬೆಲೆಯ ಖೋಟಾ ನೋಟುಗಳನ್ನು ನೀಡುತ್ತಿದ್ದರು.

Advertisement

ಬಳಿಕ ಅವರಿಂದ ಬಾಕಿ ಮೊತ್ತವನ್ನು ಪಡೆದು ಅಲ್ಲಿಂದ ಪರಾರಿಯಾಗುತ್ತಿದ್ದರು. ಹೀಗೆ ಹಲವು ಭಾಗಕ್ಕೆ ತೆರಳಿ ತಮ್ಮಲ್ಲಿರುವ ಖೋಟಾ ನೋಟುಗಳನ್ನು ಖಾಲಿ ಮಾಡಿ ಹಿಂದಿರುವ ಯೋಜನೆ ಅವರದ್ದಾಗಿತ್ತು. ಪ್ರಸ್ತುತ ಬಂಟ್ವಾಳ ನಗರ ಪೊಲೀಸರು ಅವರ ಖೋಟಾ ನೋಟು ದಂಧೆಯನ್ನು ಭೇದಿಸಿದ್ದು, ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ಅಡಿಷನಲ್‌ ಎಸ್ಪಿಗಳಾದ ಜಗದೀಶ್‌, ರಾಜೇಂದ್ರ ಕೆ.ವಿ., ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್‌ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಪೊಲೀಸ್‌ ಇ‌ನ್‌ಸ್ಪೆಕ್ಟರ್‌ಅನಂತಪದ್ಮನಾಭ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಖೋಟಾ ನೋಟು ದಂಧೆಯ ತಂಡವನ್ನು ಭೇದಿಸಿದ ಪೊಲೀಸ್‌ ತಂಡಕ್ಕೆ ಎಸ್ಪಿಯವರು ನಗದು ಬಹುಮಾನ ಘೋಷಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next